AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೀನಾ ಕೇಳಿದಷ್ಟು ಹಣ ಕೊಡಲಿಲ್ಲವೇ ‘ಟಾಕ್ಸಿಕ್’ ತಂಡದವರು? ಹೊಸ ಚರ್ಚೆ ಶುರು

ಯಶ್​ ಜೊತೆ ಕರೀನಾ ಕಪೂರ್​ ಖಾನ್ ನಟಿಸುತ್ತಾರೆ ಎಂದು ಅವರ ಅಭಿಮಾನಿಗಳು ಕನಸು ಕಂಡಿದ್ದರು. ಆದರೆ ಅದೇಕೋ ನಿಜವಾಗುವ ಹಾಗೆ ಕಾಣುತ್ತಿಲ್ಲ. ‘ಟಾಕ್ಸಿಕ್​’ ಚಿತ್ರತಂಡದಿಂದ ಕರೀನಾ ಕಪೂರ್​ ಖಾನ್​ ಅವರು ಹೊರಬಂದಿದ್ದಾರೆ ಎಂಬ ಗುಸುಗುಸು ಹರಡಿದೆ. ಅದಕ್ಕೆ ಸಂಭಾವನೆಯೇ ಕಾರಣ ಎಂದು ಕೆಲವರು ಊಹಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಕರೀನಾ ಕೇಳಿದಷ್ಟು ಹಣ ಕೊಡಲಿಲ್ಲವೇ ‘ಟಾಕ್ಸಿಕ್’ ತಂಡದವರು? ಹೊಸ ಚರ್ಚೆ ಶುರು
ಕರೀನಾ ಕಪೂರ್​, ಯಶ್​
ಮದನ್​ ಕುಮಾರ್​
| Updated By: Digi Tech Desk|

Updated on:Aug 08, 2024 | 11:33 AM

Share

ನಟಿ ಕರೀನಾ ಕಪೂರ್​ ಖಾನ್​ ಅವರು ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಗಾಸಿಪ್​ ಹರಡಿತ್ತು. ಆದರೆ ಇತ್ತೀಚೆಗೆ ಕೇಳಿಬಂದ ಗುಸುಗುಸು ಪ್ರಕಾರ, ಅವರು ಈ ಚಿತ್ರತಂಡದಿಂದ ಹೊರನಡೆದಿದ್ದಾರಂತೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅದರ ಬೆನ್ನಲ್ಲೇ ಕರೀನಾ ಕಪೂರ್​ ಖಾನ್​ (Kareena Kapoor Khan) ಅವರು ಮಾರ್ಮಿಕವಾಗಿ ಒಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಬಳಿಕ, ಯಶ್​ (Yash) ಜೊತೆ ಕರೀನಾ ನಟಿಸುವುದು ಬಹುತೇಕ ಅನುಮಾನ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

ಕರೀನಾ ಕಪೂರ್​ ಅವರಿಗೆ ಸಖತ್​ ಬೇಡಿಕೆ ಇದೆ. ಇತ್ತೀಚೆಗೆ ಅವರು ನಟಿಸಿದ ‘ಕ್ರೂ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಹಾಗಾಗಿ ಅವರು ‘ಟಾಕ್ಸಿಕ್​’ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಕೇಳಿರಬಹುದು. ಅದನ್ನು ಕೊಡಲು ಚಿತ್ರತಂಡ ಒಪ್ಪಿಲ್ಲ ಎನಿಸುತ್ತದೆ. ಅದೇ ಕಾರಣದಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಅನುಮಾನ ಮೂಡಿದೆ.

‘ಪದೇ ಪದೇ ಕಾಣಿಸಿಕೊಳ್ಳಬೇಕು ಎಂಬ ಆಸೆ ನನಗೆ ಇಲ್ಲ. ಕಣ್ಣಿಗೆ ಕಾಣದಂತೆ ಇರಬೇಕು, ತಲುಪಲು ಕಷ್ಟವಾಗುವಂತೆ ಇರಬೇಕು ಮತ್ತು ಸಂಭಾವನೆ ಪಡೆಯಬೇಕು’ ಎಂಬ ಸಾಲುಗಳನ್ನು ಕರೀನಾ ಕಪೂರ್​ ಖಾನ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಹಾಗಾಗಿ ‘ಟಾಕ್ಸಿಕ್​’ ಚಿತ್ರತಂಡದ ಜೊತೆಗಿನ ಸಂಭಾವನೆ ವಿಚಾರವಾಗಿಯೇ ಕರೀನಾ ಕಪೂರ್​ ಅವರಿಗೆ ಭಿನ್ನಾಭಿಪ್ರಾಯ ಮೂಡಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ನಯನತಾರಾ?

ಕರೀನಾ ಕಪೂರ್​ ಖಾನ್​ ಅವರು ‘ಟಾಕ್ಸಿಕ್​’ ಸಿನಿಮಾ ತಂಡಕ್ಕೆ ಗುಡ್​​ಬೈ ಹೇಳಿದ ಬಳಿಕ ನಟಿ ನಯನಾತಾರಾ ಅವರಿಗೆ ಆಫರ್​ ನೀಡಲಾಗಿದೆ ಎಂಬ ಗುಸುಗುಸು ಹಬ್ಬಿದೆ. ಇದೆಲ್ಲ ನಿಜವೋ ಅಲ್ಲವೋ ಎಂಬ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಹೇಳಕೆ ನೀಡಬೇಕಿದೆ. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ. ಈ ಸಿನಿಮಾಗೆ ಗೀತು ಮೂಹನ್​ದಾಸ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:18 pm, Thu, 9 May 24

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!