ರಾಜ್ ಕುಂದ್ರಾ ಗೆಟಪ್​ನಲ್ಲಿ ಏರ್​ಪೋರ್ಟ್​ಗೆ ಬಂದ ರಣವೀರ್ ಸಿಂಗ್

‘ಡಾನ್ 3’ ಸಿನಿಮಾದಲ್ಲಿ ರಣವೀರ್ ಸಿಂಗ್ ಲುಕ್ ಯಾವ ರೀತಿಯಲ್ಲಿ ಇದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಇನ್ನೂ ತಿಳಿದಿಲ್ಲ. ಹೀಗಾಗಿ ಅವರು ಈ ರೀತಿಯ ಅವತಾರದಲ್ಲಿ ಬಂದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅವರ ಲುಕ್ ಆದಷ್ಟು ಬೇಗ ರಿವೀಲ್ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  

ರಾಜ್ ಕುಂದ್ರಾ ಗೆಟಪ್​ನಲ್ಲಿ ಏರ್​ಪೋರ್ಟ್​ಗೆ ಬಂದ ರಣವೀರ್ ಸಿಂಗ್
ರಾಜ್​ ಕುಂದ್ರಾ-ರಣವೀರ್
Follow us
ರಾಜೇಶ್ ದುಗ್ಗುಮನೆ
|

Updated on: Feb 28, 2024 | 9:03 AM

ರಣವೀರ್ ಸಿಂಗ್ (Ranveer Singh) ಅವರು ಭಿನ್ನ ಶೈಲಿಯಲ್ಲಿ ಎಲ್ಲ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಡುತ್ತಾರೆ. ಇತ್ತೀಚೆಗೆ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರು. ಇದಕ್ಕೆ ಕಾರಣ ಆಗಿದ್ದು ‘ಡಾನ್ 3’ ಸಿನಿಮಾ ಎನ್ನುತ್ತಿವೆ ಮೂಲಗಳು. ಫರ್ಹಾನ್ ಅಖ್ತರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಡಾನ್ ಪಾತ್ರ ಮಾಡುತ್ತಿದ್ದಾರೆ. ಅವರ ಹೊಸ ಗೆಟಪ್​ನ ಅನೇಕರು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಹೋಲಿಕೆ ಮಾಡುತ್ತಿದ್ದಾರೆ.

ಈಗಾಗಲೇ ‘ಡಾನ್ 3’ ಸಿನಿಮಾ ಶೂಟಿಂಗ್ ಆರಂಭ ಆಗಿದೆ ಎನ್ನಲಾಗುತ್ತಿದೆ. ಈ ಚಿತ್ರದ ಲುಕ್ ರಿವೀಲ್ ಆಗಬಾರದು ಎನ್ನುವ ಕಾರಣಕ್ಕೆ ರಣವೀರ್ ಸಿಂಗ್ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ. ಹೇರ್​ಸ್ಟೈಲ್ ಕಾಣಬಾರದು ಎನ್ನುವುದಕ್ಕೆ ಅದನ್ನೂ ಮುಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಪಾಪರಾಜಿಗಳು ಈ ವಿಡಿಯೋನ ಹಂಚಿಕೊಳ್ಳುತ್ತಿದ್ದಾರೆ.

‘ಡಾನ್ 3’ ಸಿನಿಮಾದಲ್ಲಿ ರಣವೀರ್ ಸಿಂಗ್ ಲುಕ್ ಯಾವ ರೀತಿಯಲ್ಲಿ ಇರಲಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಇನ್ನೂ ತಿಳಿದಿಲ್ಲ. ಈ ಕಾರಣಕ್ಕೆ ಅವರು ಈ ರೀತಿಯ ಅವತಾರದಲ್ಲಿ ಬಂದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅವರ ಲುಕ್ ಆದಷ್ಟು ಬೇಗ ರಿವೀಲ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ರಣವೀರ್ ಸಿಂಗ್ ಲುಕ್

‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ಶಾರುಖ್ ಖಾನ್ ಅವರು ಡಾನ್ ಪಾತ್ರ ಮಾಡಿದ್ದರು. ಈಗ ‘ಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಶಾರುಖ್ ಖಾನ್ ಅಭಿಮಾನಿಗಳಿಗೆ ಖುಷಿ ಇಲ್ಲ. ಆದರೆ, ರಣವೀರ್ ಸಿಂಗ್ ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಮಿತಿ ಮೀರಿತು ‘ಡಾನ್ 3’ ಸಿನಿಮಾ ಬಜೆಟ್; ಇಲ್ಲಿದೆ ವಿವರ

‘ಡಾನ್’ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು. ಅವರು ಈಗ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅವರು ಸದ್ಯಕ್ಕಂತೂ ಬಾಲಿವುಡ್​ಗೆ ಮರಳುವ ಸೂಚನೆ ಇಲ್ಲ. ಹೀಗಾಗಿ, ಅವರ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ. ಫರ್ಹಾನ್ ಅಖ್ತರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ