ಬಜ್ಜನಹಳ್ಳಿ ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪರಮೇಶ್ವರ್
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ/ ಪಂಗಡಗಳ ವಿದ್ಯಾರ್ಥಿಗಳಿಗಾಗಿ ಸರ್ಕಾರ ನಡೆಸುವ ಹಾಸ್ಟೆಲ್ ಮತ್ತು ವಸತಿ ಶಾಲೆಗಳು ದುಸ್ಥಿತಿಯಲ್ಲಿವೆ. ಯಾವುದಾದರೂ ದುರ್ಘಟನೆ ನಡೆದಾಗ ಮಾತ್ರ ಸಚಿವ ಅಥವಾ ಅಧಿಕಾರಿಗಳು ಭೇಟಿ ನೀಡುವ ಬದಲು ನಿಯಮಿತವಾಗಿ ಹೋಗಿ ಪರಿಶೀಲನೆ ನಡೆಸುತ್ತಿದ್ದರೆ ಪರಿಸ್ಥಿತಿ ಸುಧಾರಿಸುತ್ತದೆ.
ತುಮಕೂರು: ಜಿಲ್ಲೆಯ ಕೊರಟಗೆರೆ ಗೃಹಸಚಿವ ಜಿ ಪರಮೇಶ್ವರ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವಾಗಿದೆ. ಕ್ಷೇತ್ರದ ಬಜ್ಜನಹಳ್ಳಿಯಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ದಾರುಣ ಸಾವನ್ನಪ್ಪಿದ್ದು ಪರಮೇಶ್ವರ್ ಇಂದು ಶಾಲೆಗೆ ಭೇಟಿ ನೀಡಿ ಶಾಲಾಮಕ್ಕಳ ಊಟದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ವಸತಿ ಶಾಲೆಯ ಸಿಬ್ಬಂದಿ ಸಚಿವರಿಗೆ ಎಲ್ಲವನ್ನು ವಿವರಿಸಿದರು. ಅಡುಗೆ ಪದಾರ್ಥಗಳು, ಅಕ್ಕಿ, ಬೇಳೆ ಮೊದಲಾದವುಗಳನ್ನು ಪರೀಕ್ಷಿಸಿದ ಪರಮೇಶ್ವರ್ ಮಕ್ಕಳ ಹಾಜರಾತಿ ಹಾಗೂ ಇತರ ಸಂಗತಿಗಳ ವಿವರಣೆಯನ್ನು ಪಡೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
Latest Videos