
Priyanka Chopra
ಪ್ರಿಯಾಂಕಾ ಚೋಪ್ರಾ ಭಾರತದ ನಟಿ ಹಾಗೂ ನಿರ್ಮಾಪಕಿ. 1982ರ ಜುಲೈ 18ರಂದು ಭಾರತದ ಜಮ್ಶೆಡ್‌ಪುರದಲ್ಲಿ ಜನಿಸಿದರು. 2000ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದಿದ್ದಕ್ಕಾಗಿ ಅವರು ವ್ಯಾಪಕವಾದ ಮನ್ನಣೆಯನ್ನು ಪಡೆದರು. ಸಿನಿಮಾ ಕ್ಷೇತ್ರಕ್ಕೆ ಬರಲು ಇದು ಸಹಕಾರಿ ಆಯಿತು. ಪ್ರಿಯಾಂಕಾ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಫ್ಯಾಶನ್’, ‘ಬಾಜಿರಾವ್ ಮಸ್ತಾನಿ’, ‘ಡಾನ್’, ‘ಡಾನ್ 2’ ಸೇರಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಹಲವು ಸಾಮಾಜಿಕ ಕೆಲಸಗಳನ್ನು ಅವರು ಮಾಡಿದ್ದಾರೆ. ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಪ್ರಿಯಾಂಕಾ ಮದುವೆ ಆಗಿದ್ದಾರೆ. ಈ ದಂಪತಿಗೆ ಮಾಲ್ತಿ ಹೆಸರಿನ ಮಗಳಿದ್ದಾಳೆ. ಈ ದಂಪತಿ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ.
‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ಬಾಲಿವುಡ್ ಕಡೆಗೆ ಮತ್ತೆ ಒಲವು
ಕಳೆದ ಒಂದಷ್ಟು ವರ್ಷಗಳಿಂದ ಹಾಲಿವುಡ್ನಲ್ಲೇ ಬ್ಯುಸಿ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಈಗ ಮತ್ತೆ ಹಿಂದಿ ಚಿತ್ರದತ್ತ ಗಮನ ಹರಿಸಿದ್ದಾರೆ. ಹೃತಿಕ್ ರೋಷನ್ ನಟನೆಯ ‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಚಿತ್ರತಂಡದವರು ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.
- Madan Kumar
- Updated on: Apr 11, 2025
- 6:53 pm
ಅಲ್ಲು ಅರ್ಜುನ್ಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ನಿರ್ದೇಶಕ ಅಟ್ಲಿ ಮಾಸ್ಟರ್ ಪ್ಲ್ಯಾನ್
ಖ್ಯಾತ ನಿರ್ದೇಶಕ ಅಟ್ಲಿ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಪ್ರಾಜೆಕ್ಟ್ಗೆ ಈಗಾಗಲೇ ತಯಾರಿ ನಡೆಯುತ್ತಿದೆ. ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಿಕೊಳ್ಳಲು ಅಟ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂದು ವರದಿ ಆಗಿದೆ.
- Madan Kumar
- Updated on: Apr 4, 2025
- 6:24 pm
ಪ್ರಿಯಾಂಕಾ ಚೋಪ್ರಾಗಾಗಿ ಬೇಲಿ ಹಾರಿ ಮನೆಗೆ ನುಗ್ಗಿದ್ದ ಹುಡುಗ; ಘಟನೆ ವಿವರಿಸಿದ ತಾಯಿ
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ ಬಂದಿದ್ದ ಪ್ರಿಯಾಂಕಾ ಚೋಪ್ರಾ ಅವರು ಬರೇಲಿಯಲ್ಲಿ ವೆಸ್ಟರ್ನ್ ಡ್ರೆಸ್ ಧರಿಸುತ್ತಿದ್ದರು. ಅವರನ್ನು ಫಾಲೋ ಮಾಡಿಕೊಂಡು ಹುಡುಗರು ಮನೆಗೆ ಬರುತ್ತಿದ್ದರು. ಆ ಘಟನೆಯನ್ನು ಈಗ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ನೆನಪಿಸಿಕೊಂಡಿದ್ದಾರೆ. ಆ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.
- Madan Kumar
- Updated on: Feb 28, 2025
- 8:53 pm
ಮಹೇಶ್ ಬಾಬು ಜೊತೆಗಿನ ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಪ್ರಿಯಾಂಕಾ ಚೋಪ್ರಾ?
ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ತುಂಬ ಬೇಡಿಕೆ ಇದೆ. ರಾಜಮೌಳಿ ನಿರ್ದೇಶನದ ಹೊಸ ಸಿನಿಮಾ ಅವರೇ ನಾಯಕಿ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗಾಗಿ ಅವರು ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಮಹೇಶ್ ಬಾಬುಗೆ ಜೋಡಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಾರೆ ಎನ್ನಲಾಗಿದೆ.
- Madan Kumar
- Updated on: Jan 31, 2025
- 9:28 pm
ಅಮೆರಿಕದಲ್ಲಿ ಪ್ರಿಯಾಂಕಾ ಚೋಪ್ರಾ ಜತೆ ‘ಫ್ಯಾಷನ್’ ನಿರ್ದೇಶಕನ ಮಾತುಕತೆ; ಸೀಕ್ವೆಲ್ ಗುಮಾನಿ
ಖ್ಯಾತ ನಿರ್ದೇಶಕ ಮಧುರ್ ಭಂಡರ್ಕರ್ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಪ್ರಿಯಾಂಕಾ ಚೋಪ್ರಾ ಜೊತೆ ಮಾತುಕಥೆ ನಡೆಸಿದ್ದಾರೆ. ‘ಫ್ಯಾಷನ್ 2’ ಸಿನಿಮಾ ಸಲುವಾಗಿ ಈ ಭೇಟಿ ನಡೆದಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಈ ಬಗ್ಗೆ ಮಧುರ್ ಭಂಡರ್ಕರ್ ಅವರು ಇನ್ನಷ್ಟೇ ಹೆಚ್ಚಿನ ಮಾಹಿತಿ ಬಿಟ್ಟುಕೊಡುವುದು ಬಾಕಿ ಇದೆ.
- Madan Kumar
- Updated on: Aug 21, 2024
- 10:48 pm
ಶೂಟಿಂಗ್ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ವಿದೇಶದಲ್ಲಿ ಭಾರತದ ಮನೆಮದ್ದು
ಪ್ರಿಯಾಂಕಾ ಚೋಪ್ರಾ ಅವರು ವಿದೇಶದಲ್ಲಿ ನೆಲೆಸಿದ್ದರೂ ಕೂಡ ಭಾರತದ ಸಂಪ್ರದಾಯ ಮರೆತಿಲ್ಲ. ಚಿತ್ರೀಕರಣದ ವೇಳೆ ಗಾಯಗೊಂಡಿರುವ ಅವರು ಭಾರತೀಯ ಶೈಲಿಯ ಮನೆಮದ್ದು ಪ್ರಯೋಗಿಸಿದ್ದಾರೆ. ಆ ಬಗ್ಗೆ ತಮ್ಮ ಅಭಿಮಾನಿಗಳಿಗೂ ಅವರು ಮಾಹಿತಿ ನೀಡಿದ್ದಾರೆ. ‘ದ ಬ್ಲಫ್’, ‘ಹೆಡ್ಸ್ ಆಫ್ ಸ್ಟೇಟ್’ ಮುಂತಾದ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ.
- Madan Kumar
- Updated on: Jun 27, 2024
- 7:00 pm
ಆ್ಯಕ್ಷನ್ ದೃಶ್ಯದ ವೇಳೆ ಪ್ರಿಯಾಂಕಾ ಚೋಪ್ರಾ ಕತ್ತಿಗೆ ಆಯ್ತು ಗಾಯ
ಆ್ಯಕ್ಷನ್ ಸಿನಿಮಾಗಳನ್ನು ಮಾಡೋ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆ ಎದುರಾಗೋದು ಸಹಜ. ಹೀಗಾಗಿಯೇ ಪ್ರಿಯಾಂಕಾ ತೊಂದರೆ ಅನುಭವಿಸಿದ್ದಾರೆ. ಈ ಮೊದಲು ಕೂಡ ಪ್ರಿಯಾಂಕಾ ಚೋಪ್ರಾ ಹಲವು ಬಾರಿ ಗಾಯಗೊಂಡಿದ್ದರು. ಆದರೆ, ಅವರು ಆ್ಯಕ್ಷನ್ ಸಿನಿಮಾಗಳಿಂದ ದೂರ ಹೋಗಿಲ್ಲ.
- Rajesh Duggumane
- Updated on: Jun 20, 2024
- 7:44 am
ಸ್ಕ್ರಿಪ್ಟ್ ಮೇಲೆ ‘ಓಂ’ ಅಂತ ಬರೆದು ಕೆಲಸ ಶುರು ಮಾಡಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ ಅವರನ್ನು ಮದುವೆ ಆಗಿದ್ದರೂ ಕೂಡ ಹಿಂದೂ ಧರ್ಮದ ಆಚರಣೆಗಳನ್ನು ನಿಲ್ಲಿಸಿಲ್ಲ. ಅಮೆರಿಕದಲ್ಲಿ ಸೆಟ್ಲ್ ಆಗಿರುವ ಅವರು ಈಗ ಹೊಸ ಸಿನಿಮಾದ ಕೆಲಸ ಶುರು ಮಾಡಿದ್ದಾರೆ. ಆ ಚಿತ್ರದ ಸ್ಕ್ರಿಪ್ಟ್ ಮೇಲೆ ‘ಓಂ’ ಎಂದು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ.
- Madan Kumar
- Updated on: May 31, 2024
- 9:14 pm
ವಿಜಯ್ ಜತೆ ಸಿನಿಮಾ ಮಾಡಲ್ಲ ಅಂತ ಕಣ್ಣೀರು ಹಾಕಿದ್ದ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಅವರು ಮೊಟ್ಟ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು ದಳಪತಿ ವಿಜಯ್ ಜೊತೆ. ಆ ಸಿನಿಮಾದಲ್ಲಿ ನಟಿಸಲು ಆಫರ್ ಬಂದಾಗ ಪ್ರಿಯಾಂಕಾ ಅವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆ ಘಟನೆಯ ಬಗ್ಗೆ ಅವರ ತಾಯಿ ಮಧು ಚೋಪ್ರಾ ಈಗ ಮಾತನಾಡಿದ್ದಾರೆ. ತಮಿಳಿನಲ್ಲಿ ಮೊದಲ ಸಿನಿಮಾ ಮಾಡಿದ ಬಳಿಕ ಪ್ರಿಯಾಂಕಾ ಅವರು ಬಾಲಿವುಡ್ನಲ್ಲಿ ಬ್ಯುಸಿ ಆದರು.
- Madan Kumar
- Updated on: May 30, 2024
- 4:03 pm
‘ಮೊಡವೆ ಆಗಿದ್ದಕ್ಕೆ ಅವಕಾಶ ಕಿತ್ತುಕೊಂಡು ಮನೆಗೆ ಕಳಿಸಿದ್ರು’: ಮನ್ನಾರಾ ಚೋಪ್ರಾ
ಅವಕಾಶಕ್ಕಾಗಿ ನಟಿ ಮನ್ನಾರಾ ಚೋಪ್ರಾ ಅವರು ಬಹಳ ಕಷ್ಟಪಟ್ಟಿದ್ದರು. ಹಲವು ಸುತ್ತುಗಳ ಆಡಿಷನ್ ನೀಡಿ ಚಾನ್ಸ್ ಪಡೆದುಕೊಂಡಿದ್ದರು. ಫೇರ್ನೆಸ್ ಕ್ರೀಮ್ ಜಾಹೀರಾತಿನಲ್ಲಿ ಅವರು ನಟಿಸಬೇಕಿತ್ತು. ಆದೆ ಆ ಒಂದು ಅವಕಾಶ ದಿಢೀರ್ ಅಂತ ಕೈ ತಪ್ಪಿಹೋಯಿತು. ಅದಕ್ಕೆಲ್ಲ ಕಾರಣ ಆಗಿದ್ದು ಮೊಡವೆ! ಆ ಘಟನೆಯನ್ನು ಮನ್ನಾರಾ ಚೋಪ್ರಾ ಅವರು ಈಗ ಮೆಲುಕು ಹಾಕಿದ್ದಾರೆ.
- Madan Kumar
- Updated on: Apr 29, 2024
- 10:15 pm