‘ಮನ್ನತ್’ ತೊರೆದು ಬೇರೆಡೆ ವಾಸಿಸಲು ಆರಂಭಿಸಿದ ಶಾರುಖ್ ಕುಟುಂಬ; ಇಲ್ಲಿದೆ ಹೊಸ ವಿಳಾಸ
ಶಾರುಖ್ ಖಾನ್ ಅವರು ಮನ್ನತ್ ನಿವಾಸದ ನವೀಕರಣ ಕಾರ್ಯಕ್ಕಾಗಿ ತಾತ್ಕಾಲಿಕವಾಗಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಗೌರಿ ಖಾನ್ ಮನ್ನತ್ ಅನ್ನು ಎರಡು ಅಂತಸ್ತುಗಳನ್ನು ಹೆಚ್ಚಿಸುವ ಆಲೋಚನೆಯಲ್ಲಿ ಇದ್ದಾರೆ. ಶಾರುಖ್ ಖಾನ್ ಪಾಲಿ ಹಿಲ್ಸ್‌ನಲ್ಲಿ ಎರಡು ಲಕ್ಷುರಿ ಡುಪ್ಲೆಕ್ಸ್ ಅಪಾರ್ಟ್ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ ಮತ್ತು ಒಟ್ಟು ತಿಂಗಳಿಗೆ 24 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ಪಾವತಿಸುತ್ತಿದ್ದಾರೆ.

ಶಾರುಖ್ ಖಾನ್ ಒಡೆತನದ ಮನ್ನತ್ ನಿವಾಸದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇದು ಬಾಂದ್ರಾದ ಟೂರಿಸ್ಟ್ ಸ್ಪಾಟ್ ರೀತಿಯಲ್ಲಿ ಮಾರ್ಪಾಡಾಗಿದೆ. ಅಭಿಮಾನಿಗಳು ಆಗಾಗ ಇಲ್ಲಿಗೆ ಆಗಮಿಸಿ ಶಾರುಖ್ ಖಾನ್ಗಾಗಿ ಕಾಯುತ್ತಾ ಇರುತ್ತಾರೆ. ಆದರೆ, ಇಲ್ಲಿ ಹುಡುಕಿದರೂ ಇನ್ನು ಶಾರುಖ್ ಖಾನ್ ಅವರು ಸಿಗೋದಿಲ್ಲ! ಏಕೆಂದರೆ ಶಾರುಖ್ ಖಾನ್ ಅವರು ಕುಟುಂಬದ ಜೊತೆ ಮನೆ ತೊರೆದಾಗಿದೆ! ಅವರು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ. ಇದಕ್ಕೆ ಕಾರಣ ಕೂಡ ರಿವೀಲ್ ಆಗಿದೆ.
ಶಾರುಖ್ ಖಾನ್ ಅವರು ಸ್ಟಾರ್ ನಟ. ಹೀಗಾಗಿ, ಅವರು ವಾಸಿಸಲು ‘ಮನ್ನತ್’ ನಿವಾಸ ಸೂಕ್ತ ಸ್ಥಳ. ಇಲ್ಲಿ ಅಭಿಮಾನಿಗಳು ಬರದಂತೆ ತಡೆಯಲು ದೊಡ್ಡ ತಡೆ ಗೋಡೆ ಇದೆ. ಅಲ್ಲದೆ, ಈ ಮನೆಗೆ ದೊಡ್ಡ ಗೇಟ್ ಕೂಡ ಇದೆ. ಆದಾಗ್ಯೂ ಶಾರುಖ್ ಖಾನ್ ಈ ನಿವಾಸ ತೊರೆದು ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಕಾರಣ ಮನೆಯ ನವೀಕರಣ ಕಾರ್ಯ.
ಇದನ್ನೂ ಓದಿ: ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅನ್ನೂ ಹಿಂದಿಕ್ಕಿದ ಅಲ್ಲು ಅರ್ಜುನ್
ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ‘ಮನ್ನತ್’ ನವೀಕರಣ ಕಾರ್ಯದ ಜವಾಬ್ದಾರಿ ಪಡೆದುಕೊಂಡಿದ್ದಾರೆ. ಈ ಮನೆ ಆರು ಅಂತಸ್ತನ್ನು ಹೊಂದಿದ್ದು, ಮತ್ತೆರಡು ಅಂತಸ್ತನ್ನು ಕಟ್ಟುವ ಆಲೋಚನೆ ಇವರಿಗೆ ಇದೆ. ಈ ಮನೆ ಸಮುದ್ರ ತೀರಕ್ಕೆ ಸಮೀಪ ಇರುವುದರಿಂದ ‘ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ’ದ ಒಪ್ಪಿಗೆಯನ್ನು ಗೌರಿ ಖಾನ್ ಕೇಳಿದ್ದಾರೆ. ಇದಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಂತೆ ಇವರು ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ.
ಶಾರುಖ್ ಖಾನ್ ಹೊಸ ವಿಳಾಸ
ಶಾರುಖ್ ಖಾನ್ ಅವರು ಮುಂಬೈನ ಪಾಲಿ ಹಿಲ್ಸ್‌ನಲ್ಲಿ ಎರಡು ಲಕ್ಷುರಿ ಡುಪ್ಲೆಕ್ಸ್ ಅಪಾರ್ಟ್ಮೆಂಟ್ನ ಬಾಡಿಗೆ ಪಡೆದಿದ್ದಾರೆ. ಮೂರು ವರ್ಷಗಳ ಕಾಲ ಒಪ್ಪಂದ ಇರಲಿದೆ. ಮೊದಲ ಅಪಾರ್ಟ್ಮೆಂಟ್ ಜಾಕಿ ಭಗ್ನಾನಿ, ದೀಪ್ಶಿಕಾ ದೇಶ್ಮುಖ್ ಅವರ ಒಡೆತನದಲ್ಲಿ ಇದೆ. ಇದಕ್ಕೆ ಅವರು ತಿಂಗಳಿಗೆ 11.54 ಲಕ್ಷ ರೂಪಾಯಿ ಬಾಡಿಗೆ ನೀಡಬೇಕಿದೆ. ಭದ್ರತಾ ಮೊತ್ತವಾಗಿ 32.97 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಎರಡನೇ ಅಪಾರ್ಟ್ಮೆಂಟ್ ನಿರ್ಮಾಪಕ ವಶು ಭಗ್ನಾನಿ ಹೆಸರಿನಲ್ಲಿ ಇದ್ದು, ಇದಕ್ಕೆ 12.61 ಲಕ್ಷ ರೂಪಾಯಿ ತಿಂಗಳಿಗೆ ಪಾವತಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.