ಖಿನ್ನತೆಯಿಂದ ಜೀವನವೇ ಬೇಡ ಎಂದುಕೊಂಡಿದ್ದ ನಟಿ ಈಗ ಬದುಕುತ್ತಿರುವ ರೀತಿ ನೋಡಿ
Priyanka Chopra: ಒಂದು ಸಮಯದಲ್ಲಿ ಖಿನ್ನತೆಗೆ ಒಳಗಾಗಿ ಜೀವನವೇ ಬೇಡ ಎಂದುಕೊಂಡಿದ್ದ ನಟಿ ಆ ನಂತರ, ಬಾಲಿವುಡ್ನ ಸ್ಟಾರ್ ನಟಿಯಾಗಿ ಮೆರೆದು ಎಲ್ಲ ಸ್ಟಾರ್ ನಟರೊಟ್ಟಿಗೆ ನಾಯಕಿಯಾಗಿ ನಟಿಸಿದ್ದ ನಟಿ ಈಗ ಬದುಕುತ್ತಿರುವ ರೀತಿ ನೋಡಿದರೆ ಬೆರಗಾಗುತ್ತೀರಿ... ಅಂದಹಾಗೆ ಯಾರು ಈ ನಟಿ? ಇಲ್ಲಿದೆ ಮಾಹಿತಿ...

ಸೆಲೆಬ್ರಿಟಿಗಳ ಜೀವನ ಒಂದು ಹಂತಕ್ಕೆ ಹೋದ ಬಳಿಕ ಎಲ್ಲವೂ ಐಷಾರಾಮಿ ಆಗಿ ಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಪ್ರಿಯಾಂಕಾ ಚೋಪ್ರಾ (Priyanka Chopra). ಬಾಲಿವುಡ್ನಲ್ಲಿ ‘ಡಾನ್’, ‘ಫ್ಯಾಷನ್’, ‘ಮೇರಿ ಕೋಮ್’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಪ್ರಿಯಾಂಕಾಗೆ ಇದೆ. ಅವರು ಅಭಿಮಾನಿಗಳನ್ನು ರಂಜಿಸೋ ಕೆಲಸ ಮುಂದುವರಿಸಿದ್ದಾರೆ. ಅವರ ಬದುಕು ಕೂಡ ಬದಲಾಗಿದೆ. ಅವರು ಐಷಾರಾಮಿಯಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಒಟ್ಟೂ ಆಸ್ತಿ ನೂರಾರು ಕೋಟಿ ರೂಪಾಯಿ ಇದೆ. ಕಷ್ಟಪಟ್ಟು ಅವರು ಗಳಿಕೆಯನ್ನು ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಈ ಹಣವನ್ನು ಹೂಡಿಕೆ ಮಾಡುತ್ತಾರೆ. ಇದರ ಜೊತೆಗೆ ಒಂದಷ್ಟು ಹಣವನ್ನು ಅವರು ಆಭರಣಗಳ ಖರೀದಿಗೆ ಬಳಕೆ ಮಾಡುತ್ತಾರೆ. ದುಬಾರಿ ಜ್ಯುವೆಲರಿ ಹಾಗೂ ಬಟ್ಟೆಗಳನ್ನು ಪ್ರಿಯಾಂಕಾ ಖರೀದಿ ಮಾಡುತ್ತಾರೆ.
2016ರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬರೋಬ್ಬರಿ 21.75 ಕೋಟಿ ರೂಪಾಯಿ ಬೆಲೆಯ ಕಿವಿಯೋಲೆ ತೊಟ್ಟಿದ್ದರು. ಆಸ್ಕರ್ ವೇದಿಕೆ ಮೇಲೆ ಅವರು ಆಭರಣಗಳನ್ನು ತೊಟ್ಟು ಗಮನ ಸೆಳೆದಿದ್ದರು. 50 ಕ್ಯಾರಟ್ ಡೈಮಂಡ್ಗಳಿಂದ ಇವುಗಳನ್ನು ಮಾಡಲಾಗಿತ್ತು. ಅನ್ನೋದು ವಿಶೇಷ. ಕಾರ್ಯಕ್ರಮ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬರೋಬ್ಬರಿ 72 ಕೋಟಿ ರೂಪಾಯಿ ಬೆಲೆಯ ಗೌನ್ ಧರಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ:ಆಫರ್ ಸಿಗದೇ ಬಾಲಿವುಡ್ ತೊರೆದಿದ್ದ ಪ್ರಿಯಾಂಕಾ ಚೋಪ್ರಾ? ಇದರಲ್ಲಿ ಸತ್ಯ ಎಷ್ಟು?
ಮೆಟ್ ಗಲಾ ಈವೆಂಟ್ನಲ್ಲಿ ಪ್ರಿಯಾಂಕಾ ಚೋಪ್ರಾ ಆಗಾಗ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ಅವರು 45 ಲಕ್ಷ ರೂಪಾಯಿ ಬೆಲೆಯ ಉಡುಗೆ ತೊಟ್ಟಿದ್ದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅವರ ಎಂಗೇಜ್ಮೆಂಟ್ ರಿಂಗ್ 2.1 ಕೋಟಿ ರೂಪಾಯಿ ಬೆಲೆಯದ್ದಾಗಿದೆ. ಲಾಸ್ ಏಂಜಲೀಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು 160 ಕೋಟಿ ರೂಪಾಯಿ ಬೆಲೆಯ ಮನೆ ಹೊಂದಿದ್ದಾರೆ. ಮನೆಯ ಫೊಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ.
ಪ್ರಿಯಾಂಕಾ ಚೋಪ್ರಾ ಅವರು ನೆಟ್ವರ್ತ್ 650 ಕೋಟಿ ರೂಪಾಯಿ. ಇವುಗಳಲ್ಲಿ ಬಹುತೇಕವು ಬಾಲಿವುಡ್ನಲ್ಲಿ ಇದ್ದಾಗಲೇ ಗಳಿಸಿದ್ದರು. ಈಗ ಅವರು ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಆಗಾಗ ಅವರು ಭಾರತಕ್ಕೆ ಬರುತ್ತಾರೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದು, ಮಾಲ್ತಿ ಎಂದು ಮಗುವಿಗೆ ನಾಮಕರಣ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Thu, 27 February 25