AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್​’ ನಿರ್ದೇಶಕನ ಜೊತೆ ರಣವೀರ್​ ಸಿಂಗ್​ ಸಿನಿಮಾ ಮಾಡಲ್ಲ; ಸಿಕ್ತು ಸ್ಪಷ್ಟನೆ

‘ಹನುಮಾನ್​’ ಚಿತ್ರದ ನಿರ್ದೇಶಕ ಪ್ರಶಾಂತ್​ ವರ್ಮಾ ಮತ್ತು ಬಾಲಿವುಡ್​ ನಟ ರಣವೀರ್​ ಸಿಂಗ್​ ಅವರು ಜೊತೆಯಾಗಿ ‘ರಾಕ್ಷಸ್​’ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಈ ಬಗ್ಗೆ ಪ್ರಶಾಂತ್​ ವರ್ಮಾ ಮತ್ತು ರಣವೀರ್​ ಸಿಂಗ್​ ಕಡೆಯಿಂದಲೇ ಅಧಿಕೃತವಾಗಿ ಸ್ಪಷ್ಟನೆ ಸಿಕ್ಕಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ.

‘ಹನುಮಾನ್​’ ನಿರ್ದೇಶಕನ ಜೊತೆ ರಣವೀರ್​ ಸಿಂಗ್​ ಸಿನಿಮಾ ಮಾಡಲ್ಲ; ಸಿಕ್ತು ಸ್ಪಷ್ಟನೆ
ಪ್ರಶಾಂತ್​ ವರ್ಮಾ, ರಣವೀರ್​ ಸಿಂಗ್​
ಮದನ್​ ಕುಮಾರ್​
|

Updated on: May 30, 2024 | 10:34 PM

Share

ಈ ವರ್ಷ ಸೂಪರ್​ ಹಿಟ್​ ಆದ ‘ಹನುಮಾನ್​’ ಸಿನಿಮಾದ ಮೂಲಕ ನಿರ್ದೇಶಕ ಪ್ರಶಾಂತ್​ ವರ್ಮಾ (Prasanth Varma) ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿತು. ಅಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರಿಗೆ ಡಿಮ್ಯಾಂಡ್​ ಹೆಚ್ಚಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಾಲಿವುಡ್​ ನಟ ರಣವೀರ್​ ಸಿಂಗ್​ ಜೊತೆ ಪ್ರಶಾಂತ್​ ವರ್ಮಾ ಸಿನಿಮಾ ಮಾಡಬೇಕಿತ್ತು. ‘ರಾಕ್ಷಸ್​’ (Rakshas) ಎಂಬ ಹೊಸ ಸಿನಿಮಾ ಸಲುವಾಗಿ ಅವರಿಬ್ಬರು ಹಲವು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂದು ಕೂಡ ಸುದ್ದಿ ಆಗಿತ್ತು. ಆದರೆ ಈಗ ಆ ಸಿನಿಮಾ ನಿಂತುಹೋಗಿದೆ. ಆ ಬಗ್ಗೆ ಸ್ವತಃ ಪ್ರಶಾಂತ್​ ವರ್ಮಾ ಮತ್ತು ರಣವೀರ್​ ಸಿಂಗ್​ (Ranveer Singh) ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಬೆಂಕಿ ಇಲ್ಲದೇ ಹೊಗೆ ಆಡಲ್ಲ ಎಂಬ ಮಾತನ್ನು ಗಾಸಿಪ್​ ಮಂದಿ ಬಲವಾಗಿ ನಂಬುತ್ತಾರೆ. ರಣವೀರ್​ ಸಿಂಗ್​ ಮತ್ತು ಪ್ರಶಾಂತ್​ ವರ್ಮಾ ಅವರು ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಹಾಗೂ ಆ ಸಿನಿಮಾಗೆ ‘ರಾಕ್ಷಸ್​’ ಎಂದು ಹೆಸರು ಇಡಲಾಗಿದೆ ಎಂದು ಗಾಸಿಪ್​ ಹರಡಿತ್ತು. ನಂತರ ಪ್ರಶಾಂತ್​ ವರ್ಮಾ ಮತ್ತು ರಣವೀರ್​ ಸಿಂಗ್​ ನಡುವೆ ಕಿರಿಕ್​ ಆಗಿದ್ದರಿಂದ ಆ ಸಿನಿಮಾ ನಿಂತು ಹೋಯಿತು ಎಂಬ ಗುಸುಗುಸು ಕೂಡ ಕೇಳಿಬಂದಿತ್ತು. ಆ ಸುದ್ದಿ ನಿಜವಾಗಿದೆ.

ಈ ಬಗ್ಗೆ ರಣವೀರ್​ ಸಿಂಗ್​ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ವರ್ಮಾ ಅವರು ವಿಶೇಷವಾದ ಪ್ರತಿಭಾವಂತ. ನಾವು ಭೇಟಿಯಾಗಿ ಸಿನಿಮಾ ಬಗ್ಗೆ ಮಾತನಾಡಿದ್ದೆವು. ಭವಿಷ್ಯದಲ್ಲಿ ನಾವು ಜೊತೆಯಾಗಿ ಸಿನಿಮಾ ಮಾಡುತ್ತೇವೆ ಎಂಬ ನಂಬಿಕೆ ಇದೆ’ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಆ ಮೂಲಕ ಸದ್ಯಕ್ಕೆ ‘ರಾಕ್ಷಸ್​’ ಸಿನಿಮಾ ಸೆಟ್ಟೇರುವುದಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: 3 ಪ್ರತ್ಯೇಕ ಒಟಿಟಿಯಲ್ಲಿ ‘ಹನುಮಾನ್​’ ಸಿನಿಮಾ; ಯಾವುದರಲ್ಲಿದೆ ಕನ್ನಡ ವರ್ಷನ್​?

ಅದೇ ರೀತಿ, ಪ್ರಶಾಂತ್​ ವರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ‘ರಣವೀರ್ ಸಿಂಗ್​ ಅವರ ಎನರ್ಜಿ ಮತ್ತು ಪ್ರತಿಭೆ ತುಂಬ ಅಪರೂಪದ್ದು. ಮುಂದಿನ ದಿನಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ. ‘ರಾಕ್ಷಸ್’ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡಬೇಕಿತ್ತು. ‘ಕೆಲವೊಂದು ವಿಚಾರಗಳಿಗೆ ಈಗ ಸಮಯ ಕೂಡಿಬಂದಿರುವುದಿಲ್ಲ’ ಎನ್ನುವ ಮೂಲಕ ಈ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ