AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳಿದ ಗಾಯಕಿ ರಿಯಾನಾ

ರಿಯಾನಾ ಅವರು ದೂರದ ಬಾರ್ಬೆಡೋಸ್​ ದೇಶದವರು. ಅವರಿಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಾಂಗ್ ಸೂಪರ್ ಹಿಟ್ ಆಗಿವೆ. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಮದುವೆಯಲ್ಲಿ ರಿಯಾನಾ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳಿದ ಗಾಯಕಿ ರಿಯಾನಾ
ರಿಹಾನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 02, 2024 | 12:05 PM

ಮುಕೇಶ್​ ಅಂಬಾನಿ (Mukesh Ambani) ಅವರ ಮನೆಯಲ್ಲಿ ಶುಭ ಕಾರ್ಯ ಜರುಗುತ್ತಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ಮದುವೆ ಆಗುತ್ತಿದ್ದಾರೆ. ಮದುವೆಗೂ ಮುನ್ನ ಅದ್ದೂರಿಯಾಗಿ ಕಾರ್ಯಕ್ರಮಗಳು ಜರುಗಿವೆ. ದೇಶ ವಿದೇಶದಿಂದ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಈ ಮದುವೆ ಕಾರ್ತಕ್ರಮದಲ್ಲಿ ಇಂಗ್ಲಿಷ್ ಗಾಯಕಿ ರಿಯಾನಾ ಆಗಮಿಸಿದ್ದಾರೆ. ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ತಮ್ಮನ್ನು ಆಮಂತ್ರಿಸಿದ ಮುಕೇಶ್ ಅಂಬಾನಿ ಕುಟುಂಬಕ್ಕೆ ಅವರು ಧನ್ಯವಾದ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ರಿಯಾನಾ ಅವರು ದೂರದ ಬಾರ್ಬೆಡೋಸ್​ ದೇಶದವರು. ಅವರಿಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಾಂಗ್ ಸೂಪರ್ ಹಿಟ್ ಆಗಿವೆ. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಮದುವೆಯಲ್ಲಿ ರಿಯಾನಾ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಪಾಪರಾಜಿ ವೀರಲ್ ಭಯಾನಿ ಅವರು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಿಯಾನಾ ಅವರು ಅಂಬಾನಿ ಕುಟುಂಬಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. ‘ಭಾರತಕ್ಕೆ ನನ್ನನ್ನು ಆಮಂತ್ರಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದ’ ಎಂದು ಹೇಳಿದ್ದಾರೆ. ಅವರು ಭಾರತದಲ್ಲಿ ನೀಡಿದ ಮೊದಲ ಪರ್ಫಾರ್ಮೆನ್ಸ್ ಇದಾಗಿದೆ.

‘ಎಲ್ಲರಿಗೂ ಶುಭಸಂಜೆ. ಇಂದು ಇಲ್ಲಿರೋದಕ್ಕೆ ಖುಷಿ ಆಗುತ್ತಿದೆ. ನಾನು ಈವರೆಗೆ ಭಾರತಕ್ಕೆ ಬಂದಿರಲಿಲ್ಲ. ಅಂಬಾನಿ ಕುಟುಂಬಕ್ಕೆ ಧನ್ಯವಾದ. ಅನಂತ್ ಹಾಗೂ ರಾಧಿಕಾಗೆ ಧನ್ಯವಾದ. ಅವರಿಗೆ ಅಭಿನಂದನೆ’ ಎಂದು ವಿಡಿಯೋದಲ್ಲಿದೆ.

ಇದನ್ನೂ ಓದಿ: ಅಂಬಾನಿ ಮದುವೆಗೆ ಬಂದ ರಿಯಾನಾ ಕೈಯಲ್ಲಿರುವ ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

ಶ್ರೀಮಂತರ ಮದುವೆಗಳಲ್ಲಿ ಸ್ಟಾರ್​ ಸಿಂಗರ್​ಗಳು ಬಂದು ಪರ್ಫಾರ್ಮೆನ್ಸ್ ನೀಡೋದು ಕಾಮನ್. ಈ ರೀತಿ ಬರುವ ಸೆಲೆಬ್ರಿಟಿಗಳಿಗೆ ಅವರು ಭರ್ಜರಿ ಸಂಭಾವನೆ ನೀಡುತ್ತಿದ್ದಾರೆ. ಸಿಂಗರ್​ ರಿಯಾನಾ ಅವರು ಕೇವಲ ಒಂದು ದಿನ ಸಂಗೀತ ಕಾರ್ಯಕ್ರಮ ನೀಡಲು 74 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ವಿಚಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 50 ಕೋಟಿ ರೂಪಾಯಿ ಬಜೆಟ್​ ಮೀರಿದರೆ ಬಿಗ್ ಬಜೆಟ್ ಸಿನಿಮಾ ಎಂದು ಪರಿಗಣಿಸಲ್ಪಡುತ್ತದೆ. ಅಷ್ಟು ದೊಡ್ಡ ಮೊತ್ತವನ್ನು ಅವರು ಒಂದೇ ದಿನಕ್ಕಾಗಿ ಪಡೆದಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಸಿದ್ದಾರ್ಥ್ ಮಲ್ಹೋತ್ರ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಮೊದಲಾದವರು ಭಾಗಿ ಆಗಿದ್ದಾರೆ.

ಬಂದಿತ್ತು ಒಂದು ಟ್ರಕ್ ಲಗೇಜ್

ರಿಯಾನಾ ಅವರ ಜೊತೆ ಒಂದು ಮೂರು ದೊಡ್ಡ ದೊಡ್ಡ ಲಗೇಜ್ ಬ್ಯಾಗ್​ಗಳು ಬಂದವು. ಗುಜರಾತ್​ನ ಜಾಮ್​ನಗರದ ​ ವಿಮಾನ ನಿಲ್ದಾಣದಲ್ಲಿ ರಿಯಾನಾ ಲಗೇಜ್ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವು ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬಂದಿದ್ದವು. ‘ರಿಯಾನಾ ಅವರು ಮನೆಯ ಎಲ್ಲಾ ಲಗೇಜ್ ತೆಗೆದುಕೊಂಡು ಬಂದಿದ್ದಾರೆ. ಬಹುಶಃ ಇಂಡಿಯಾದಲ್ಲೇ ಸೆಟಲ್ ಆಗಬಹುದು’ ಎನ್ನುವ ಕಮೆಂಟ್​ಗಳು ಬಂದಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ