‘ನವಗ್ರಹ’ ರಿ ರೀಲೀಸ್: ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಇಂದು ಮರು ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಅತಿರೇಕದ ವರ್ತನೆ ಮಾಡುವವರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಇಂದು ಮರು ಬಿಡುಗಡೆ ಆಗಿದೆ. ಬೆಂಗಳೂರಿನ ಪ್ರಸನ್ನ ಸೇರಿದಂತೆ ಇನ್ನೂ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾದ ಮರು ಬಿಡುಗಡೆ ಆಗಿದೆ. ಆದರೆ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದರೆ ಅವರನ್ನು ನಿಯಂತ್ರಿಸಲೆಂದು ಪೊಲೀಸರು ಸಹ ಚಿತ್ರಮಂದಿರದ ಬಳಿ ಸನದ್ಧರಾಗಿ ನಿಂತಿದ್ದಾರೆ. ‘ಕರಿಯ’ ಸಿನಿಮಾದ ಸಮಯದಲ್ಲಿ ಆಗಿದ್ದ ಘಟನೆಗಳು ಮರುಕಳಿಸದಂತೆ ತಡೆಯುವ ಯತ್ನದಲ್ಲಿ ನಿರತರಾಗಿದ್ದು, ಚಿತ್ರಮಂದಿರದ ಮುಂದೆ ಅಭಿಮಾನಿಗಳು ಮಾಡುತ್ತಿರುವ ಸಂಭ್ರಮದ ವಿಡಿಯೋ ಚಿತ್ರೀಕರಣವನ್ನು ಪೊಲೀಸರು ಮಾಡುತ್ತಿದ್ದು, ಯಾರಾದರೂ ಮಿತಿ ಮೀರಿ ವರ್ತಿಸಿದರೆ ಕ್ರಮಕ್ಕೆ ಮುಂದಾಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos