- Kannada News Photo gallery Prakash Raj wears Whatsapp University T Shirt while watching Daredevil Musthafa Kannada movie
Daredevil Musthafa: ‘ವಾಟ್ಸಪ್ ಯೂನಿವರ್ಸಿಟಿ’ ಬಗ್ಗೆ ಸಂದೇಶ ಇರುವ ಟಿ-ಶರ್ಟ್ ಧರಿಸಿ ‘ಡೇರ್ಡೆವಿಲ್ ಮುಸ್ತಫಾ’ ಚಿತ್ರ ವೀಕ್ಷಿಸಿದ ಪ್ರಕಾಶ್ ರಾಜ್
Prakash Raj: ಖ್ಯಾತ ನಟ ಪ್ರಕಾಶ್ ರಾಜ್ ಅವರು ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅವರು ಧರಿಸಿದ್ಧ ಟಿ-ಶರ್ಟ್ ಗಮನ ಸೆಳೆದಿದೆ.
Updated on: Jun 13, 2023 | 1:52 PM

‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾಗೆ ಜನಮನ್ನಣೆ ಸಿಕ್ಕಿದೆ. ಯಶಸ್ವಿಯಾಗಿ ಈ ಸಿನಿಮಾ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇತ್ತೀಚೆಗೆ ಪ್ರಕಾಶ್ ರಾಜ್ ಕೂಡ ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅವರು ಧರಿಸಿದ್ಧ ಟಿ-ಶರ್ಟ್ ಗಮನ ಸೆಳೆದಿದೆ. ‘ವಾಟ್ಸಪ್ ಯೂನಿವರ್ಸಿಟಿ- ಇಲ್ಲಿ ಸತ್ಯಗಳು ಸತ್ಯವೇ ಅಲ್ಲ’ ಎಂಬ ಬರಹ ಇದರಲ್ಲಿ ಇದೆ.

ವಾಟ್ಸಪ್ನಲ್ಲಿ ಅನೇಕ ತಪ್ಪು ಮಾಹಿತಿ ಹರಿದಾಡುತ್ತವೆ. ಅದನ್ನೇ ಕೆಲವರು ನಿಜ ಎಂದು ನಂಬುತ್ತಾರೆ. ಹಾಗಾಗಿ ಇದನ್ನು ‘ವಾಟ್ಸಪ್ ಯೂನಿವರ್ಸಿಟಿ’ ಎನ್ನಲಾಗುತ್ತಿದೆ. ಈ ಟಿ-ಶರ್ಟ್ ಧರಿಸುವ ಮೂಲಕ ಮೂಲಕ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರಿಗೆ ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾ ಸಖತ್ ಇಷ್ಟ ಆಗಿದೆ. ಇಡೀ ತಂಡದ ಪ್ರಯತ್ನಕ್ಕೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇಂಥ ಸಿನಿಮಾಗಳು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.

ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್ ಭಾರದ್ವಾಜ್, ಆಶಿತ್ ಶ್ರೀವತ್ಸಾ, ಅಭಯ್, ಮಂಡ್ಯ ರಮೇಶ್, ಉಮೇಶ್, ಪ್ರೇರಣಾ ಮುಂತಾದ ಕಲಾವಿದರು ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ.



















