- Kannada News Photo gallery People start searching to know Lavanya Tripathi caste after her engagement with Varun Tej
Lavanya Tripathi: ಚಿರಂಜೀವಿ ಕುಟುಂಬದ ಸೊಸೆ ಆಗಲಿರುವ ಲಾವಣ್ಯ ತ್ರಿಪಾಠಿ ಜಾತಿ ಯಾವುದು ಅಂತ ತಿಳಿಯಲು ಇಂಟರ್ನೆಟ್ನಲ್ಲಿ ಹೆಚ್ಚಿತು ಹುಡುಕಾಟ
Lavanya Tripathi Caste: ಎಂಗೇಜ್ಮೆಂಟ್ ಬಳಿಕ ಲಾವಣ್ಯ ತ್ರಿಪಾಠಿ ಅವರ ಜಾತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಮೂಡಿದೆ. ಇಂಟರ್ನೆಟ್ನಲ್ಲಿ ಅದಕ್ಕಾಗಿ ಅನೇಕರು ಹುಡುಕಾಟ ನಡೆಸಿದ್ದಾರೆ.
Updated on: Jun 13, 2023 | 11:16 AM

ನಟಿ ಲಾವಣ್ಯ ತ್ರಿಪಾಠಿ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ತೆಲುಗು ನಟ ವರುಣ್ ತೇಜ್ ಜೊತೆ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

‘ಮೆಗಾಸ್ಟಾರ್’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರ ವರುಣ್ ತೇಜ್. ಇಂಥ ದೊಡ್ಡ ಕುಟುಂಬಕ್ಕೆ ಲಾವಣ್ಯ ತ್ರಿಪಾಠಿ ಅವರು ಸೊಸೆ ಆಗುತ್ತಿದ್ದಾರೆ. ಇಬ್ಬರ ಜೋಡಿ ಕ್ಯೂಟ್ ಆಗಿದೆ. ಅವರ ಫೋಟೋಗಳು ವೈರಲ್ ಆಗಿವೆ.

ಕಲೆಗೆ ಮತ್ತು ಕಲಾವಿದರಿಗೆ ಜಾತಿ ಇಲ್ಲ ಎಂಬ ಮಾತಿದೆ. ಆದರೆ ನೆಟ್ಟಿಗರು ಮಾತ್ರ ಲಾವಣ್ಯ ತ್ರಿಪಾಠಿ ಅವರ ಜಾತಿ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಎಂಗೇಜ್ಮೆಂಟ್ ಬಳಿಕ ಗೂಗಲ್ನಲ್ಲಿ ಲಾವಣ್ಯರ ಜಾತಿ ಬಗ್ಗೆ ಹುಡುಕಾಟ ಹೆಚ್ಚಾಗಿದೆ.

ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಇರುವ ಒಂದಷ್ಟು ಜನರಿಗೆ ಲಾವಣ್ಯ ತ್ರಿಪಾಠಿ ಅವರ ಜಾತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿದೆ. ಇಂಟರ್ನೆಟ್ನಲ್ಲಿ ಅದಕ್ಕಾಗಿ ಹುಡುಕಾಡಲು ಆರಂಭಿಸಿದ್ದಾರೆ ಎಂಬುದು ಗೊತ್ತಾಗಿದೆ.

ಜಾತಿ ಬಗ್ಗೆ ಲಾವಣ್ಯ ತ್ರಿಪಾಠಿ ಅವರು ಈ ಹಿಂದೆ ಮಾತನಾಡಿದ್ದರು. ತಮಗೆ ಜಾತಿ ಮುಖ್ಯವಲ್ಲ ಎಂದು ಅವರು ಹೇಳಿದ್ದರು. ಈ ಹಿಂದೆ ಕೂಡ ಅನೇಕ ಸೆಲೆಬ್ರಿಟಿಗಳ ಜಾತಿ ತಿಳಿಯಲು ಜನರು ಇಂಟರ್ನೆಟ್ನಲ್ಲಿ ಸರ್ಚ್ ಮಾಡಿದ್ದರು.



















