Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದ ಬಂಗಾರಪೇಟೆಯಲ್ಲಿ ಅನಾಮತ್ತಾಗಿ ಕುಸಿದುಬಿದ್ದ 3-ಮಹಡಿ ಕಟ್ಟಡ, ಪ್ರಾಣಾಪಾಯವಿಲ್ಲ

ಕೋಲಾರದ ಬಂಗಾರಪೇಟೆಯಲ್ಲಿ ಅನಾಮತ್ತಾಗಿ ಕುಸಿದುಬಿದ್ದ 3-ಮಹಡಿ ಕಟ್ಟಡ, ಪ್ರಾಣಾಪಾಯವಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 08, 2024 | 12:18 PM

ಅನಾಮತ್ತಾಗಿ ನೆಲಕ್ಕುರುಳಿದ ಕಟ್ಟಡ ಬಹಳ ಹಳೆಯದೇನೂ ಅಲ್ಲ, ಕಟ್ಟಡ ನಿರ್ಮಾಣದಲ್ಲಿ ಉಪಯೋಗಿಸಿದ ಸಾಮಗ್ರಿ ಮತ್ತು ನಿರ್ಮಾಣ ವಿಧಾನ ಕಳಪೆಮಟ್ಟದ್ದು ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಎಷ್ಟು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿತ್ತು ಅನ್ನೋದು ಸಹ ಬಹಳ ಮುಖ್ಯ.

ಕೋಲಾರ: ಜಿಲ್ಲೆಯ ಬಂಗಾರಪೇಟೆಯಲ್ಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ, ಅದೃಷ್ಬವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ನಮ್ಮ ಕೋಲಾರ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಕಟ್ಟಡ ವಾಲುತ್ತಿರುವುದು ಗಮನಕ್ಕೆ ಬಂದಕೂಡಲೇ ಅದರಲ್ಲಿ ವಾಸವಾಗಿದ್ದ ಜನರೆಲ್ಲ ಹೊರಗೋಡಿ ಬಂದಿದ್ದಾರೆ. ಬೂದಿಕೋಟೆ ರಾಜ್ ಕುಮಾರ್ ಎನ್ನುವವರಿಗೆ ಸೇರಿದ ಕಟ್ಟಡ ಕುಸಿಯುವಾಗ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಮತ್ತು ಕೆಇಬಿ ಸಿಬ್ಬಂದಿ ಜನರಿಗೆ ನೆರವಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಟ್ಟಡ ಕುಸಿತ ಸ್ಥಳದಲ್ಲೇ ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ