AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬಳಿ ಕ್ಷಮೆ ಕೇಳಿದ ಫ್ಯಾನ್ಸ್

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಪ್ರಚಾರಕ್ಕಾಗಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಲಖನೌಗೆ ತೆರಳಿದ್ದರು. ಈ ವೇಳೆ ಸಾಕಷ್ಟು ಅಹಿತಕರ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬಳಿ ಫ್ಯಾನ್ಸ್ ಕ್ಷಮೆ ಕೇಳಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬಳಿ ಕ್ಷಮೆ ಕೇಳಿದ ಫ್ಯಾನ್ಸ್
ಅಕ್ಷಯ್-ಟೈಗರ್
ರಾಜೇಶ್ ದುಗ್ಗುಮನೆ
|

Updated on:Feb 28, 2024 | 7:38 AM

Share

ಅಕ್ಷಯ್ ಕುಮಾರ್ (Akshay Kumar) ಹಾಗೂ ಟೈಗರ್ ಶ್ರಾಫ್ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ಅವರು ಈ ವರ್ಷದ ಮೊದಲ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗೆ ತಂಡ ಲಖನೌಗೆ ತೆರಳಿತ್ತು. ಅಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆದವು. ಈ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬಳಿ ಫ್ಯಾನ್ಸ್ ಕ್ಷಮೆ ಕೇಳಿದ್ದಾರೆ.

ಲಖನೌನಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ ಈವೆಂಟ್ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಸೇರಿದ್ದರು. ಈ ಮಧ್ಯೆ ಕೆಲವು ಕಿಡಿಗೇಡಿಗಳು ಚಪ್ಪಲಿ ಎಸೆಯಲು ಆರಂಭಿಸಿದರು. ಚಪ್ಪಲಿ ಏಟು ತಿಂದ ಕೆಲವರು ಸಿಟ್ಟಿಗೆದ್ದರು. ಹೀಗಾಗಿ, ಕಾಲ್ತುಳಿತ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಟಿ ಚಾರ್ಜ್ ಕೂಡ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಹಾಗೂ ಟೈಗರ್ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರ ನಡೆದಿದ್ದಾರೆ.

ಲಾಠಿ ಚಾರ್ಜ್ ಮಾಡಿದ ವಿಡಿಯೋ..

ಈ ಘಟನೆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡಿವೆ. ಪಕ್ಕಾ ಅಕ್ಷಯ್ ಕುಮಾರ್ ಅಭಿಮಾನಿಗಳು ಘಟನೆ ಸಂಬಂಧ ಕ್ಷಮೆ ಕೇಳಿದ್ದಾರೆ. ‘ಅಕ್ಷಯ್ ಕುಮಾರ್ ಅವರೇ ನಮ್ಮನ್ನು ಕ್ಷಮಿಸಿ. ಮುಂದಿನ ಬಾರಿ ಒಳ್ಳೆಯ ಜಾಗವನ್ನು ಆಯ್ಕೆ ಮಾಡಿ’ ಎಂದು ಕೋರಿದ್ದಾರೆ. ಇನ್ನೂ ಕೆಲವರು ‘ಅಕ್ಷಯ್ ಹಾಗೂ ಟೈಗರ್ ಅವರಿಗೆ ಏನೂ ಆಗಿಲ್ಲ ಎಂಬುದು ಖುಷಿಯ ವಿಚಾರ. ಈ ಚಿತ್ರವನ್ನು ನಾವು ಖಂಡಿತವಾಗಿಯೂ ನೋಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್​ನ ನೋಡಲು ಹೋಗಿ ಲಾಠಿ ಏಟು ತಿಂದ ಅಭಿಮಾನಿಗಳು; ಇಲ್ಲಿದೆ ವಿಡಿಯೋ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಇದೇ ಮೊದಲ ಬಾರಿಗೆ ಸಿನಿಮಾ ಒಂದಕ್ಕಾಗಿ ಕೈ ಜೋಡಿಸಿದ್ದಾರೆ. ಟೈಗರ್ ಸಿನಿಮಾಗಳಲ್ಲಿ ಆ್ಯಕ್ಷನ್​ಗೆ ಕೊರತೆ ಇರುವುದಿಲ್ಲ. ಈ ಸಿನಿಮಾದಲ್ಲೂ ಭರ್ಜರಿ ಫೈಟಿಂಗ್ ಇರಲಿದೆ ಎನ್ನಲಾಗುತ್ತಿದೆ. ಇವರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Wed, 28 February 24