AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಶ್ಚಿಯನ್​-ಸಿಖ್​ ಸಂಪ್ರದಾಯದಂತೆ ತಾಪ್ಸಿ ಪನ್ನು ಮದುವೆ; ಬಾಲಿವುಡ್​ ಮಂದಿಗೆ ಆಹ್ವಾನ ಇಲ್ಲ?

ಚಿತ್ರರಂಗದಲ್ಲಿ ಇರುವವರನ್ನು ಮದುವೆ ಆಗಬಾರದು ಎಂಬುದು ತಾಪ್ಸಿ ಪನ್ನು ಅವರ ನಿರ್ಧಾರ. ಹಾಗಾಗಿ ಅವರು ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಜೊತೆ ಮದುವೆ ಆಗುತ್ತಿದ್ದಾರೆ. ಕಳೆದ 10 ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಾಯಸ್​ ಬೋ ಪ್ರೀತಿಸುತ್ತಿದ್ದಾರೆ. ಕ್ರಿಶ್ಚಿಯನ್​ ಹಾಗೂ ಸಿಖ್​ ಸಂಪ್ರದಾಯದಂತೆ ಅವರು ಮದುವೆ ಆಗಲಿದ್ದಾರೆ.

ಕ್ರಿಶ್ಚಿಯನ್​-ಸಿಖ್​ ಸಂಪ್ರದಾಯದಂತೆ ತಾಪ್ಸಿ ಪನ್ನು ಮದುವೆ; ಬಾಲಿವುಡ್​ ಮಂದಿಗೆ ಆಹ್ವಾನ ಇಲ್ಲ?
ಮಥಾಯಸ್​ ಬೋ, ತಾಪ್ಸಿ ಪನ್ನು
Follow us
ಮದನ್​ ಕುಮಾರ್​
|

Updated on: Feb 28, 2024 | 11:22 AM

ಖ್ಯಾತ ನಟಿ ತಾಪ್ಸಿ ಪನ್ನು (Taapsee Pannu) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರವೇ ಅವರು ಮದುವೆ ಆಗಲಿದ್ದಾರೆ. 10 ವರ್ಷಗಳಿಂದ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಈಗ ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ. ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ (Mathias Boe) ಅವರನ್ನು ತಾಪ್ಸಿ ಪನ್ನು ಅವರು ಪ್ರೀತಿಸುತ್ತಿರುವುದು ಗೊತ್ತಿರುವ ವಿಚಾರ. ಈಗ ಅವರು ಮದುವೆ (Taapsee Pannu Marriage) ಆಗಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಅಚ್ಚರಿಯ ವಿಚಾರ ಏನೆಂದರೆ, ಈ ಮದುವೆಗೆ ಬಾಲಿವುಡ್​ ಮಂದಿಯನ್ನು ಆಹ್ವಾನಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ತಾಪ್ಸಿ ಪನ್ನು ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಸಾಕಷ್ಟು ಮಂದಿ ಸ್ನೇಹಿತರು ಇದ್ದಾರೆ. ಹಾಗಿದ್ದರೂ ಕೂಡ ತಮ್ಮ ಮದುವೆಗೆ ಅವರು ಯಾವುದೇ ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಿಲ್ಲ ಎನ್ನಲಾಗಿದೆ. ಕೇವಲ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಲು ಅವರು ನಿರ್ಧರಿಸಿದ್ದಾರೆ. ಉದಯಪುರದಲ್ಲಿ ಅವರ ಮದುವೆ ನಡೆಯಲಿದೆ. ಮದುವೆಯ ಬಗ್ಗೆ ತಾಪ್ಸಿ ಪನ್ನು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.

ಮಥಾಯಸ್​ ಬೋ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ತಾಪ್ಸಿ ಪನ್ನು ಅವರದ್ದು ಸಿಖ್​ ಧರ್ಮ. ಹಾಗಾಗಿ ಅವರಿಬ್ಬರ ಮದುವೆಯನ್ನು ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಸಲು ನಿರ್ಧರಿಸಲಾಗಿದೆ. ತಮ್ಮ ಮದುವೆ ಯಾವ ರೀತಿ ನಡೆಯಬೇಕು ಎಂದು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಪನ್ನು ಹೇಳಿಕೊಂಡಿದ್ದರು. ‘ಒಂದು ದಿನದ ಮದುವೆ. ಅದರಲ್ಲಿ ಯಾವುದೇ ಡ್ರಾಮಾ ಇರಬಾರದು. ಯಾಕೆಂದರೆ, ನನ್ನ ವೃತ್ತಿ ಜೀವನದಲ್ಲಿ ಈಗಾಗಲೇ ಡ್ರಾಮಾ ತುಂಬಿದೆ’ ಎಂದು ಅವರು ಹೇಳಿದ್ದರು. ಅಲ್ಲದೇ ತಡರಾತ್ರಿವರೆಗೆ ನಡೆಯುವ ಸಂಪ್ರದಾಯಗಳು ಕೂಡ ಇರಬಾರದು ಎಂದು ತಾಪ್ಸಿ ಪನ್ನು ಹೇಳಿದ್ದರು.

ಇದನ್ನೂ ಓದಿ: ‘ನಾನು ಇನ್ನೂ ಪ್ರೆಗ್ನೆಂಟ್​ ಆಗಿಲ್ಲ’: ಮದುವೆ ಯಾವಾಗ ಅಂತ ಕೇಳಿದ್ದಕ್ಕೆ ಈ ಥರ ಉತ್ತರ ನೀಡಿದ ತಾಪ್ಸಿ ಪನ್ನು

ತಾಪ್ಸಿ ಪನ್ನು ಅವರಿಗೆ ಈಗ 36 ವರ್ಷ ವಯಸ್ಸು. 2010ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. ಶಾರುಖ್​ ಖಾನ್​, ಅಕ್ಷಯ್​ ಕುಮಾರ್​, ವಿಜಯ್​ ಸೇತುಪತಿ ಅವರಂತಹ ಸ್ಟಾರ್​ ನಟರ ಜೊತೆ ಅವರು ಅಭಿನಯಿಸಿದ್ದಾರೆ. ಚಿತ್ರರಂಗದ ಹೊರಗಿರುವ ವ್ಯಕ್ತಿಯನ್ನೇ ಮದುವೆ ಆಗಬೇಕು ಎಂಬುದು ತಾಪ್ಸಿ ಪನ್ನು ಅವರ ಆಸೆ. ಅದರಂತೆ ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಜೊತೆ ಅವರು ಮದುವೆ ಆಗಲು ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ