AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್​ ಜತೆ ಸಿನಿಮಾ ಮಾಡಲ್ಲ ಅಂತ ಕಣ್ಣೀರು ಹಾಕಿದ್ದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಅವರು ಮೊಟ್ಟ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು ದಳಪತಿ ವಿಜಯ್​ ಜೊತೆ. ಆ ಸಿನಿಮಾದಲ್ಲಿ ನಟಿಸಲು ಆಫರ್​ ಬಂದಾಗ ಪ್ರಿಯಾಂಕಾ ಅವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆ ಘಟನೆಯ ಬಗ್ಗೆ ಅವರ ತಾಯಿ ಮಧು ಚೋಪ್ರಾ ಈಗ ಮಾತನಾಡಿದ್ದಾರೆ. ತಮಿಳಿನಲ್ಲಿ ಮೊದಲ ಸಿನಿಮಾ ಮಾಡಿದ ಬಳಿಕ ಪ್ರಿಯಾಂಕಾ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆದರು.

ವಿಜಯ್​ ಜತೆ ಸಿನಿಮಾ ಮಾಡಲ್ಲ ಅಂತ ಕಣ್ಣೀರು ಹಾಕಿದ್ದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ, ದಳಪತಿ ವಿಜಯ್​
ಮದನ್​ ಕುಮಾರ್​
|

Updated on: May 30, 2024 | 4:03 PM

Share

ನಟ ದಳಪತಿ ವಿಜಯ್​ (Thalapathy Vijay) ಜೊತೆ ಸಿನಿಮಾ ಮಾಡಬೇಕು ಎಂಬುದು ಎಷ್ಟೋ ನಟಿಯರ ಆಸೆ. ಆದರೆ ಪ್ರಿಯಾಂಕಾ ಚೋಪ್ರಾ (Priyanka Chopra) ಅವರಿಗೆ ಅಂಥ ಆಫರ್​ ಸಿಕ್ಕಾಗ ಅವರು ಕಣ್ಣೀರು ಹಾಕಿದ್ದರು. ಆ ಸಿನಿಮಾವನ್ನು ಒಪ್ಪಿಕೊಳ್ಳಲು ಪ್ರಿಯಾಂಕಾ ಚೋಪ್ರಾಗೆ ಇಷ್ಟ ಇರಲಿಲ್ಲ. ಬಳಿಕ ತಾಯಿ ಮಧು ಚೋಪ್ರಾ ಅವರು ಮನವೊಲಿಸಿದ ಬಳಿಕ ಪ್ರಿಯಾಂಕಾ ಆ ಸಿನಿಮಾ ಮಾಡಲು ಒಪ್ಪಿಕೊಂಡರು. ಈ ಘಟನೆ ನಡೆದಿದ್ದು 2002ರಲ್ಲಿ. ಆ ಘಟನೆಯನ್ನು ಮಧು ಚೋಪ್ರಾ (Madhu Chopra) ಅವರು ಈಗ ನೆನಪಿಸಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

2000ನೇ ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಿಸ್​ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡರು. ಬಳಿಕ ಅವರಿಗೆ ತಮಿಳು ಚಿತ್ರರಂಗದಿಂದ ಆಫರ್​ ಬಂತು. ದಳಪತಿ ವಿಜಯ್​ ನಟನೆಯ ‘ತಮಿಳನ್​’ ಸಿನಿಮಾಗೆ ನಾಯಕಿ ಆಗುವಂತೆ ಆಫರ್​ ನೀಡಲಾಯಿತು. ಆದರೆ ತಾವು ಆ ಸಿನಿಮಾ ಮಾಡಲ್ಲ ಎಂದು ಪ್ರಿಯಾಂಕಾ ಚೋಪ್ರಾ ಅವರು ಅಳಲು ಆರಂಭಿಸಿದ್ದರು. ಅದಕ್ಕೆ ಕಾರಣ ಏನು ಎಂಬುದನ್ನು ಮಧು ಚೋಪ್ರಾ ವಿವವರಿಸಿದ್ದಾರೆ.

‘ಸಿನಿಮಾಗಳಲ್ಲಿ ನಟಿಸುವುದು ಪ್ರಿಯಾಂಕಾಗೆ ಇಷ್ಟ ಇರಲಿಲ್ಲ. ಯಾರಿಂದಲೂ ಆಕೆಗೆ ದಕ್ಷಿಣ ಭಾರತದ ಸಿನಿಮಾ ಆಫರ್​ ಸಿಕ್ಕಿತು. ಆ ಬಗ್ಗೆ ನಾನು ಆಕೆಗೆ ಹೇಳಿದಾಗ ಅಳಲು ಆರಂಭಿಸಿದಳು. ಸಿನಿಮಾಗಳಲ್ಲಿ ನಟಿಸಲು ತನಗೆ ಇಷ್ಟ ಇಲ್ಲ ಎಂದಳು. ಆದರೆ ಒಪ್ಪಿಕೋ ಎಂದು ನಾನು ಹೇಳಿದ ಬಳಿಕ ಸಹಿ ಮಾಡಿದಳು’ ಎಂದು ಮಧು ಚೋಪ್ರಾ ಹೇಳಿದ್ದಾರೆ. ಆ ಸಿನಿಮಾದ ಬಳಿಕ ಪ್ರಿಯಾಂಕಾ ಅವರಿಗೆ ಬಾಲಿವುಡ್​ನಿಂದ ಆಫರ್​ ಬರಲು ಆರಂಭ ಆಯಿತು.

ಇದನ್ನೂ ಓದಿ: ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ದಳಪತಿ ವಿಜಯ್?

‘ದಳಪತಿ ವಿಜಯ್​ ಜೊತೆ ಸಿನಿಮಾ ಮಾಡಲು ಆರಂಭಿಸಿದಾಗ ಪ್ರಿಯಾಂಕಾಗೆ ಅದು ಇಷ್ಟ ಆಯಿತು. ತಮಿಳು ಭಾಷೆ ಬರದಿದ್ದರೂ ಕೂಡ ಆಕೆ ಶೂಟಿಂಗ್​ ಎಂಜಾಯ್​ ಮಾಡಿದಳು. ಚಿತ್ರತಂಡದವರು ಆಕೆಯನ್ನು ಗೌರವದಿಂದ ನೋಡಿಕೊಂಡರು. ವಿಜಯ್​ ಅವರು ಜಂಟಲ್​ಮನ್​. ಹಾಡಿಗೆ ರಾಜು ಸುಂದರಂ ಕೊರಿಯೋಗ್ರಫಿ ಮಾಡಿದರು. ಆರಂಭದಲ್ಲಿ ವಿಜಯ್​ ಜೊತೆ ಡ್ಯಾನ್ಸ್​ ಸ್ಟೆಪ್​ ಮ್ಯಾಚ್​ ಮಾಡಲು ಪ್ರಿಯಾಂಕಾಗೆ ಸಾಧ್ಯವಾಗಲಿಲ್ಲ. ನಂತರ ಕೊರಿಯೋಗ್ರಾಫರ್​ ಜೊತೆ ಅಭ್ಯಾಸ ಮಾಡಿ ಶೂಟಿಂಗ್​ನಲ್ಲಿ ಭಾಗಿಯಾದಳು’ ಎಂದಿದ್ದಾರೆ ಮಧು ಚೋಪ್ರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ