Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಗ್ನೆನ್ಸಿ ಸುದ್ದಿ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ; ಸಂಭ್ರಮಿಸಿದ ರಣವೀರ್

ಸೆಲೆಬ್ರಿಟಿಗಳು ಕಾಣಿಸಿಕೊಂಡಾಗ ಫ್ಯಾನ್ಸ್ ಮುತ್ತಿಕೊಳ್ಳೋದು ಸಹಜ. ಅದೇ ರೀತಿ ರಣವೀರ್ ಸಿಂಗ್ ಅವರು ಆಗಮಿಸುತ್ತಿದ್ದಂತೆ ಪಾಪರಾಜಿಗಳು ಹಾಗೂ ಅಭಿಮಾನಿಗಳು ಆಗಮಿಸಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಇದರಿಂದ ಖುಷಿಯಾದ ರಣವೀರ್ ಸಿಂಗ್ ಅವರು ಹಗ್ ಕೊಟ್ಟಿದ್ದಾರೆ. ತಮಗೆ ಶುಭಕೋರಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ.

ಪ್ರೆಗ್ನೆನ್ಸಿ ಸುದ್ದಿ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ; ಸಂಭ್ರಮಿಸಿದ ರಣವೀರ್
ರಣವೀರ್-ದೀಪಿಕಾ
Follow us
ರಾಜೇಶ್ ದುಗ್ಗುಮನೆ
|

Updated on: Mar 01, 2024 | 8:52 AM

ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಫೆಬ್ರವರಿ 29ರಂದು ದೀಪಿಕಾ ತಾವು ಪ್ರೆಗ್ನೆಂಟ್ ಎನ್ನುವ ವಿಚಾರ ರಿವೀಲ್ ಮಾಡಿದ್ದಾರೆ. ಇದಾದ ನಂತರ ಮೊದಲ ಬಾರಿಗೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿ ಹಾಗೂ ನೀತು ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮಕ್ಕಳ ಮದುವೆ ಸಮಾರಂಭಕ್ಕೆ ಈ ದಂಪತಿ ಬಂದಿದ್ದಾರೆ. ಈ ವೇಳೆ ರಣವೀರ್ ಸಿಂಗ್ ಸಂಭ್ರಮಿಸಿದ್ದಾರೆ.

ಸೆಲೆಬ್ರಿಟಿಗಳು ಕಾಣಿಸಿಕೊಂಡಾಗ ಫ್ಯಾನ್ಸ್ ಮುತ್ತಿಕೊಳ್ಳೋದು ಸಹಜ. ಅದೇ ರೀತಿ ರಣವೀರ್ ಸಿಂಗ್ ಅವರು ಆಗಮಿಸುತ್ತಿದ್ದಂತೆ ಪಾಪರಾಜಿಗಳು ಹಾಗೂ ಅಭಿಮಾನಿಗಳು ಆಗಮಿಸಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಇದರಿಂದ ಖುಷಿಯಾದ ರಣವೀರ್ ಸಿಂಗ್ ಅವರು ಹಗ್ ಕೊಟ್ಟಿದ್ದಾರೆ. ತಮಗೆ ಶುಭಕೋರಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿ ಇರುವ ಅವರು ಸಖತ್ ಖುಷಿಯಿಂದ ಎಂಜಾಯ್ ಮಾಡಿದ್ದಾರೆ.

ರಣವೀರ್ ಬಗ್ಗೆ ಮಾಡಿದ ಪೋಸ್ಟ್

Wholesome video. Ranveer seems ecstatic. The way he’s greeting the paps! byu/thetrollslayer1508 inBollyBlindsNGossip

ರಣವೀರ್ ಸಿಂಗ್ ಸದಾ ಜೋಶ್​ನಲ್ಲಿ ಇರುತ್ತಾರೆ. ಈಗಂತೂ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವುದರಿಂದ ಅವರ ಸಂಭ್ರಮ ಹೆಚ್ಚಾಗಿದೆ. ‘ಅವರ ಸಂತೋಷ ನೋಡಲು ಖುಷಿ ಆಗುತ್ತಿದೆ’ ಎಂದಿದ್ದಾರೆ ಫ್ಯಾನ್ಸ್. ‘ರಣವೀರ್ ಸಿಂಗ್ ಎನರ್ಜಿ ಮತ್ತಷ್ಟು ಹೆಚ್ಚಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾನ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ To ಕಂಗನಾ ರಣಾವತ್: ಏರ್​ಫೋರ್ಸ್​ ಪೈಲಟ್ ಪಾತ್ರ ಮಾಡಿದ ನಟಿಯರಿವರು

ದೀಪಿಕಾ ಪಡುಕೋಣೆ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗಿದೆ. ಅವರು ಸದ್ಯಕ್ಕಂತೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಇನ್ನು ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಲಿದ್ದಾರೆ. ಫೆಬ್ರವರಿ 29ರಂದು ದೀಪಿಕಾ ಹಾಗೂ ರಣವೀರ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಸೆಪ್ಟೆಂಬರ್ 2024 ಎಂದು ಬರೆದುಕೊಂಡಿದ್ದ ಅವರು ಮಗುವಿನ ಬಟ್ಟೆ, ಶ್ಯೂಗಳ ಫೋಟೋ ಇಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ