ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅನ್ನೂ ಹಿಂದಿಕ್ಕಿದ ಅಲ್ಲು ಅರ್ಜುನ್

Allu Arjun: ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 300 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಅದರ ಬೆನ್ನಲ್ಲೆ ಅಲ್ಲು ಅರ್ಜುನ್ ಈ ಸಿನಿಮಾಕ್ಕಾಗಿ ದಾಖಲೆ ಮೊತ್ತದ ಸಂಭಾವನೆಯನ್ನೂ ಸಹ ಪಡೆದಿದ್ದಾರೆ.

ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅನ್ನೂ ಹಿಂದಿಕ್ಕಿದ ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Nov 08, 2024 | 12:33 PM

ಸ್ಟಾರ್ ನಟರ ಸಿನಿಮಾಗಳಿಗೆ ಈಗ ಸಾವಿರ ಕೋಟಿ ಎನ್ನುವುದು ಸಹ ಸುಲಭವಾಗಿಬಿಟ್ಟಿದೆ. ಕಲೆಕ್ಷನ್ ಹೆಚ್ಚಾದಂತೆ ನಟರ ಸಂಭಾವನೆಗಳೂ ಸಹ ಭಾರಿ ಏರಿಕೆ ಆಗಿವೆ. ಕೆಲ ವರ್ಷಗಳ ಹಿಂದೆ ಸಹ ಸಿನಿಮಾಗಳು ನೂರು ಕೋಟಿ ಕಲೆಕ್ಷನ್ ಮಾಡುವುದೇ ಕಷ್ಟವಾಗಿತ್ತು. ನೂರು ಕೋಟಿ ಕಲೆಕ್ಷನ್ ಮಾಡಿದರೆ ಅದು ಭಾರಿ ದೊಡ್ಡ ಸುದ್ದಿ, ಈಗ ಸಿನಿಮಾದಲ್ಲಿ ನಟಿಸುವ ನಾಯಕರಿಗೆ ನೂರು ಕೋಟಿಗೂ ಹೆಚ್ಚು ಸಂಭಾವನೆ ಕೊಡಲಾಗುತ್ತಿದೆ. ಹೆಚ್ಚು ಸಂಭಾವನೆ ತೆಗೆದುಕೊಳ್ಳುವುದು ಸಹ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ವರೆಗೆ ಪ್ರಭಾಸ್, ಶಾರುಖ್ ಖಾನ್ ಹಾಗೂ ರಜನೀಕಾಂತ್ ಅವರುಗಳು ಅತಿ ಹೆಚ್ಚು ಸಂಭಾವನೆ ಪಡೆವ ನಟರಾಗಿದ್ದರು. ಆದರೆ ಈ ಮೂವರನ್ನೂ ಮೀರಿಸಿದ್ದಾರೆ ನಟ ಅಲ್ಲು ಅರ್ಜುನ್.

‘ಪುಷ್ಪ’ ಸಿನಿಮಾ ಮೂಲಕ ಮೋಡಿ ಮಾಡಿರುವ ಅಲ್ಲು ಅರ್ಜುನ್, ‘ಪುಷ್ಪ’ ಮೂಲಕ ಕೋವಿಡ್ ಬಳಿಕ ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದ ಸಿನಿಮಾ ಮಾರುಕಟ್ಟೆಯ ವಿಶಾಲತೆಯನ್ನು ಪರಿಚಯ ಮಾಡಿಸಿದರು. ‘ಬಾಹುಬಲಿ’ ಬಳಿಕ ದಕ್ಷಿಣ ಭಾರತದ ಯಾವುದೇ ಸಿನಿಮಾ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿರಲಿಲ್ಲ. ಆದರೆ ಕೋವಿಡ್ ಬಳಿಕ ಬಿಡುಗಡೆ ಆದ ‘ಪುಷ್ಪ’ ಸಿನಿಮಾ ಉತ್ತರ ಭಾರತದಲ್ಲಿ ಭಾರಿ ದೊಡ್ಡ ಹಿಟ್ ಆಗಿದ್ದು ಮಾತ್ರವಲ್ಲದೆ, ಆ ನಂತರ ಬಂದ ಸಿನಿಮಾಗಳೆಲ್ಲವೂ ಉತ್ತರ ಭಾರತದ ಮಾರುಕಟ್ಟೆ ಮೇಲೆ ಹೆಚ್ಚು ಗಮನವಹಿಸುವಂತೆ ಮಾಡಿತು.

ಇದೀಗ ‘ಪುಷ್ಪ 2’ ಬಿಡುಗಡೆಗೆ ಸಜ್ಜಾಗಿದ್ದು, ‘ಪುಷ್ಪ’ ಸಿನಿಮಾದ ಅಭೂತಪೂರ್ವ ಗೆಲುವಿನಿಂದಾಗಿ ಈಗಾಗಲೇ ಭಾರಿ ದೊಡ್ಡ ಮಟ್ಟದ ಹೈಪ್ ಈ ಸಿನಿಮಾಕ್ಕೆ ಸೃಷ್ಟಿಯಾಗಿದೆ. ಈ ಸಿನಿಮಾ ಬಿಡುಗಡೆಗೆ ಮುಂಚೆಯೇ 1000 ಕೋಟಿ ವ್ಯವಹಾರ ನಡೆಸಿದೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಸಿನಿಮಾ ಬಿಡುಗಡೆ ಆದ ಮೊದಲ ದಿನ ಸುಮಾರು 270 ರಿಂದ 300 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ಅಲ್ಲು ಅರ್ಜುನ್ ಸಹ ಈ ಸಿನಿಮಾಕ್ಕಾಗಿ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ 270 ಕೋಟಿ ರೂಪಾಯಿ? ಕರ್ನಾಟಕದಲ್ಲೆಷ್ಟು?

‘ಪುಷ್ಪ 2’ ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಬರೋಬ್ಬರಿ 350 ಕೋಟಿ ಸಂಭಾವನೆ ಪಡೆದಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಭಾರತದ ಇನ್ಯಾವುದೇ ನಟ ಈ ವರೆಗೆ ಪಡೆದುಕೊಂಡಿಲ್ಲ. ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅವರುಗಳು ಸಹ 100-150 ಕೋಟಿ ಸಂಭಾವನೆಗಿಂತಲೂ ಹೆಚ್ಚು ಪಡೆದುಕೊಂಡಿಲ್ಲ. ಆದರೆ ಅಲ್ಲು ಅರ್ಜುನ್ ಒಮ್ಮೆಲೆ 350 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ 350 ಕೋಟಿ ಸಂಭಾವನೆ ಪಡೆಯುತ್ತಿದ್ದಾರಾದರೂ ಸಹ ಇದು ಕೇವಲ ಎರಡು ದಿನದ ಕಲೆಕ್ಷನ್ ಮೊತ್ತ ಎನ್ನಲಾಗುತ್ತಿದೆ. ಸಿನಿಮಾದ ದೇಶದಾದ್ಯಂತ ಭಾರಿ ದೊಡ್ಡ ಮಟ್ಟದ ನಿರೀಕ್ಷೆಗಳಿದ್ದು, ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ‘ಪುಷ್ಪ 2’ ತಂಡ ಸಹ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಈಗಾಗಲೇ ಮಾತುಕತೆ ಮುಗಿಸಿದೆ. ಅನಿಲ್ ತಂಡಾನಿ ಉತ್ತರ ಪ್ರದೇಶದಲ್ಲಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ದಕ್ಷಿಣದ ಈ ವರೆಗಿನ ಯಾವುದೇ ಸಿನಿಮಾಕ್ಕೂ ಸಿಗದಷ್ಟು ಸಂಖ್ಯೆಯ ಚಿತ್ರಮಂದಿರಗಳು ಹಾಗೂ ಸ್ಕ್ರೀನ್​ಗಳನ್ನು ‘ಪುಷ್ಪ 2’ ಸಿನಿಮಾಕ್ಕೆ ಮೀಸಲಿಡಲಾಗಿದೆಯಂತೆ. ‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ