ರೈತ ಆತ್ಮಹತ್ಯೆ: ತಮ್ಮ ವಿರುದ್ಧ ದಾಖಲಾದ FIRಗೆ ತೇಜಸ್ವಿ ಸೂರ್ಯ ಸ್ಪಷ್ಟನೆ
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ನನ್ನ ಸಂಪರ್ಕ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಅಂತ ನಮೂದು ಆಗದೆ. ಬೇಕಿದ್ದರೆ ಪಹಣಿಯ ಪ್ರಿಂಟ್ ತೆಗೆದುಕೊಡುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಹುಬ್ಬಳ್ಳಿ, ನವೆಂಬರ್ 08: ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ (Waqf Board) ಅಂತ ಹೆಸರು ಬಂದಿದ್ದಕ್ಕೆನೇ ರೈತರೊಬ್ಬರು (Farmer) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ನನ್ನ ಸಂಪರ್ಕ ಮಾಡಿದೆ. ಪಹಣಿಯಲ್ಲಿ ವಕ್ಫ್ ಅಂತ ನಮೂದು ಆಗಿದ್ದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕುಟುಂಬಸ್ಥರು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಅಂತ ನಮೂದು ಆಗಿದೆ. ಪಹಣಿಯ ಪ್ರಿಂಟ್ ತೆಗೆದುಕೊಡುತ್ತೇನೆ. ಈ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡ್ಕೊಂಡಿದ್ದಾನೆಂದು ಅವರ ತಂದೆ ಹೇಳಿದ್ದಾರೆ. ಮಾಧ್ಯಮಗಳು ಕೂಡ ಅದನ್ನು ವರದಿ ಮಾಡಿವೆ. ಮಾಧ್ಯಮ ಸ್ವಾತಂತ್ರ್ಯ ಹತ್ತಿಕುವ ಕೆಲಸ ನಡೆಯುತ್ತಿದೆ. ಒತ್ತಡಕ್ಕೆ ಒಳಗಾಗಿ ಪೊಲೀಸರು ಕೇಸ್ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ನಾನು ಜವಾಬ್ದಾರಿ ಸ್ಥಾನದಲ್ಲಿ ಇರೋದ್ರಿಂದ ಪೋಸ್ಟ್ ಡಿಲೀಟ್ ಮಾಡಿದೆ. ರಾಜ್ಯದಲ್ಲಿ ರೈತರ ಜಾಗ ಕಬಳಿಸಲು ವಕ್ಫ್ ಬೋರ್ಡ್ಗೆ ಬೆಂಬಲ. ವಕ್ಫ್ ಬೋರ್ಡ್ನ ಹಳೆಯ ತಪ್ಪುಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದರು.
ರೈತನ ಕುಟುಂಬಸ್ಥರು ಕೂಡ ಮಾಧ್ಯಮದ ಎದುರು ಮಾತಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಈ ಸುದ್ದಿ ಪ್ರಸಾರವಾಗಿದೆ. ಕಾನೂನಿನ ಬಗ್ಗೆ ಗೌರವ ಇರೋದ್ರಿಂದ ಟ್ವೀಟ್ ಡಿಲೀಟ್ ಮಾಡಿದೆ. ಪ್ರಿಯಾಂಕ್ ಖರ್ಗೆ ಶಾಸಕರಾದರೂ ಅವರಿಗೆ ಮಾಡಲು ಏನು ಕೆಲಸ ಇಲ್ಲ ಅನ್ಸುತ್ತೆ. ಹುಡುಕಿ ಹುಡುಕಿ ಎಫ್ಐಆರ್ ದಾಖಲಾಗಿ. ರಾಜ್ಯದ ಜನರ ಬಳಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ