165 ಕೋಟಿ ಮೌಲ್ಯದ ಮನೆಯಿಂದ ಹೊರಬಂದ ಪ್ರಿಯಾಂಕಾ ಚೋಪ್ರಾ

Priyanka Chopra: ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್​ ತಮ್ಮ ಲಾಸ್ ಏಂಜಲ್ಸ್​ನ 165 ಕೋಟಿ ಮೌಲ್ಯದ ಮನೆ ತೊರೆದಿದ್ದಾರೆ. ಕಾರಣವೇನು?

165 ಕೋಟಿ ಮೌಲ್ಯದ ಮನೆಯಿಂದ ಹೊರಬಂದ ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
| Updated By: Digi Tech Desk

Updated on:Feb 14, 2024 | 3:08 PM

ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್​ನಿಂದ ದೂರಾಗಿ ಹಾಲಿವುಡ್​ನಲ್ಲಿ ಸ್ಥಾನ ಕಂಡುಕೊಂಡಿದ್ದಾರೆ. ನಿಕ್ ಜೋನಸ್ ಜೊತೆಗೆ ವಿವಾಹದ ಬಳಿಕ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಪತಿ-ಪತ್ನಿ ಐಶಾರಾಮಿ ಬದುಕು ಸವೆಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಆಗಾಗ್ಗೆ ತಮ್ಮ ಹಾಗೂ ಪತಿಯ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್​ಗೆ ಸಂಕಷ್ಟವೊಂದು ಎದುರಾಗಿದೆ. 165 ಕೋಟಿ ಮೌಲ್ಯದ ಮನೆಯನ್ನು ಅವರು ಅನಿವಾರ್ಯವಾಗಿ ಬಿಟ್ಟು ಹೊರಟಿದ್ದಾರೆ.

2019ರಿಂದಲೂ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್​ ಲಾಸ್ ಎಂಜಲ್ಸ್​ನ ತಮ್ಮ ಕನಸಿನ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಈಗ ಆ ಮನೆಯನ್ನು ತೊರೆದಿದ್ದಾರೆ. ತೊರೆಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಿಯಾಂಕಾ ಹಾಗೂ ನಿಕ್ ವಾಸವಿರುವ ಮನೆ ವಾಸಯೋಗ್ಯವಲ್ಲ, ಆರೋಗ್ಯದ ದೃಷ್ಟಿಕೋನದಿಂದ ವಾಸಕ್ಕೆ ಅಪಾಯಕಾರಿ ಎಂಬ ಕಾರಣಕ್ಕೆ ಮನೆಯನ್ನು ತೊರೆದಿದ್ದಾರೆ.

ಮನೆಯನ್ನು ತಮಗೆ ಮಾರಾಟ ಮಾಡಿದ ಸಂಸ್ಥೆಯ ವಿರುದ್ಧ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದೂರು ದಾಖಲಿಸಿದ್ದು, ನಷ್ಟಪರಿಹಾರಕ್ಕೆ ಆಗ್ರಹಿಸಿದ್ದಾರೆ. 2019ರಲ್ಲಿ ಪ್ರಿಯಾಂಕಾ ಹಾಗೂ ನಿಕ್ ಆ ಮನೆಯಲ್ಲಿ ವಾಸ ಆರಂಭಿಸಿದಾಗಲೇ ಮನೆಯಲ್ಲಿ ಕೆಲವೆಡೆ ಸಮಸ್ಯೆಗಳಿದ್ದವಂತೆ. ಪೂಲ್ ಮತ್ತು ಸ್ಪಾ ಏರಿಯಾದಲ್ಲಿ ಮೊದಲಿಗೆ ಸಮಸ್ಯೆ ಕಾಣಿಸಿಕೊಂಡಿತಂತೆ. ಅದಾದ ಬಳಿಕ ಮಹಡಿ ಮೇಲಿರುವ ಬಾರ್ಬಿಕ್ಯೂ ಏರಿಯಾನಲ್ಲಿಯೂ ಲೀಕೇಜ್ ಕಾಣಿಸಿಕೊಂಡಿತಂತೆ. ಮನೆಯ ಹಲವೆಡೆ ವಾಟರ್ ಲೀಕೇಜ್ ಸಮಸ್ಯೆ ಎದುರಾಯ್ತಂತೆ. ವಾಟರ್ ಲೀಕೇಜ್​ನಿಂದ ತೀವ್ರ ಸಮಸ್ಯೆಯನ್ನು ಪ್ರಿಯಾಂಕಾ ಹಾಗೂ ನಿಕ್ ಎದುರಿಸುತ್ತಿರುವುದಾಗಿ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ರಶ್ಮಿಕಾ, ಕಾಜೋಲ್ ಬಳಿಕ ಪ್ರಿಯಾಂಕಾ ಚೋಪ್ರಾಗೂ ಡೀಪ್ ಫೇಕ್ ಸಂಕಷ್ಟ

ನಿಕ್ ಹಾಗೂ ಪ್ರಿಯಾಂಕಾ ಸಲ್ಲಿಸಿರುವ ದೂರಿನಲ್ಲಿ, ಮನೆ ಮಾರಾಟ ಮಾಡಿರುವ ವ್ಯಕ್ತಿಯು ಮನೆ ದುರಸ್ತಿಯ ಎಲ್ಲಾ ವೆಚ್ಚಗಳಿಗೆ ಮರುಪಾವತಿ ಮಾಡಬೇಕು, ಜೊತೆಗೆ ಬಳಕೆಯ ನಷ್ಟ ಮತ್ತು ಪ್ರತಿವಾದಿಯ ನಡವಳಿಕೆಯಿಂದ ಉಂಟಾದ ಇತರ ಹಾನಿಗಳಿಗೆ ಪರಿಹಾರವನ್ನು ನೀಡಬೇಕು. ಆಸ್ತಿಯನ್ನು ದುರಸ್ತಿ ಮಾಡುವ ವೆಚ್ಚವು ಸುಮಾರು 20 ಕೋಟಿ ರೂಪಾಯಿ ಹಣವನ್ನು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ ಪುಟ್ಟ ಮಗು ಮಾಲತಿ ಜೊತೆಗೆ ಲಾಸ್ ಏಂಜಲ್ಸ್​ನ ಬೇರೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Thu, 1 February 24

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ