3 ಪ್ರತ್ಯೇಕ ಒಟಿಟಿಯಲ್ಲಿ ‘ಹನುಮಾನ್​’ ಸಿನಿಮಾ; ಯಾವುದರಲ್ಲಿದೆ ಕನ್ನಡ ವರ್ಷನ್​?

‘ಜಿಯೋ ಸಿನಿಮಾ’, ‘ಜೀ 5’, ‘ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​’ ಒಟಿಟಿಗಳು ‘ಹನುಮಾನ್​’ ಸಿನಿಮಾದ ಪ್ರಸಾರ ಹಕ್ಕನ್ನು ಖರೀದಿಸಿವೆ. ಸೂಪರ್​ ಹೀರೋ ಕಥೆ ಹೊಂದಿರುವ ಈ ಸಿನಿಮಾಗೆ ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ. ಈಗ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಗೆಲುವಿನಿಂದ ನಟ ತೇಜ ಸಜ್ಜಾ ಸ್ಟಾರ್ ಆಗಿದ್ದಾರೆ.

3 ಪ್ರತ್ಯೇಕ ಒಟಿಟಿಯಲ್ಲಿ ‘ಹನುಮಾನ್​’ ಸಿನಿಮಾ; ಯಾವುದರಲ್ಲಿದೆ ಕನ್ನಡ ವರ್ಷನ್​?
ತೇಜ ಸಜ್ಜಾ
Follow us
|

Updated on:Mar 26, 2024 | 3:26 PM

ಟಾಲಿವುಡ್​ನ ಯುವ ನಟ ತೇಜ ಸಜ್ಜಾ ಅಭಿನಯದ ಹನುಮಾನ್​’ (HanuMan) ಸಿನಿಮಾಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಚಿತ್ರ ಈಗ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ವಿಶೇಷ ಏನೆಂದರೆ, ಮೂರು ಬೇರೆ ಬೇರೆ ಒಟಿಟಿ (OTT) ಪ್ಲಾಟ್​ಫಾರ್ಮ್​ಗಳಲ್ಲಿ ಈ ಸಿನಿಮಾ ಪ್ರಸಾರ ಆಗುತ್ತಿದೆ. ಪ್ರಶಾಂತ್​ ವರ್ಮಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ತೇಜ ಸಜ್ಜಾ (Teja Sajja) ಜೊತೆ ಅಮೃತಾ ಅಯ್ಯರ್​, ವರಲಕ್ಷ್ಮಿ ಶರತ್​ ಕುಮಾರ್, ವೆನ್ನೆಲ ಕಿಶೋರ್​, ವಿನಯ್​ ರೈ, ರಾಜ್​ ದೀಪಕ್​ ಶೆಟ್ಟಿ ಮುಂತಾದವರು ‘ಹನುಮಾನ್​’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಮೂರು ಬೇರೆ ಬೇರೆ ದಿನಾಂಕದಲ್ಲಿ ‘ಹನುಮಾನ್​’ ಸಿನಿಮಾ ಒಟಿಟಿಗೆ ಕಾಲಿಟ್ಟಿತು. ಮಾರ್ಚ್​ 16ರಂದು ‘ಹನುಮಾನ್​’ ಚಿತ್ರದ ಹಿಂದಿ ವರ್ಷನ್​ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಲಭ್ಯವಾಯಿತು. ಬಳಿಕ ಮಾರ್ಚ್​ 18ರಂದು ‘ಜೀ 5’ ಒಟಿಟಿಯಲ್ಲಿ ತೆಲುಗು ವರ್ಷನ್​ ವೀಕ್ಷಣೆಗೆ ಲಭ್ಯವಾಯಿತು. ಏಪ್ರಿಲ್​ 5ರಿಂದ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಕನ್ನಡ, ಮಲಯಾಳ ಹಾಗೂ ತಮಿಳು ವರ್ಷನ್​ನ ಪ್ರಸಾರ ಆರಂಭವಾಗಲಿದೆ.

ಸೂಪರ್ ಹೀರೋ ಕಥೆಯನ್ನು ‘ಹನುಮಾನ್​’ ಸಿನಿಮಾ ಹೊಂದಿದೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ಆಂಜನೇಯನ ಆಶೀರ್ವಾದದಿಂದ ಸೂಪರ್​ ಪವರ್​ ಪಡೆಯುವ ಹಳ್ಳಿ ಯುವಕನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಹನುಮಂತು ಎಂಬ ಪಾತ್ರಕ್ಕೆ ತೇಜ ಸಜ್ಜಾ ಬಣ್ಣ ಹಚ್ಚಿದ್ದಾರೆ. ಸೂಪರ್​ ಹೀರೋ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಅವರ ಬೇಡಿಕೆ ಮತ್ತು ಸಂಭಾವನೆ ಹೆಚ್ಚಾಗಿದೆ.

ಇದನ್ನೂ ಓದಿ: ಅಮಿತ್​ ಶಾ ಭೇಟಿ ಮಾಡಿದ ‘ಹನುಮಾನ್​’ ತಂಡ; ಸಿಕ್ತು ಗೃಹ ಸಚಿವರ ಮೆಚ್ಚುಗೆ

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅನೇಕ ಸ್ಟಾರ್​ ನಟರ ಸಿನಿಮಾಗಳ ಎದುರಿನಲ್ಲಿ ‘ಹನುಮಾನ್​’ ಸಿನಿಮಾ ಬಿಡುಗಡೆ ಆಗಿತ್ತು. ಸ್ಟಾರ್​ ಹೀರೋಗಳ ಸಿನಿಮಾಗಳನ್ನು ಹಿಂದಿಕ್ಕಿ ಈ ಸಿನಿಮಾ ಸೂಪರ್​ ಹಿಟ್​ ಆಯಿತು. ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಈ ಸಿನಿಮಾ ಗೆದ್ದು ಬೀಗಿದೆ. ಈಗ ಈ ಸಿನಿಮಾಗೆ ಸೀಕ್ವೆಲ್​ ಸಿದ್ಧವಾಗುತ್ತಿದ್ದು, ಅದಕ್ಕೆ ‘ಜೈ ಹನುಮಾನ್​’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:22 pm, Tue, 26 March 24

ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ