AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್ ಸಿನಿಮಾನಲ್ಲಿ ಸದ್ಗುರು ಜಗ್ಗಿ ವಾಸುದೇವ್, ಪಾತ್ರವೇನು?

Sadguru: ಭಾರತದ ಜನಪ್ರಿಯ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ಸದ್ಗುರು ಹಾಲಿವುಡ್ ಸಿನಿಮಾದಲ್ಲಿ ನಟಿಸಿರುವ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಲಿವುಡ್ ಸಿನಿಮಾನಲ್ಲಿ ಸದ್ಗುರು ಜಗ್ಗಿ ವಾಸುದೇವ್, ಪಾತ್ರವೇನು?
Follow us
ಮಂಜುನಾಥ ಸಿ.
|

Updated on:Feb 18, 2024 | 1:46 PM

ಭಾರತೀಯ ಸಿನಿಮಾಗಳಿಗೆ ವಿಶ್ವದಾದ್ಯಂತ ಬೇಡಿಕೆ ಸೃಷ್ಟಿಯಾಗಿದೆ. ಭಾರತದ ನಟರನ್ನು ಹಾಲಿವುಡ್ (Hollywood) ಸಿನಿಮಾಗಳಲ್ಲಿ ಹಾಕಿಕೊಳ್ಳುವ ಪ್ರತೀತಿಯೂ ಇತ್ತೀಚೆಗೆ ಹೆಚ್ಚಾಗಿದೆ. ಇದರ ಹಿಂದೆ ದೊಡ್ಡ ಮಾರುಕಟ್ಟೆ ಗಿಮೀಕ್ ಸಹ ಇದೆ. ಇರ್ಫಾನ್ ಖಾನ್, ನಾಸಿರುದ್ಧೀನ್ ಶಾ, ಐಶ್ವರ್ಯಾ ರೈ ಅವರುಗಳು ಮೊದಲೇ ಹಾಲಿವುಡ್​ನಲ್ಲಿ ನಟಿಸಿದ್ದರು. ಇವರ ಬಳಿಕ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಧನುಶ್ ಇನ್ನೂ ಹಲವು ನಟರು ನಟಿಸಿದ್ದಾರೆ. ಇನ್ನೂ ಹಲವು ನಟರುಗಳು ಒಬ್ಬರಾದ ಬಳಿಕ ಒಬ್ಬರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಭಾರತದ ಅಧ್ಯಾತ್ಮ ಗುರುಗಳಿಗೂ ಹಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ. ಭಾರತದ ಜನಪ್ರಿಯ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಹಾಲಿವುಡ್​ನ ಮ್ಯೂಸಿಕ್ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಲಿವುಡ್​ನ ಅತ್ಯಂತ ಜನಪ್ರಿಯ ಗಾಯಕಿ, ಸಂಗೀತಜ್ಞೆ ಜೆನ್ನಿಫರ್ ಲೊಪೇಜ್​ರ ಹೊಸ ಮ್ಯೂಸಿಕ್ ಸಿನಿಮಾ ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಸಿನಿಮಾನಲ್ಲಿ ಸದ್ಗುರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆನ್ನಿಫರ್ ಲೊಪೇಜ್ ‘ದಿಸ್ ಈಸ್ ಮಿ ನೌ’ ಹೆಸರಿನ ಸ್ಟುಡಿಯೋ ಆಲ್ಬಂ ಮಾಡಿದ್ದಾರೆ. ಅದನ್ನು ಆಧರಿಸಿ ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಮ್ಯೂಸಿಕಲ್ ಸಿನಿಮಾ ಮಾಡಲಾಗಿದ್ದು, ಇದರಲ್ಲಿ ಸದ್ಗುರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹಾಲಿವುಡ್​ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?

ಸಮಯವನ್ನು ಕಾಪಾಡುವ ದೇವರ ಸೇವಕರಲ್ಲಿ ಒಬ್ಬರಾಗಿ ಸದ್ಗುರು ಕಾಣಿಸಿಕೊಂಡಿದ್ದಾರೆ. ಸದ್ಗುರು ಜೊತೆಗೆ ಜೆನ್ನಿಫರ್ ಲೊಪೇಜ್ ಸೇರಿದಂತೆ ಇನ್ನೂ ಕೆಲವು ಹಾಲಿವುಡ್ ಸ್ಟಾರ್ ನಟರು ಸಹ ನಟಿಸಿದ್ದಾರೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ನೀಲ್ ಡಿಗ್ರೆಸ್ ಸಹ ಸದ್ಗುರು ಜೊತೆ ನಟಿಸಿದ್ದಾರೆ. ಸದ್ಗುರು ಅವರು ಕೆಲವು ಡೈಲಾಗ್​ಗಳನ್ನು ಸಹ ಸಿನಿಮಾದಲ್ಲಿ ಹೊಡೆದಿದ್ದಾರೆ. ಸಿನಿಮಾದಲ್ಲಿ ಬೇರೆ ನಟರು, ಬೇರೆ ರೀತಿಯ ಉಡುಪುಗಳನ್ನು ಧರಿಸಿದ್ದರೆ, ಸದ್ಗುರು ತಮ್ಮ ಸಾಧಾರಣ ಉಡುಗೆಯಾದ ಬರಿಮೈಗೆ ಒಂದು ಶಲ್ಯವನ್ನು ಸುತ್ತಿಕೊಂಡು, ಪೇಟವೊಂದನ್ನು ತೊಟ್ಟುಕೊಂಡು ಕಾಣಿಸಿಕೊಂಡಿದ್ದಾರೆ.

ಸದ್ಗುರು ಅವರು ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ತುಣುಕು ಸಖತ್ ವೈರಲ್ ಆಗಿದೆ. ಹಾಲಿವುಡ್ ನಟರೊಟ್ಟಿಗೆ ಸದ್ಗುರು ನಟಿಸಿರುವ ವಿಡಿಯೋವನ್ನು ನೆಟ್ಟಿಗರು ವೈರಲ್ ಮಾಡಿದ್ದಾರೆ. ಸದ್ಗುರು ಅವರಿಗೆ ಚಿತ್ರರಂಗ ಅಪರಿಚಿತವೇನಲ್ಲ. ಭಾರತದ ಹಲವಾರು ಸಿನಿಮಾ ನಟ-ನಟಿಯರೊಟ್ಟಿಗೆ ಸದ್ಗುರು ಅವರಿಗೆ ಗೆಳೆತನವಿದೆ. ಹಲವಾರು ನಟ-ನಟಿಯರು ಸದ್ಗುರು ಅವರ ನೇರ ಶಿಷ್ಯರೂ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Sun, 18 February 24

ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ