‘ಅನಿಮಲ್’ ಚಿತ್ರದಲ್ಲಿ ತೃಪ್ತಿ ದಿಮ್ರಿ ಬೋಲ್ಡ್ ದೃಶ್ಯ ನೋಡಿ ಪಾಲಕರ ರಿಯಾಕ್ಷನ್ ಹೇಗಿತ್ತು?

ತೃಪ್ತಿ ದಿಮ್ರಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2017ರಲ್ಲಿ. ಅಲ್ಲಿಂದ ಅವರ ವೃತ್ತಿ ಜೀವನ ಕುಟುಂತ್ತಲೇ ಸಾಗುತ್ತಿತ್ತು. 2023ರಲ್ಲಿ ರಿಲೀಸ್ ಆದ ‘ಅನಿಮಲ್’ ಚಿತ್ರದಿಂದ ಅವರ ಬದುಕು ಬದಲಾಯಿತು. ಅವರ ಬೇಡಿಕೆ ಹೆಚ್ಚಿದೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.  

‘ಅನಿಮಲ್’ ಚಿತ್ರದಲ್ಲಿ ತೃಪ್ತಿ ದಿಮ್ರಿ ಬೋಲ್ಡ್ ದೃಶ್ಯ ನೋಡಿ ಪಾಲಕರ ರಿಯಾಕ್ಷನ್ ಹೇಗಿತ್ತು?
ತೃಪ್ತಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 01, 2024 | 1:10 PM

‘ನಟಿ ತೃಪ್ತಿ ದಿಮ್ರಿ (Triptii Dimri ) ಅವರ ವೃತ್ತಿಜೀವನಕ್ಕೆ ಮೈಲೇಜ್ ಕೊಟ್ಟ ಸಿನಿಮಾ ‘ಅನಿಮಲ್’. ರಣಬೀರ್ ಕಪೂರ್ ನಟನೆಯ ಈ ಸಿನಿಮಾ 700 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.  ಈ ಚಿತ್ರದಲ್ಲಿ ಕೆಲವೇ ಹೊತ್ತು ಅವರು ಕಾಣಿಸಿಕೊಂಡರೂ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಹಿಂಬಾಲಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ಮಧ್ಯೆ ಅವರು ಬೋಲ್ಡ್ ದೃಶ್ಯಗಳ ಕಾರಣಕ್ಕೆ ಟ್ರೋಲ್ ಆಗಿದ್ದೂ ಇದೆ. ಇಷ್ಟು ದಿನ ಈ ವಿಚಾರದಲ್ಲಿ ಅವರು ಮೌನ ವಹಿಸಿದ್ದರು. ಈಗ ಈ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್​ಗಳಿಂದ ತಮಗೆ ಯಾವುದೇ ತೊಂದರೆ ಆಗಿಲ್ಲ ಎಂದಿದ್ದಾರೆ ಅವರು.

ತೃಪ್ತಿ ಅವರು ‘ಅನಿಮಲ್’ ಸಿನಿಮಾ ಒಪ್ಪಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಅತಿಥಿ ಪಾತ್ರವಾದರೂ ಅದು ಆಸಕ್ತಿಕರ ಎನಿಸಿತ್ತಂತೆ. ಹೀಗಾಗಿ, ಅವರು ಈ ಪಾತ್ರ ಒಪ್ಪಿ ನಟಿಸಿದ್ದಾರೆ. ‘ನಾನು ಈ ಚಿತ್ರವನ್ನು ಏಕೆ ಮಾಡುತ್ತಿದ್ದೇನೆ ಎಂಬುದಕ್ಕೆ ನನಗೆ ಕಾರಣಗಳು ಗೊತ್ತಿವೆ. ಸಂದೀಪ್ ರೆಡ್ಡಿ ವಂಗ ಅವರು ಸಣ್ಣ ಪಾತ್ರ ಎಂದು ಮೊದಲೇ ಮಾಹಿತಿ ನಿಡಿದ್ದರು. ಆದರೆ, ನನಗೆ ಪಾತ್ರ ಆಸಕ್ತಿಕರವಾಗಿದೆ ಎನಿಸಿತು. ಪ್ರೇಕ್ಷಕರು ಏನು ಹೇಳಬಹುದು ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಕಲಾವಿದಳಾಗಿ ನಾನು ಏನನ್ನು ಮಾಡಲು ಬಯಸಿದ್ದೆನೋ ಅದನ್ನು ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ ತೃಪ್ತಿ.

‘ನನ್ನ ಕಂಫರ್ಟ್​ಜೋನ್​ನ ಮೀರಿದ ಪಾತ್ರಗಳನ್ನು ಮಾಡಲು ನನಗೆ ಇಷ್ಟ. ಪಾತ್ರಗಳನ್ನು ಮಾಡುವಾಗ ಹಲವು ಸಲಹೆಗಳು ಬರುತ್ತವೆ. ನಾನು ಎಲ್ಲವನ್ನೂ ಕೇಳುತ್ತೇನೆ. ನನಗೆ ಸರಿ ಅನಿಸಿದ್ದನ್ನು ಮಾಡುತ್ತೇನೆ. ನಾನು ತಪ್ಪು ಮಾಡಬಹುದು. ಅದಕ್ಕೆ ಅವಕಾಶ ಇದೆ’ ಎಂದಿದ್ದಾರೆ ತೃಪ್ತಿ.

‘ಸಿನಿಮಾದಲ್ಲಿ ನನ್ನ ಬೋಲ್ಡ್ ದೃಶ್ಯ ಬಂದಾಗ ಪಾಲಕರು ಬಡಬಡಿಸಿದರು. ಸಿನಿಮಾದಲ್ಲಿ ಆ ದೃಶ್ಯ ಏಕೆ ಮುಖ್ಯ ಎಂಬುದಕ್ಕೆ ದೊಡ್ಡ ಚರ್ಚೆಯೇ ಆಯಿತು. ನನ್ನ ಬಗ್ಗೆ ಪಾಲಕರಿಗೆ ಹೆಮ್ಮೆ ಇದೆ ಅನ್ನೋದು ನನಗೆ ಗೊತ್ತು’ ಎಂದಿದ್ದಾರೆ ತೃಪ್ತಿ ದಿಮ್ರಿ.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ಸುಂದರಿ ತೃಪ್ತಿ ದಿಮ್ರಿಗೆ ಈಗ 30ರ ಪ್ರಾಯ

ತೃಪ್ತಿ ದಿಮ್ರಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 2017ರಲ್ಲಿ. ಅಲ್ಲಿಂದ ಅವರ ವೃತ್ತಿ ಜೀವನ ಕುಟುಂತ್ತಲೇ ಸಾಗುತ್ತಿತ್ತು. 2023ರಲ್ಲಿ ಬಂದ ‘ಅನಿಮಲ್’ ಚಿತ್ರದಿಂದ ಅವರ ಬದುಕು ಬದಲಾಯಿತು. ಅವರ ಬೇಡಿಕೆ ಹೆಚ್ಚಿದೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ‘ಭೂಲ್ ಬುಲಯ್ಯ 3’ ಚಿತ್ರಕ್ಕೆ ಅವರು ಆಯ್ಕೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ