AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಗರ್ ಶ್ರಾಫ್ ಜನ್ಮದಿನ; ಈ ನಟನ ಬಳಿ ಇದೆ ನೂರಾರು ಕೋಟಿ ರೂಪಾಯಿ ಆಸ್ತಿ

ಟೈಗರ್ ಶ್ರಾಫ್ ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರು ಶೇಪ್​ಔಟ್ ಆಗಿ ಕಾಣಿಸಿಕೊಂಡಿದ್ದೇ ಇಲ್ಲ. ಅವರು ಯುವಜನತೆಗೆ ಸಾಕಷ್ಟು ಇಷ್ಟ ಆಗುತ್ತಾರೆ. ಸದಾ ಎನರ್ಜಿಟಿಕ್ ಆಗಿ ಇರುತ್ತಾರೆ. ಸಿಕ್ಸ್ ಪ್ಯಾಕ್ಸ್​ನಲ್ಲಿ ಮಿಂಚುತ್ತಾರೆ. ಇವರಿಗೆ ಸಿನಿಮಾ, ಬ್ರ್ಯಾಂಡ್ ಪ್ರಚಾರದಿಂದ ದೊಡ್ಡ ಮಟ್ಟದ ಹಣ ಹರಿದು ಬರುತ್ತಿದೆ.

ಟೈಗರ್ ಶ್ರಾಫ್ ಜನ್ಮದಿನ; ಈ ನಟನ ಬಳಿ ಇದೆ ನೂರಾರು ಕೋಟಿ ರೂಪಾಯಿ ಆಸ್ತಿ
ಟೈಗರ್ ಶ್ರಾಫ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Mar 02, 2024 | 7:18 AM

Share

ನಟ ಟೈಗರ್ ಶ್ರಾಫ್ (Tiger Shroff) ಅವರಿಗೆ ಇಂದು (ಮಾರ್ಚ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಆ್ಯಕ್ಷನ್ ಸಿನಿಮಾಗಳ ಮೂಲಕ ಟೈಗರ್ ಫೇಮಸ್ ಆಗಿದ್ದಾರೆ. ಜಾಕಿ ಶ್ರಾಫ್ ಮಗ ಎನ್ನುವ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. 2014ರಲ್ಲಿ ರಿಲೀಸ್ ಆದ ‘ಹೀರೋಪಂತಿ’ ಅವರ ನಟನೆಯ ಮೊದಲ ಸಿನಿಮಾ. ಅವರ ಆಸ್ತಿ ಬಗ್ಗೆ, ಅವರು ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.

ಟೈಗರ್ ಶ್ರಾಫ್ ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರು ಶೇಪ್​ಔಟ್ ಆಗಿ ಕಾಣಿಸಿಕೊಂಡಿದ್ದೇ ಇಲ್ಲ. ಅವರು ಯುವಜನತೆಗೆ ಸಾಕಷ್ಟು ಇಷ್ಟ ಆಗುತ್ತಾರೆ. ಸದಾ ಎನರ್ಜಿಟಿಕ್ ಆಗಿ ಇರುತ್ತಾರೆ. ಸಿಕ್ಸ್ ಪ್ಯಾಕ್ಸ್​ನಲ್ಲಿ ಮಿಂಚುತ್ತಾರೆ. ಇವರಿಗೆ ಸಿನಿಮಾ, ಬ್ರ್ಯಾಂಡ್ ಪ್ರಚಾರದಿಂದ ದೊಡ್ಡ ಮಟ್ಟದ ಹಣ ಹರಿದು ಬರುತ್ತಿದೆ.

2023ರ ವರದಿ ಪ್ರಕಾರ ಟೈಗರ್ ಶ್ರಾಫ್ ಅವರ ಒಟ್ಟೂ ಆಸ್ತಿ 250 ಕೋಟಿ ರೂಪಾಯಿ. ಇತ್ತೀಚಿನ ವರ್ಷಗಳಲ್ಲಿ ಅದು ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದೆ. ಇದರಲ್ಲಿ ಬಹುತೇಕ ಹಣವನ್ನು ಅವರು ನಟನೆಯಿಂದಲೇ ಕಮಾಯಿ ಮಾಡಿದ್ದಾರೆ.  ಟೈಗರ್ ಶ್ರಾಫ್ ಅವರು ಪ್ರತಿ ಚಿತ್ರಕ್ಕೆ 20 ಕೋಟಿ ರೂಪಾಯಿ ಪಡೆಯುತ್ತಾರೆ.

ಟೈಗರ್ ಶ್ರಾಫ್ ಅವರು ಸ್ಟಂಟ್​ಗಳನ್ನು ಮಾಡಲು ಇಷ್ಟಪಡುತ್ತಾರೆ. ಸಿನಿಮಾಗಳಲ್ಲಿನ ಬಹುತೇಕ ಸ್ಟಂಟ್​ಗಳನ್ನು ಡ್ಯೂಪ್ ಬಳಸದೆ ಅವರೇ ಮಾಡುತ್ತಾರೆ. ಸಿನಿಮಾ ಮೇಲೆ ಅವರಿಗೆ ಇರುವ ಪ್ರೀತಿಗೆ ಇದು ಉತ್ತಮ ಉದಾಹರಣೆ. ಫಿಟ್ನೆಸ್​ನತ್ತ ಟೈಗರ್ ಶ್ರಾಫ್ ಹೆಚ್ಚು ಗಮನ ಹರಿಸುತ್ತಾರೆ. ಈ ಮೂಲಕ ಅವರು ಅನೇಕರಿಗೆ ಮಾದರಿ ಆಗಿದ್ದಾರೆ.

ಭಾರತ ಚಿತ್ರರಂಗದ ಜೊತೆ ಸಾಕಷ್ಟು ಬಾಂಧವ್ಯ ಇರುವ ಕುಟುಂಬದಲ್ಲಿ ಜನಿಸಿದರು ಟೈಗರ್. ಅವರ ತಂದೆ ಜಾಕಿ ಶ್ರಾಫ್ ಬಾಲಿವುಡ್​ನ ಖ್ಯಾತ ನಟ. ಅವರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ದಶಕಗಳ ಕಾಲ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರ ತಾಯಿ ಆಯೆಷಾ ದತ್ತ ಅವರು ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಟೈಗರ್ ಶ್ರಾಫ್ ಅವರ ಮೂಲ ಹೆಸರು ಜೈ ಹೇಮಂತ್ ಶ್ರಾಫ್.  ಟೈಗರ್ ಅವರ ಸಹೋದರಿ ಕೃಷ್ಣ ಶ್ರಾಫ್ ಅವರು ಚಿತ್ರರಂಗದ ಜೊತೆ ನಂಟು ಹೊಂದಿದ್ದಾರೆ. ಕಿರುಚಿತ್ರ ಹಾಗೂ ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ನಟಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬಳಿ ಕ್ಷಮೆ ಕೇಳಿದ ಫ್ಯಾನ್ಸ್

ಟೈಗರ್ ಶ್ರಾಫ್​ಗೆ ಈಗಿನ್ನು 34 ವರ್ಷ. ಅವರು ಚಿಕ್ಕ ವಯಸ್ಸಿನಿಂದಲೂ ಫಿಟ್ನೆಸ್ ಕಡೆ ಗಮನ ಹರಿಸುತ್ತಾ ಬಂದಿದ್ದಾರೆ. ಫುಟ್​ಬಾಲ್​, ಬಾಸ್ಕೆಟ್​ಬಾಲ್ ಕಡೆ ಅವರಿಗೆ ಆಸಕ್ತಿ ಇದೆ. ಮಾಸ್ ಕಮ್ಯುನಿಕೇಷನ್​ನಲ್ಲಿ ಅವರು ಡಿಗ್ರೀ ಪಡೆದಿದ್ದಾರೆ. ಸದ್ಯ ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಈದ್ ಪ್ರಯುಕ್ತ ಏಪ್ರಿಲ್ 11ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ