‘ಬಾಪ್ ಆಫ್ ಆಲ್ ಫಿಲ್ಮ್ಸ್’ ನಲ್ಲಿ ಸಂಜಯ್ ದತ್, ಮಿಥುನ್ ಚಕ್ರವರ್ತಿ, ಜಾಕಿ ಶ್ರಾಫ್ ಮತ್ತು ಸನ್ನಿ ಡಿಯೋಲ್
ಇನ್ನೂ ಹೆಸರಿಡದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನನ್ನು ಸಂಜಯ್ ದತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಬುಧವಾರ (ನವೆಂಬರ್ 10) ಸಂಜಯ್ ದತ್ ತಮ್ಮ ಹೊಸ ಚಿತ್ರವನ್ನ ಘೋಷಿಸಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದ ‘ಬಾಪ್ ಆಫ್ ಆಲ್ ಫಿಲ್ಮ್ಸ್’ ಎಂದು ಬರೆದುಕೊಳ್ಳುವ ಮೂಲಕ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನ್ನು ಸಂಜಯ್ ದತ್ ತಮ್ಮ ಇನ್ಸ್ಟಾಗ್ರಾಮ್ನ್ಲ್ಲಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸಂಚಲನ ಮೂಡಿಸಿದೆ. ಇದರಲ್ಲಿ ಮಿಥುನ್ ಚಕ್ರವರ್ತಿ, ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಸನ್ನಿ ಡಿಯೋಲ್ ಒಟ್ಟಾಗಿ ಕಾಣಿಸಿಕೊಂಡಿದ್ದು, ಅಭಿಷೇಕ್ ಬಚ್ಚನ್, ವರುಣ್ ಧವನ್ ಬೈಸೆಪ್ಸ್ ಎಮೋಜಿಯನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇನ್ನು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ಅವರು ಈ ಪೋಸ್ಟ್ರ್ನನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿನಿಮಾವು ‘ಆ್ಯಕ್ಷನ್ ಮತ್ತು ಎಂಟರ್ಟೈನ್ಮೆಂಟ್ನಿಂದ ಕೂಡಿರುತ್ತದೆ ಎಂದಿದ್ದಾರೆ. ಹೈವೇ ಮತ್ತು ತನು ವೆಡ್ಸ್ ಮನು ರಿಟರ್ನ್ಸ್ ನಂತಹ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ವಿವೇಕ್ ಚೌಹಾಣ್ ಅವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದು, ಜೀ ಸ್ಟುಡಿಯೋಸ್, ಅಹ್ಮದ್ ಖಾನ್ ಹಾಗೂ ಅವರ ಪತ್ನಿ ಶೈರಾ ಅಹ್ಮದ್ ಖಾನ್ ನಿರ್ಮಾಣ ಮಾಡಲಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ
ಇನ್ನು ಮಿಥುನ್ ಚಕ್ರವರ್ತಿ ಅವರು ಮೂವರೊಂದಿಗು ಹಲವಾರು ವರ್ಷಗಳಿಂದ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕಿ ಶ್ರಾಫ್ ಅವರೊಂದಿಗೆ ‘ಶಪತ್’, ‘ಗಂಗಾ ಕಿ ಕಸಮ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಸಂಜಯ್ ದತ್ ಮತ್ತು ಮಿಥುನ್ ಚಕ್ರವರ್ತಿ ಅವರು ‘ಲಕ್’, ‘ಇಲಾಕಾ’ ಮತ್ತು ‘ಜೀತೆ ಹೈ ಶಾನ್ ಸೆ’ ಚಿತ್ರಗಳಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದಾರೆ. 2008 ರಲ್ಲಿ ಬಿಡುಗಡೆಯಾದ ‘ಹೀರೋಸ್’ನಲ್ಲಿ ಸನ್ನಿ ಡಿಯೋಲ್ ಮತ್ತು ಮಿಥುನ್ ಕಾಣಿಸಿಕೊಂಡಿದ್ದಾರೆ.
ಇನ್ನು ಸಂಜಯ್ ದತ್ ‘ಕೆ.ಜಿ.ಎಫ್-2’ನಲ್ಲಿ ನಟಿಸಿದ್ದು ಈ ಚಿತ್ರವು ಅವರಿಗೆ ದೊಡ್ಡ ಮಟ್ಟದ ಸಕ್ಸ್ಸ್ ನೀಡಿತು. ಇದಾದ ಬಳಿಕ ಮೂರ್ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ದೊಡ್ಡ ಮಟ್ಟದ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ ಸಂಜಯ್ ದತ್.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ