ಅಂಬಾನಿ ಪ್ರೀ ವೆಡ್ಡಿಂಗ್ ಸಂಭ್ರಮಕ್ಕೆ ಪ್ರಿಯಾಂಕಾ ಚೋಪ್ರಾ ಬರಲಿಲ್ಲ ಏಕೆ?

Priyanka Chopra: ಅನಂತ್ ಅಂಬಾನಿ-ರಾಧಿಕಾ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಹಲವು ಬಾಲಿವುಡ್ ತಾರೆಯರು ಭಾಗಿಯಾಗಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದಾರೆ. ಕಾರಣವೇನು?

ಅಂಬಾನಿ ಪ್ರೀ ವೆಡ್ಡಿಂಗ್ ಸಂಭ್ರಮಕ್ಕೆ ಪ್ರಿಯಾಂಕಾ ಚೋಪ್ರಾ ಬರಲಿಲ್ಲ ಏಕೆ?
Follow us
ಮಂಜುನಾಥ ಸಿ.
|

Updated on: Mar 05, 2024 | 1:49 PM

ಅನಂತ್ ಅಂಬಾನಿ-ರಾಧಿಕಾರ (Anant Ambani) ಪ್ರೀ ವೆಡ್ಡಿಂಗ್ ಸಂಭ್ರಮ ಜೋರಾಗಿ ನಡೆಯುತ್ತಿದೆ. ಬಾಲಿವುಡ್​ ಸೂಪರ್​ಸ್ಟಾರ್​ಗಳೆಲ್ಲ ಶೂಟಿಂಗ್​ಗೆ ರಜೆ ಹಾಕಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಖಾನ್​ಗಳು, ಕಪೂರ್​ಗಳು ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್​ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಹಲವು ತಾರೆಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಆದರೆ ಪ್ರಿಯಾಂಕಾ ಚೋಪ್ರಾ (Priyanka Chopra) ಮಾತ್ರ ಯಾಕೋ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಏಕೆ ಬಂದಿಲ್ಲ ಎಂಬ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ.

ಕೆಲ ತಿಂಗಳ ಹಿಂದೆ ನಡೆದಿದ್ದ ನೀತಾ ಅಂಬಾನಿಯ ಜಿಯೋ ಕಲ್ಚರಲ್ ಸೆಂಟರ್ ಉದ್ಘಾಟನೆಗೆ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು. ಆ ಕಾರ್ಯಕ್ರಮಕ್ಕೆ ಹಲವು ಬಾಲಿವುಡ್ ತಾರೆಯರು, ಕೆಲ ಹಾಲಿವುಡ್ ತಾರೆಯರು ಸಹ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಸಖತ್ ಆಗಿ ಮಿಂಚಿದ್ದರು. ಹಾಗಾಗಿ ಪ್ರೀ ವೆಡ್ಡಿಂಗ್​ಗೆ ಸಹ ಪ್ರಿಯಾಂಕಾ ಚೋಪ್ರಾ ಆಗಮಿಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರಿಯಾಂಕಾ ಪ್ರೀ ವೆಡ್ಡಿಂಗ್​ಗೆ ಗೈರಾಗಿದ್ದಾರೆ. ಆದರೆ ಅದಕ್ಕೆ ಕಾರಣವಿದೆ.

ಇದನ್ನೂ ಓದಿ: ಆಸ್ಕರ್​ಗೆ ನಾಮಿನೇಟ್ ಆಗಿರುವ ಭಾರತೀಯ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಬೆಂಬಲ

ಪ್ರಿಯಾಂಕಾ ಚೋಪ್ರಾ ತಮ್ಮ ಹೊಸ ಹಾಲಿವುಡ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರೀಕರಣದ ಶೆಡ್ಯೂಲ್ ಮೊದಲೇ ನಿಗದಿಯಾಗಿದ್ದ ಕಾರಣ ಪ್ರಿಯಾಂಕಾ ಚೋಪ್ರಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಾಲಿವುಡ್ ಸಿನಿಮಾ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆಕ್ಷನ್ ಸಿನಿಮಾ ಇದಾಗಿದ್ದು, ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಇರುವ ಕಾರಣದಿಂದಲೇ ಪ್ರಿಯಾಂಕಾ ಚೋಪ್ರಾ ಅನಂತ್-ರಾಧಿಕಾ ಪ್ರೀ ವೆಡ್ಡಿಂಗ್​ಗೆ ಬಂದಿಲ್ಲ.

ಆದರೆ ಪ್ರಿಯಾಂಕಾರ ತಾಯಿ ಮಧು ಚೋಪ್ರಾ, ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ, ಪ್ರೀ ವೆಡ್ಡಿಂಗ್​ಗೆ ಬರದೇ ಇರುವ ಬಗ್ಗೆ ಪಾಪರಾಟ್ಜಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಧು ಚೋಪ್ರಾ, ‘ಬರ್ತಾಳೆ, ಪ್ರಿಯಾಂಕಾ ಚೋಪ್ರಾ ಬಂದೇ ಬರ್ತಾಳೆ’ ಎಂದಷ್ಟೆ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ