AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಚೋಪ್ರಾಗಾಗಿ ಬೇಲಿ ಹಾರಿ ಮನೆಗೆ ನುಗ್ಗಿದ್ದ ಹುಡುಗ; ಘಟನೆ ವಿವರಿಸಿದ ತಾಯಿ

ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ ಬಂದಿದ್ದ ಪ್ರಿಯಾಂಕಾ ಚೋಪ್ರಾ ಅವರು ಬರೇಲಿಯಲ್ಲಿ ವೆಸ್ಟರ್ನ್ ಡ್ರೆಸ್ ಧರಿಸುತ್ತಿದ್ದರು. ಅವರನ್ನು ಫಾಲೋ ಮಾಡಿಕೊಂಡು ಹುಡುಗರು ಮನೆಗೆ ಬರುತ್ತಿದ್ದರು. ಆ ಘಟನೆಯನ್ನು ಈಗ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ನೆನಪಿಸಿಕೊಂಡಿದ್ದಾರೆ. ಆ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.

ಪ್ರಿಯಾಂಕಾ ಚೋಪ್ರಾಗಾಗಿ ಬೇಲಿ ಹಾರಿ ಮನೆಗೆ ನುಗ್ಗಿದ್ದ ಹುಡುಗ; ಘಟನೆ ವಿವರಿಸಿದ ತಾಯಿ
Priyanka Chopra
ಮದನ್​ ಕುಮಾರ್​
|

Updated on:Feb 28, 2025 | 8:53 PM

Share

ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಅವರು ರಾಜಮೌಳಿ ನಿರ್ದೇಶನದ ಸಿನಿಮಾಗೂ ನಾಯಕಿ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಪ್ರಿಯಾಂಕಾ ಅವರ ಜೀವನದಲ್ಲಿ ಹಲವು ಇಂಟರೆಸ್ಟಿಂಗ್ ಘಟನೆಗಳಿವೆ. ಅವುಗಳ ಬಗ್ಗೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಇನ್ನೂ ಶಾಲಾ ಬಾಲಕಿ ಆಗಿದ್ದಾಗ ಅವರನ್ನು ಫಾಲೋ ಮಾಡಿಕೊಂಡು ಹುಡುಗರು ಬರುತ್ತಿದ್ದರು. ಒಬ್ಬನಂತೂ ಮನೆ ಬೇಲಿ ಹಾರಿ ಬಂದಿದ್ದ!

ಪ್ರಿಯಾಂಕಾ ಚೋಪ್ರಾ ಅವರು 4 ವರ್ಷ ಅಮೆರಿಕದಲ್ಲಿ ಇದ್ದು ಬಂದಿದ್ದರು. ಅವರ ಹಾವ-ಭಾವ, ಭಾಷೆ ಎಲ್ಲವೂ ಬದಲಾಗಿತ್ತು. ಅದರಿಂದ ಹುಡುಗರು ಆಕರ್ಷಿತರಾಗುತ್ತಿದ್ದರು. ಆ ದಿನಗಳನ್ನು ಈಗ ತಾಯಿ ಮಧು ಚೋಪ್ರಾ ನೆನಪಿಸಿಕೊಂಡಿದ್ದಾರೆ. ‘ಪ್ರಿಯಾಂಕಾ ಅಮೆರಿಕದಿಂದ ಬರೇಲಿಗೆ ಬಂದಾಗ ಆಕೆಯ ಡ್ರೆಸ್ಸಿಂಗ್ ಸೆನ್ಸ್ ಭಿನ್ನವಾಗಿತ್ತು. ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಳು. ಕಾನ್ವೆಂಟ್ ಶಾಲೆಗೆ ಅವಳನ್ನು ಕಳಿಸಿದ್ದೆವು. ಒಬ್ಬಳೆ ಹೊರಗೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೆವು. ನಮ್ಮ ಕಾರನ್ನು ಹುಡುಗರು ಫಾಲೋ ಮಾಡುತ್ತಿದ್ದರು’ ಎಂದಿದ್ದಾರೆ ಮಧು ಚೋಪ್ರಾ.

‘ನಮಗೆ ಇದೆಲ್ಲ ಸುರಕ್ಷಿತ ಅಲ್ಲ ಅನಿಸಲು ಶುರುವಾಯಿತು. ಅವಳನ್ನು ಆರ್ಮಿ ಶಾಲೆಗೆ ಸೇರಿಸಲು ತಂದೆ ನಿರ್ಧರಿಸಿದರು. ಇದೆಲ್ಲದರ ನಡುವೆ ಒಬ್ಬ ಹುಡುಗ ಬೇಲಿ ಹಾರಿ ಮನೆಯ ಒಳಗೆ ಬಂದು ಬಿಟ್ಟಿದ್ದ. ಆ ಘಟನೆ ಭಯಾನಕವಾಗಿತ್ತು. ಮರುದಿನವೇ ಇಡೀ ಮನೆಯನ್ನು ದೊಡ್ಡ ಸರಳುಗಳಿಂದ ಮುಚ್ಚಿದೆವು’ ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ.

ಇದನ್ನೂ ಓದಿ
Image
ಖಿನ್ನತೆಯಿಂದ ಜೀವನವೇ ಬೇಡ ಎಂದುಕೊಂಡಿದ್ದ ನಟಿ ಈಗ ಬದುಕುತ್ತಿರುವ ರೀತಿ ನೋಡಿ
Image
ಭಾರತದ ಅತ್ಯಂತ ದುಬಾರಿ ನಟಿಯಾದ ಪ್ರಿಯಾಂಕಾ ಚೋಪ್ರಾ, ಎಲ್ಲ ರಾಜಮೌಳಿ ಕೃಪೆ
Image
ಗುಟ್ಟಾಗಿ ಹೈದರಾಬಾದ್​ಗೆ ಬಂದ ಪ್ರಿಯಾಂಕಾ ಚೋಪ್ರಾ, ಯಾರೊಂದಿಗೆ ಭೇಟಿ?
Image
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ವಿವಾಹ ವಾರ್ಷಿಕೋತ್ಸವ ಹೀಗಿತ್ತು

‘ಎಲ್ಲರ ಗಮನವನ್ನು ಪ್ರಿಯಾಂಕಾ ಸೆಳೆಯುತ್ತಿದ್ದಳು. ಪೋಷಕರಾಗಿ ನಾವು ತುಂಬ ಕಾಳಜಿ ಮಾಡುತ್ತಿದ್ದೆವು. ಯಾವುದೇ ತೊಂದರೆ ಆಗುವುದು ನಮಗೆ ಬೇಕಿರಲಿಲ್ಲ’ ಎಂದು ಮಧು ಚೋಪ್ರಾ ಹೇಳಿದ್ದಾರೆ. ಇಂಥ ಘಟನೆಗಳು ನಡೆದ ಬಳಿಕ ಪ್ರಿಯಾಂಕಾಗೆ ಪಾಶ್ಚಾತ್ಯ ಬಟ್ಟೆಗಳನ್ನು ಹಾಕಲು ತಂದೆ-ತಾಯಿ ಅವಕಾಶ ಕೊಡಲಿಲ್ಲ. ಆಕರ್ಷಕವಲ್ಲದ ಬಟ್ಟೆಗಳನ್ನು ಕೊಡಿಸಿದರು.

ಇದನ್ನೂ ಓದಿ: ರಾಜಮೌಳಿ, ಮಹೇಶ್ ಬಾಬು ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಎಷ್ಟು?

2002ರಲ್ಲಿ ತಮಿಳು ಸಿನಿಮಾ ಮೂಲಕ ಪ್ರಿಯಾಂಕಾ ಚೋಪ್ರಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಬಾಲಿವುಡ್​ ಕೂಡ ಕೈ ಬೀಸಿ ಕರೆಯಿತು. ಬಳಿಕ ಅವರು ತಿರುಗಿ ನೋಡಲೇ ಇಲ್ಲ. ಈಗ ಹಾಲಿವುಡ್ ಪ್ರಾಜೆಕ್ಟ್ ಗಳಲ್ಲೂ ಪ್ರಿಯಾಂಕಾ ಚೋಪ್ರಾ ಮಿಂಚುತ್ತಿದ್ದಾರೆ. ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ಮದುವೆಯಾಗಿ ಅಮೆರಿಕದಲ್ಲಿ ಅವರು ವಾಸವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:53 pm, Fri, 28 February 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ