‘ಅಕ್ಷಯ್ ಕುಮಾರ್​ಗೆ ಯಾವುವೇ ನಷ್ಟ ಇಲ್ಲ’; ನೇರವಾಗಿ ಹೇಳಿದ ನಿರ್ದೇಶಕ

‘ನೋ ಎಂಟ್ರಿ’ಯಲ್ಲಿ ಅನಿಲ್ ಕಪೂರ್ ಹಾಗೂ ಸಲ್ಮಾನ್ ಖಾನ್ ಇದ್ದರು. ‘ಭೂಲ್ ಭುಲಯ್ಯ’ದಲ್ಲಿ ಅಕ್ಷಯ್ ಕುಮಾರ್ ಇದ್ದರು. ಈಗ ಸೀಕ್ವೆಲ್​ಗಳಿಗೆ ಬೇರೆ ಹೀರೋಗಳ ಎಂಟ್ರಿ ಆಗಿದೆ. ಈ ಬಗ್ಗೆ ಅಕ್ಷಯ್​ಗಾಗಲಿ ಸಲ್ಲುಗಾಗಲೀ ಬೇಸರ ಇಲ್ಲ ಎಂದಿದ್ದಾರೆ ಅನೀಸ್.

‘ಅಕ್ಷಯ್ ಕುಮಾರ್​ಗೆ ಯಾವುವೇ ನಷ್ಟ ಇಲ್ಲ’; ನೇರವಾಗಿ ಹೇಳಿದ ನಿರ್ದೇಶಕ
ಅಕ್ಷಯ್
Follow us
ರಾಜೇಶ್ ದುಗ್ಗುಮನೆ
|

Updated on: May 31, 2024 | 7:35 AM

ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಸ್ಟಾರ್ ನಟ. ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಆದರೆ, ಯಾವುದೂ ಗೆಲುವಿನ ನಗೆ ಬೀರಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದೆ. ಈ ಮಧ್ಯೆ ಕೆಲವು ಸೀಕ್ವೆಲ್​ಗಳಿಂದ ಅಕ್ಷಯ್ ಕುಮಾರ್ ಅವರನ್ನು ಕೈ ಬಿಡಲಾಗಿದೆ. ಇದು ಅಕ್ಷಯ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ, ಈ ನಿರ್ಧಾರದಿಂದ ಅಕ್ಷಯ್ ಕುಮಾರ್​ಗೆ ಯಾವುದೇ ನಷ್ಟ ಇಲ್ಲ ಎಂದು ಖ್ಯಾತ ನಿರ್ದೇಶಕರೊಬ್ಬರು ಹೇಳಿದ್ದಾರೆ.

ನಿರ್ದೇಶಕ ಅನೀಸ್ ಬಜ್ಮೀ ಅವರು ಮಾತನಾಡಿದ್ದಾರೆ. ಅವರು ‘ನೋ ಎಂಟ್ರಿ 2’ ಹಾಗೂ ‘ಭೂಲ್ ಭುಲಯ್ಯ 3’ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ನೋ ಎಂಟ್ರಿ’ಯಲ್ಲಿ ಅನಿಲ್ ಕಪೂರ್ ಹಾಗೂ ಸಲ್ಮಾನ್ ಖಾನ್ ಇದ್ದರು. ‘ಭೂಲ್ ಭುಲಯ್ಯ’ದಲ್ಲಿ ಅಕ್ಷಯ್ ಕುಮಾರ್ ಇದ್ದರು. ಈಗ ಸೀಕ್ವೆಲ್​ಗಳಿಗೆ ಬೇರೆ ಹೀರೋಗಳ ಎಂಟ್ರಿ ಆಗಿದೆ. ಈ ಬಗ್ಗೆ ಅಕ್ಷಯ್​ಗಾಗಲಿ ಸಲ್ಲುಗಾಗಲೀ ಬೇಸರ ಇಲ್ಲ ಎಂದಿದ್ದಾರೆ ಅನೀಸ್.

‘ನಾನು ಅಕ್ಷಯ್ ಜೊತೆ ಈಗಲೂ ಒಳ್ಳೆಯ ಬಾಂಧವ್ಯ ಹೊಂದಿದ್ದೇನೆ. ಅವರ ಜೊತೆ ಸಿಂಗ್ ಈಸ್ ಕಿಂಗ್ ಹಾಗೂ ವೆಲ್​ಕಮ್ ಹೆಸರಿನ ಎರಡು ಸುಂದರ ಸಿನಿಮಾ ಮಾಡಿದ್ದೇನೆ. ಭೂಲ್ ಭುಲಯ್ಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿದ್ದು ನಿರ್ಮಾಪಕರು. ನನ್ನನ್ನು ಕೇಳಿದರೆ ನಾನು ಅವರ ಜೊತೆ ಯಾವಾಗಲೂ ಕೆಲಸ ಮಾಡಬೇಕು ಎಂದು ಬಯಸುತ್ತೇನೆ. ಅವರು ಒಳ್ಳೆಯ ನಟ. ನಾವು ಒಳ್ಳೆಯ ಗೆಳೆಯರು. ಅವರು ದೊಡ್ಡ ನಟ. ಅವರು ಸಿನಿಮಾ ಮಾಡುತ್ತಿಲ್ಲ ಎಂದರೆ ಅದು ಬೇರೆಯವರಿಗೆ ನಷ್ಟವೇ ಹೊರತು, ಇದರಿಂದ ಅವರಿಗೆ ಯಾವುದೇ ನಷ್ಟ ಇಲ್ಲ’ ಎಂದಿದ್ದಾರೆ ಅನೀಸ್.

‘ನೋ ಎಂಟ್ರಿ 2’ ಚಿತ್ರದಲ್ಲಿ ಸಲ್ಮಾನ್ ಖಾನ್ ಇಲ್ಲ. ಈ ಬಗ್ಗೆ ಮಾತನಾಡಿರುವ ಅವರು. ‘ಆ ಬಗ್ಗೆ ನಾನು ಸಲ್ಮಾನ್ ಖಾನ್ ಜೊತೆ ಮಾತನಾಡಿಲ್ಲ. ಆದರೆ, ನಾನು ಅವರು ಒಳ್ಳೆಯ ಗೆಳೆಯರು. ಅವರ ಮನಸ್ಸಲ್ಲಿ ಈ ಬಗ್ಗೆ ಏನಾದರೂ ಬೇಸರ ಇದ್ದಿದ್ದರೆ ಅವರು ಹೇಳಿಕೊಳ್ಳುತ್ತಿದ್ದರು. ಅವರು ಏನೂ ಹೇಳಿಲ್ಲ ಎಂದರೆ ಅವರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ ಎಂದೇ ಅರ್ಥ. ಕಳೆದವಾರವಷ್ಟೇ ಅವರನ್ನು ಭೇಟಿ ಮಾಡಿದೆ. ನಾವು ಮುಂದೆ ಸಿನಿಮಾ ಮಾಡುತ್ತೇವೋ ಇಲ್ಲವೋ ಎನ್ನುವುದು ಮಾತ್ರ ಮುಖ್ಯವಾಗುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್

ಅನಿಲ್ ಕಪೂರ್ ಅವರನ್ನು ‘ನೋ ಎಂಟ್ರಿ 2’ ಚಿತ್ರದಿಂದ ಕೈ ಬಿಡುವ ಬಗ್ಗೆ ಬೋನಿ ಕಪೂರ್ ಚರ್ಚೆ ಮಾಡಿರಲಿಲ್ಲ. ಬೋನಿ ಅನೌನ್ಸ್ ಮಾಡುವ ಮೊದಲೇ ಮಾಧ್ಯಮಗಳಲ್ಲಿ ಈ ವಿಚಾರ ಲೀಕ್ ಆಯಿತು. ಇದು ಅನಿಲ್ ಕಪೂರ್ ಕೋಪಕ್ಕೆ ಕಾರಣ ಆಗಿತ್ತು. ಇದಾದ ಬಳಿಕ ಬೋನಿ ಬಳಿ ಅನಿಲ್ ಕಪೂರ್ ಮಾತನಾಡಿಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ