ಆಸ್ಕರ್​ಗೆ ನಾಮಿನೇಟ್ ಆಗಿರುವ ಭಾರತೀಯ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಬೆಂಬಲ

To Kill A Tiger: ಆಸ್ಕರ್​ಗೆ ನಾಮಿನೇಟ್ ಆಗಿರುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಬೆಂಬಲ ಸೂಚಿಸಿದ್ದಾರೆ. ಡಾಕ್ಯುಮೆಂಟರಿಯ ಆಸ್ಕರ್ ಪ್ರಚಾರಕ್ಕೆ ಪ್ರಿಯಾಂಕಾ ಸಹಾಯ ದೊರಕಲಿದೆ.

ಆಸ್ಕರ್​ಗೆ ನಾಮಿನೇಟ್ ಆಗಿರುವ ಭಾರತೀಯ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಬೆಂಬಲ
ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
|

Updated on: Feb 25, 2024 | 10:28 PM

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ (Hollywood) ನಟಿ, ಹಾಲಿವುಡ್ ನಿವಾಸಿ. ಹಾಗಿದ್ದರೂ ಸಹ ಭಾರತೀಯ ಚಿತ್ರರಂಗದೊಂದಿಗೆ ಸಂಬಂಧ ಕಡಿದುಕೊಂಡಿಲ್ಲ. ಗುಣಮಟ್ಟದ ಭಾರತೀಯ ಸಿನಿಮಾಗಳಿಗೆ, ಡಾಕ್ಯುಮೆಂಟರಿಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಈ ಬಾರಿಯ ಆಸ್ಕರ್​ನಲ್ಲಿ ಭಾರತದ ಸಿನಿಮಾಗಳು ನಾಮಿನೇಷನ್ ಗಿಟ್ಟಿಸಲು ವಿಫಲವಾಗಿವೆ ಆದರೆ ಭಾರತದ ಡಾಕ್ಯುಮೆಂಟರಿಯೊಂದು ನಾಮಿನೇಷನ್ ಪಡೆದುಕೊಂಡಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿ, ಅವರ ಕುಟುಂಬ, ಆಕೆಯ ಸುತ್ತ-ಮುತ್ತಲಿನ ಪರಿಸರದ ಬಗೆಗಿನ ಚಿತ್ರಣ ಕಟ್ಟಿಕೊಡುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿ ನಾಮಿನೇಟ್ ಆಗಿದ್ದು, ಆಸ್ಕರ್ ಗೆಲ್ಲುವ ಭರವಸೆ ಮೂಡಿಸಿದೆ. ಈ ಡಾಕ್ಯುಮೆಂಟರಿಗೆ ಈಗ ಪ್ರಿಯಾಂಕಾ ಚೋಪ್ರಾ ಬೆಂಬಲ ದೊರೆತಿದೆ.

ನಟಿ ಪ್ರಿಯಾಂಕಾ ಚೋಪ್ರಾ, ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಗೆ ಬೆಂಬಲವಾಗಿ ನಿಂತಿದ್ದಾರೆ. ಡಾಕ್ಯುಮೆಂಟರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ, ‘ಆಸ್ಕರ್ ನಾಮಿನೇಷನ್ ಗಳಿಸಿರುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿ ತಂಡವನ್ನು ನಾನು ಸೇರಿಕೊಳ್ಳುತ್ತಿರುವುದು ಬಹಳ ಹೆಮ್ಮೆ ಎನಿಸಿದೆ. ನೆಟ್​ಫ್ಲಿಕ್ಸ್​, ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯ ಸ್ಟ್ರೀಮಿಂಗ್ ಹಕ್ಕು ಖರೀದಿ ಮಾಡಿದೆ. 2022 ರಲ್ಲಿ ನಾನು ಮೊದಲ ಬಾರಿಗೆ ಈ ಡಾಕ್ಯುಮೆಂಟರಿ ನೋಡಿದಾಗಲೇ ಅದರ ನೇರ ನಿರೂಪಣೆ ನನಗೆ ಬಹಳ ಇಷ್ಟವಾಗಿತ್ತು. ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ನ್ಯಾಯ ಕೊಡಿಸಲು ಹೋರಾಡುವ ತಂದೆಯ ನಿಜ ಘಟನೆ ನನ್ನನ್ನು ಅಲುಗಾಡಿಸಿಬಿಟ್ಟಿತ್ತು’ ಎಂದಿದ್ದಾರೆ.

ಇದನ್ನೂ ಓದಿ:2024 ಆಸ್ಕರ್ ನಾಮಿನೇಷನ್ಸ್​: ಇಲ್ಲಿದೆ ನಾಮಿನೇಟ್ ಆದ ಸಿನಿಮಾಗಳ ಪಟ್ಟಿ

ಮುಂದುವರೆದು, ‘ಅತ್ಯಾಚಾರಕ್ಕೆ ಒಳಗಾದ ಆ ಯುವತಿ ಹಾಗೂ ಅವರ ತಂದೆಯಂತೆಯೇ ನಾನೂ ಸಹ ಜಾರ್ಖಂಡ್​ ರಾಜ್ಯದವಳೇ. ನನ್ನ ತಂದೆಯೂ ಸಹ ಮಗಳಿಗಾಗಿ ಏನು ಬೇಕಾದರೂ ಮಾಡಬಲ್ಲ ಚಾಂಪಿಯನ್. ಅವರಿಬ್ಬರ ಕತೆ ನೋಡಿದಾಗ ನನ್ನ ಮನಸ್ಸು ಚೂರಾಗಿ ಬಿಟ್ಟಿತು’ ಎಂದಿದ್ದಾರೆ.

ಕಳೆದ ವರ್ಷ ಆಸ್ಕರ್​ಗೆ ನಾಮಿನೇಟ್ ಆಗಿದ್ದ ‘ಚೆಲ್ಲಾ ಶೋ’ ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಬೆಂಬಲ ನೀಡಿದ್ದರು. ಆ ಸಿನಿಮಾದ ವಿಶೇಷ ಪ್ರದರ್ಶನಗಳನ್ನು ತಮ್ಮ ಮನೆಯಲ್ಲಿ ಆಯೋಜಿಸಿ, ಆಸ್ಕರ್​ ವೋಟರ್​ಗಳನ್ನು ಕರೆಸಿ ಸಿನಿಮಾ ಪ್ರದರ್ಶಿಸಿ, ಕೆಲ ಒಳ್ಳೆಯ ಮಾತುಗಳನ್ನು ಸಿನಿಮಾ ಬಗ್ಗೆ ಹೇಳಿದ್ದರು. ಈಗ ಆಸ್ಕರ್ ನಾಮಿನೇಷನ್ ಪಡೆದಿರುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಗೆ ಬೆಂಬಲ ನೀಡಿದ್ದಾರೆ. ಅದರ ಶೋಗಳನ್ನು ತಮ್ಮ ನಿವಾಸದಲ್ಲಿ ಆಯೋಜಿಸಲಿದ್ದಾರೆ.

‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯು ಅತ್ಯಾಚಾರಕ್ಕೆ ಒಳಗಾದ ಯುವತಿ ಹಾಗೂ ಆಕೆಗೆ ನ್ಯಾಯ ಕೊಡಿಸಲು ಆಕೆಯ ತಂದೆ ಹೇಗೆ ಹೋರಾಡುತ್ತಾರೆ ಎಂಬುದರ ನಿಜ ಚಿತ್ರಣ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್