Uttar Kannada News: ಸಮುದ್ರದ ಅಲೆಗಳ ಹೊಡೆತಕ್ಕೆ ತಡೆಗೋಡೆ ನಾಶ, ಪ್ರವಾಸಿಗರಿಲ್ಲದೆ ಕಡಲತೀರಗಳು ಖಾಲಿ ಖಾಲಿ; ಇಲ್ಲಿದೆ ಪೋಟೋಸ್
Updated on: Jun 13, 2023 | 12:40 PM

ರಾಜ್ಯದ ಕರಾವಳಿಯಲ್ಲಿ ಬಿಪರ್ಜಾಯ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಅಲೆಗಳ ಹೊಡೆತಕ್ಕೆ ಕಡಲ್ಕೊರೆತ ಉಂಟಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಭಾರಿ ಕೊರತೆ ಉಂಟಾಗಿದ್ದು, ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ್ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ನಾಶವಾಗಿದೆ.

ಅಲೆಗಳ ಹೊಡೆತಕ್ಕೆ ಉಸುಕು, ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಪಿಚಿಂಗ್ ಪಕ್ಕದಲ್ಲಿರುವ ಗಿಡಗಳ ಬೇರುಗಳು ಆಚೆ ಬಂದಿವೆ.

ಕಡಲ ಅಲೆಗಳು ಎರಡು ದಿನಗಳ ಕಾಲ ಅಬ್ಬರಿಸಲಿವೆ.

ಬಿಪರ್ ಜಾಯ್ ಚಂಡಮಾರುತದ ಎಪೆಕ್ಟ್ನಿಂದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕಡಲತೀರಗಳು ಖಾಲಿ ಖಾಲಿಯಾಗಿವೆ.

ಗೋಕರ್ಣ, ಮುರುಡೇಶ್ವರ, ಕಾರವಾರ ಕಡಲತೀರಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.

4 ರಿಂದ 5 ಮೀಟರ್ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.

ಸಮುದ್ರ ರಪ್ ಇರುವುದರಿಂದ ಸಂಪ್ರದಾಯಿಕ ಮೀನುಗಾರಿಗೆ ಬಂದ್ ಮಾಡಲಾಗಿದೆ.
























