- Kannada News Photo gallery Radhika Pandit Wish her Brother Gourang on his birthday Entertainment News In Kannada
‘ಹುಟ್ಟುಹಬ್ಬದ ಶುಭಾಶಯ ಗೊಲ್ಲು’; ತಮ್ಮನಿಗೆ ಪ್ರೀತಿಯಿಂದ ವಿಶ್ ಮಾಡಿದ ರಾಧಿಕಾ ಪಂಡಿತ್
‘ಆತ್ಮೀಯ ಗೌರಂಗ್ ನಿನ್ನಂತ ಸಹೋದರ ಪಡೆದ ನಾನು ಅದೃಷ್ಟವಂತೆ’ ಎಂದು ಬರೆದುಕೊಂಡಿರುವ ರಾಧಿಕಾ ಪಂಡಿತ್ ಅವರು, ‘ಹುಟ್ಟು ಹಬ್ಬದ ಶುಭಾಶಯಗಳು ಗೊಲ್ಲು, ಲವ್ ಯೂ’ ಎಂದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
Updated on: Nov 08, 2024 | 11:47 AM

ನಟಿ ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಅವರಿಗೆ ಇಂದು (ನವೆಂಬರ್ 8) ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಆತ್ಮೀಯ ಗೌರಂಗ್ ನಿನ್ನಂತ ಸಹೋದರ ಪಡೆದ ನಾನು ಅದೃಷ್ಟವಂತೆ’ ಎಂದು ಬರೆದುಕೊಂಡಿರುವ ರಾಧಿಕಾ ಪಂಡಿತ್ ಅವರು, ‘ಹುಟ್ಟು ಹಬ್ಬದ ಶುಭಾಶಯಗಳು ಗೊಲ್ಲು, ಲವ್ ಯೂ’ ಎಂದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರ ಸಹೋದರನಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಈ ಫೋಟೋಗಳನ್ನು ಫ್ಯಾನ್ಸ್ ತಮ್ಮ ಪೇಜ್ಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷವೂ ತಪ್ಪದೇ ತಮ್ಮನಿಗೆ ರಾಧಿಕಾ ಪಂಡಿತ್ ಅವರು ಜನ್ಮದಿನದ ಶುಭಾಶಯ ಕೋರುತ್ತಾರೆ. ಈ ಮೊದಲು ರಕ್ಷಾ ಬಂಧನದ ಸಂದರ್ಭದಲ್ಲೂ ರಾಧಿಕಾ ಅವರು ತಮ್ಮನ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದರು.

ರಾಧಿಕಾ ಪಂಡಿತ್ ಅವರು ಸದ್ಯ ಯಾವುದೇ ಸಿನಿಮಾ ಮಾಡುತ್ತಿಲ್ಲ. ಈ ಬಗ್ಗೆ ಫ್ಯಾನ್ಸ್ಗೆ ಬೇಸರ ಇದೆ. ಅವರು ಪತಿ ಯಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.



















