‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ. ಆದರೆ ಚಿತ್ರತಂಡ ಒಂದು ಹಾಡಿನ ಬಗ್ಗೆ ಇನ್ನೂ ಗೊಂದಲದಲ್ಲಿಯೇ ಇದೆ. ಗೊಂದಲಕ್ಕೆ ಕಾರಣವೇನು?

‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ
ಅಲ್ಲು ಅರ್ಜುನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 06, 2024 | 6:30 PM

ತೆಲುಗು ಚಿತ್ರರಂಗದವರು ಸಾಂಗ್​ನ ಅದ್ದೂರಿಯಾಗಿ ಶೂಟ್ ಮಾಡಲು ಆದ್ಯತೆ ನೀಡುತ್ತಾರೆ. ಸಿನಿಮಾದ ಕೊನೆಯಲ್ಲಿ ಹಾಡನ್ನು ಶೂಟ್ ಮಾಡಲು ಮತ್ತು ಇದಕ್ಕೆ ದೊಡ್ಡ ಸೆಟ್ ಹಾಕಲು ತೆಲುಗು ಮಂದಿ ಬಯಸುತ್ತಾರೆ. ‘ಪುಷ್ಪ’ ಚಿತ್ರದಲ್ಲಿ ಭರ್ಜರಿ ಹಾಡುಗಳು ಇದ್ದವು. ಇವೆಲ್ಲ ಹಿಟ್ ಆಗಿದ್ದವು. ಈಗ ‘ಪುಷ್ಪ 2’ ಚಿತ್ರದಲ್ಲೂ ಸಾಂಗ್ಗೆ ಆದ್ಯತೆ ನೀಡಲಾಗಿದೆ. ಹಲವು ಸಾಂಗ್ಗಳ ಶೂಟ್ ಮಾಡಲಾಗಿದೆ. ಈಗ ಒಂದು ಹಾಡಿನ ಬಗ್ಗೆ ನಿರ್ದೇಶಕ ಸುಕುಮಾರ್ ಅವರು ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

‘ಪುಷ್ಪ’ ಚಿತ್ರದ ಐಟಂ ಸಾಂಗ್ ಹಿಟ್ ಆಗಿತ್ತು. ಅದೇ ರೀತಿ ‘ಪುಷ್ಪ 2’ ಚಿತ್ರದಲ್ಲೂ ವಿಶೇಷ ಸಾಂಗ್ ಇದೆ. ಇದನ್ನು ಸುಕುಮಾರ್ ಈ ವಾರ ಶೂಟ್ ಮಾಡಿ ಮುಗಿಸಲಿದ್ದಾರೆ. ಮತ್ತೊಂದು ಹಾಡಿನ ಶೂಟ್ ಬಗ್ಗೆ ಅವರು ಆಲೋಚನೆ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ನಡುವಿನ ಸಾಂಗ್ ಶೂಟ್ ಬೇಕೆ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿ ಇದ್ದಾರೆ.

‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕ ಈಗಾಗಲೇ ಕೆಲವು ಬಾರಿ ಮುಂದಕ್ಕೆ ಹೋಗಿವೆ. ಈ ಸಿನಿಮಾ ರಿಲೀಸ್ಗೆ ಇರೋದು ಇನ್ನು ಒಂದು ತಿಂಗಳು ಮಾತ್ರ. ಅದಕ್ಕೂ ಮೊದಲು ‘ಪುಷ್ಪ 2’ ಚಿತ್ರದ ಶೂಟ್ನ ಪೂರ್ಣಗೊಳಿಸಬೇಕಿದೆ. ಕೆಲವು ವರದಿಗಳ ಪ್ರಕಾರ ಐಟಂ ಸಾಂಗ್ ಹಾಗೂ ಡ್ಯೂಯೆಟ್ ಸಾಂಗ್ ಪೂರ್ಣಗೊಂಡರೆ ಶೂಟಿಂಗ್ ಮುಗಿದಂತೆ. ಡ್ಯುಯೆಟ್ ಸಾಂಗ್​ನ ಮಾಡದಿರಲು ಸುಕುಮಾರ್ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ಪುಷ್ಪ 2’ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ಹಣದಲ್ಲಿ 3 ಸಿನಿಮಾ ನಿರ್ಮಿಸಬಹುದು

ಸದ್ಯ ‘ಸೂಸೇಕಿ..’ ಹಾಗೂ ಟೈಟಲ್ ಸಾಂಗ್ ‘ಪುಷ್ಪ ಪುಷ್ಪ..’ ರಿಲೀಸ್ ಆಗಿದೆ. ಜಾತ್ರೆಯಲ್ಲಿ ನಡೆಯೋ ಹಾಡನ್ನು ಕೂಡ ರಿಲೀಸ್ ಮಾಡಲು ತಂಡ ರೆಡಿ ಆಗಿದೆ. ಈಗ ಇದರ ಜೊತೆ ಮತ್ತೊಂದು ಹಾಡನ್ನು ಶೂಟ್ ಮಾಡೋದಾದರೆ ಸಿನಿಮಾದ ಅವಧಿ ಕೂಡ ಹೆಚ್ಚುತ್ತದೆ. ಅದನ್ನು ಕೇವಲ ಪ್ರಚಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳೋಣ ಎಂದರೆ ಬಜೆಟ್ ಹೆಚ್ಚಲಿದೆ. ಹೀಗಾಗಿ, ಸುಕುಮಾರ್ ಈ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.

‘ಪುಷ್ಪ 2’ ಚಿತ್ರ ಡಿಸೆಂಬರ್ 5ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್