ಕರೀನಾ ಕಪೂರ್ ಖಾನ್ ಹಾಟ್ ಅವತಾರ ನೋಡಿ ಸುಸ್ತಾದ ಪಡ್ಡೆ ಹುಡುಗರು
ಸಿನಿಮಾಗಳಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲಿಯೂ ಕರೀನಾ ಕಪೂರ್ ಖಾನ್ ಅವರು ಕೆಲವೊಮ್ಮೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಕರೀನಾ ಕಪೂರ್ ಅವರು ಬೋಲ್ಡ್ ಆದಂತಹ ಕಾಸ್ಟ್ಯೂಮ್ ಧರಿಸಿ ಬಂದಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.
ಹಿಂದಿ ಚಿತ್ರರಂಗದ (Bollywood) ಪ್ರಸಿದ್ಧ ನಟಿ ಕರೀನಾ ಕಪೂರ್ ಖಾನ್ ಅವರು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ಗ್ಲಾಮರಸ್ ಅವತಾರದಲ್ಲಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರು ಕಾಣಿಸಿಕೊಂಡಿದ್ದಾರೆ. ಅವರ ಹಾಟ್ ಅವತಾರ ನೋಡಿ ಪಡ್ಡೆ ಹುಡುಗರು ಸುಸ್ತಾಗಿದ್ದಾರೆ. ಈ ಫೋಟೋಗಳನ್ನು ಕರೀನಾ ಕಪೂರ್ ಖಾನ್ ಅವರು ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಈ ಫೋಟೋಗಳನ್ನು (Kareena Kapoor Viral Photo) ಲೈಕ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಖಾನ್ ಅವರ ಈ ಫೋಟೋಗಳು ವೈರಲ್ ಆಗಿವೆ. ನಟಿಯ ಬೋಲ್ಡ್ ವೇಷ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಕೆಲವು ನಟಿಯರು ಮದುವೆ, ಮಕ್ಕಳು ಆದ ನಂತರ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಕರೀನಾ ಕಪೂರ್ ಖಾನ್ ಅವರು ಆ ರೀತಿ ಅಲ್ಲ. ಈಗ ಅವರು ಹಂಚಿಕೊಂಡಿರುವ ಈ ಫೋಟೋಗಳು ತುಂಬ ಹಾಟ್ ಆಗಿವೆ.
ಇನ್ಸ್ಟಾಗ್ರಾಮ್ನಲ್ಲಿ ಕರೀನಾ ಕಪೂರ್ ಖಾನ್ ಅವರು ಈ ಫೋಟೋಗಳನ್ನು ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಕಮೆಂಟ್ಗಳ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ. ಆದರೆ ಅಪ್ಪಟ ಅಭಿಮಾನಿಗಳು ಕರೀನಾ ಕಪೂರ್ ಪರವಾಗಿ ಕಮೆಂಟ್ ಮಾಡಿದ್ದಾರೆ.
ಕರೀನಾ ಕಪೂರ್ ಖಾನ್ ಇನ್ಸ್ಟಾಗ್ರಾಮ್ ಪೋಸ್ಟ್:
View this post on Instagram
ಕರೀನಾ ಕಪೂರ್ ಖಾನ್ ಅವರಿಗೆ ಈಗ 43 ವರ್ಷ ವಯಸ್ಸು. ಸೈಫ್ ಅಲಿ ಖಾನ್ ಜೊತೆ ಮದುವೆ ಆಗಿರುವ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇಂದಿಗೂ ಕರೀನಾ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿವೆ. ಆದರೆ ಅವರ ಬೇಡಿಕೆ ಕಡಿಮೆ ಆಗಿಲ್ಲ. ಈ ವರ್ಷ ಅವರು ನಟಿಸಿದ ‘ಕ್ರೂ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತು.
ಇದನ್ನೂ ಓದಿ: ಕರೀನಾ ಕೇಳಿದಷ್ಟು ಹಣ ಕೊಡಲಿಲ್ಲವೇ ‘ಟಾಕ್ಸಿಕ್’ ತಂಡದವರು? ಹೊಸ ಚರ್ಚೆ ಶುರು
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್ ಅವರು ನಟಿಸುತ್ತಾರೆ ಎಂದು ಕೆಲವು ದಿನಗಳ ಹಿಂದೆ ಗುಸುಗುಸು ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಕೂಡ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಕರೀನಾ ಅವರಾಗಲೀ, ‘ಟಾಕ್ಸಿಕ್’ ಚಿತ್ರತಂಡದವರಾಗಲಿ ಬಾಯಿ ಬಿಟ್ಟಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.