AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ 270 ಕೋಟಿ ರೂಪಾಯಿ? ಕರ್ನಾಟಕದಲ್ಲೆಷ್ಟು?

‘ಪುಷ್ಪ: ದಿ ರೂಲ್’ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಇದೆ. Sacnilk ವರದಿಯ ಪ್ರಕಾರ, ಚಿತ್ರವು ಮೊದಲ ದಿನ 270 ಕೋಟಿ ರೂಪಾಯಿಗಳನ್ನು ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ 200 ಕೋಟಿ ಮತ್ತು ವಿದೇಶದಲ್ಲಿ 70 ಕೋಟಿ ರೂಪಾಯಿ ಗಳಿಕೆ ನಿರೀಕ್ಷಿಸಲಾಗಿದೆ.

‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ 270 ಕೋಟಿ ರೂಪಾಯಿ? ಕರ್ನಾಟಕದಲ್ಲೆಷ್ಟು?
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Nov 08, 2024 | 10:48 AM

Share

‘ಪುಷ್ಪ: ದಿ ರೂಲ್’ ಚಿತ್ರದ ಬಗ್ಗೆ ಫ್ಯಾನ್ಸ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ಮೊದಲ ದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರ ಮೊದಲ ದಿನ 270 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಬಾಕ್ಸ್ ಆಫೀಸ್ ಪಂಡಿತರು ಈ ಕುರಿತು ಲೆಕ್ಕಾಚಾರ ನೀಡಿದ್ದಾರೆ.

ಬಾಕ್ಸ್ ಆಫೀಸ್ ಬಗ್ಗೆ ಲೆಕ್ಕ ನೀಡುವ Sacnilk ಈ ಬಗ್ಗೆ ವರದಿ ಮಾಡಿದೆ. ‘ಪುಷ್ಪ: ದಿ ರೂಲ್’ ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂಬುದರ ಬಗ್ಗೆ ಲೆಕ್ಕ ನೀಡಿದೆ. ಭಾರತದಲ್ಲೇ ಈ ಚಿತ್ರ 200 ಕೋಟಿ ರೂಪಾಯಿ ಕಲೆ ಹಾಕುವ ನಿರೀಕ್ಷೆ ಇದ್ದು, ವಿದೇಶದಿಂದ ಚಿತ್ರಕ್ಕೆ 70 ಕೋಟಿ ರೂಪಾಯಿ ಹರಿದು ಬರುವ ಸಾಧ್ಯತೆ ಇದೆ. ಹಾಗಾದಲ್ಲಿ ಒಟ್ಟಾರೆ ಗಳಿಕೆ 270 ಕೋಟಿ ರೂಪಾಯಿ ಆಗಲಿದೆ.

ಭಾರತದ ಯಾವ ಭಾಗದಿಂದ ಎಷ್ಟು ಕೋಟಿ ರೂಪಾಯಿ ಬರುತ್ತದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ 85 ಕೋಟಿ ರೂಪಾಯಿ, ಕರ್ನಾಟಕದಿಂದ 20 ಕೋಟಿ ರೂಪಾಯಿ, ತಮಿಳುನಾಡು ರಾಜ್ಯದಿಂದ 12 ಕೋಟಿ ರೂಪಾಯಿ ಹಾಗೂ ಕೇರಳದಿಂದ 8 ಕೋಟಿ ರೂಪಾಯಿ ಚಿತ್ರಕ್ಕೆ ಹರಿದು ಬರಲಿದೆ ಎಂಬುದು ಈಗಿನ ಲೆಕ್ಕಾಚಾರ. ಭಾರತದ ಉಳಿದ ಭಾಗದಿಂದ 75 ಕೋಟಿ ರೂಪಾಯಿ ಬರುವ ನಿರೀಕ್ಷೆ ಇದೆ. ಇವಿಷ್ಟು ಸೇರಿದರೆ 200 ಕೋಟಿ ರೂಪಾಯಿ ಆಗಲಿದೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ

‘ಪುಷ್ಪ’ ಚಿತ್ರ ಒಟ್ಟಾರೆ 300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಪುಷ್ಪ 2’ ಚಿತ್ರ ಈ ಗಳಿಕೆಯನ್ನು ಎರಡೇ ದಿನಕ್ಕೆ ತಲುಪುವ ನಿರೀಕ್ಷೆ ಇದೆ. ‘ಪುಷ್ಪ 2’ ಸಿನಿಮಾ ಬಗ್ಗೆ ವಿದೇಶದಲ್ಲೂ ಹೈಪ್ ಸೃಷ್ಟಿ ಆಗಿದ್ದು, ಮೊದಲ ದಿನ ಧಮಾಕಾ ಆಗೋದು ಪಕ್ಕಾ ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.