ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಸಿಎಸ್​ಕೆಯೇ ಕಾರಣ ಎಂದ ರಾಬಿನ್ ಉತ್ತಪ್ಪ

Robin Uthappa Blames CSK: ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಸೋತಿರುವುದಕ್ಕೆ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯ ಪಾತ್ರವನ್ನು ದೂಷಿಸಿದ್ದಾರೆ. ರಚಿನ್ ರವೀಂದ್ರ ಅವರಿಗೆ ಸಿಎಸ್​ಕೆ ನೀಡಿದ ಅಭ್ಯಾಸದಿಂದಾಗಿ ನ್ಯೂಜಿಲೆಂಡ್ ಆಟಗಾರರು ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಉತ್ತಪ್ಪ ವಾದಿಸಿದ್ದಾರೆ. ಉತ್ತಪ್ಪ, ಸಿಎಸ್​ಕೆ ಫ್ರಾಂಚೈಸಿ ದೇಶದ ಹಿತಾಸಕ್ತಿಗಿಂತ ತನ್ನ ಆಟಗಾರರನ್ನು ಪ್ರಾಮುಖ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.

ಪೃಥ್ವಿಶಂಕರ
|

Updated on:Nov 07, 2024 | 5:18 PM

ಟೀಂ ಇಂಡಿಯಾ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು. ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ತವರು ನೆಲದಲ್ಲಿ ಇದೇ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಗಿತ್ತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಮಾಜಿ ಆಟಗಾರರು ನಾನಾ ಕಾರಣಗಳನ್ನು ನೀಡಿ ರೋಹಿತ್ ಪಡೆಯನ್ನು ಟೀಕಿಸಿದ್ದರು.

1 / 9
ಏತನ್ಮಧ್ಯೆ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ, ಟೀಂ ಇಂಡಿಯಾದ ಈ ಸೋಲಿಗೆ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಾರಣ ಎಂದು ದೂರಿದ್ದಾರೆ. ಜೊತೆಗೆ ಸಿಎಸ್​ಕೆ ಫ್ರಾಂಚೈಸಿಯ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ ದೇಶದ ಹಿತಾಸಕ್ತಿಗಿಂತ ತನ್ನ ತಂಡದ ಆಟಗಾರರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿದ್ದನ್ನು ಉತ್ತಪ್ಪ ಟೀಕಿಸಿದ್ದಾರೆ.

2 / 9
ವಾಸ್ತವವಾಗಿ, ಭಾರತ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮೊದಲು, ಸಿಎಸ್​ಕೆ ಫ್ರಾಂಚೈಸಿ, ರಚಿನ್ ರವೀಂದ್ರ ಅವರಿಗೆ ಅಭ್ಯಾಸ ಮಾಡಲು ಸೌಲಭ್ಯವನ್ನು ನೀಡಿತ್ತು. ಈ ಅಭ್ಯಾಸದ ಫಲವಾಗಿ ಭಾರತದ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕು ಎಂಬುದನ್ನು ಅರಿತುಕೊಂಡ ರವೀಂದ್ರ, ಇಡೀ ಸರಣಿಯಲ್ಲಿ ವೇಗಿಗಳ ಜೊತೆಗೆ ಸ್ಪಿನ್ನರ್​ಗಳನ್ನು ಸಮರ್ಥವಾಗಿ ಎದುರಿಸಿ ಗೆಲುವಿನ ಇನ್ನಿಂಗ್ಸ್​ಗಳನ್ನು ಆಡಿದ್ದರು.

3 / 9
ಇದೀಗ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಬಗ್ಗೆ ಮಾತನಾಡಿರುವ ರಾಬಿನ್ ಉತ್ತಪ್ಪ ಟೀಂ ಇಂಡಿಯಾದ ಸೋಲಿನ ವಿಶ್ಲೇಷಣೆ ಮಾಡುತ್ತಲೇ ಟೀಂ ಇಂಡಿಯಾ ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಉತ್ತಪ್ಪ, ಸಿಎಸ್‌ಕೆ ಉತ್ತಮ ಫ್ರಾಂಚೈಸಿ. ಆದರೆ ದೇಶದ ಹಿತಾಸಕ್ತಿಗೆ ಸಂಬಂಧಿಸಿದಂತೆ, ಮಿತಿಯನ್ನು ನಿಗದಿಪಡಿಸುವ ಅವಶ್ಯಕತೆಯಿದೆ ಎಂದಿದ್ದಾರೆ.

4 / 9
ಸಿಎಸ್​ಕೆ ನಡೆಯನ್ನು ವಿರೋಧಿಸಿರುವ ಉತ್ತಪ್ಪ, ‘ಫ್ರಾಂಚೈಸಿಗಳು ತಮ್ಮ ಆಟಗಾರರಿಗಿಂತ ದೇಶಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ವಿಶೇಷವಾಗಿ ವಿದೇಶಿ ಆಟಗಾರರ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಭಾರತ ವಿರುದ್ಧ ಸರಣಿ ಆಡಲು ಇಲ್ಲಿಗೆ ಬಂದಿದ್ದ ಕಿವೀಸ್ ತಂಡದ ಆಟಗಾರನಿಗೆ ಅಭ್ಯಾಸ ಮಾಡಲು ಸಿಎಸ್‌ಕೆ ಅಕಾಡೆಮಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

5 / 9
ಇದರ ಲಾಭ ಪಡೆದ ರಚಿನ್ ರವೀಂದ್ರ ಮೊದಲ ಟೆಸ್ಟ್ ಪಂದ್ಯದಲ್ಲಿ 157 ಎಸೆತಗಳಲ್ಲಿ 134 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ರಚಿನ್ ಅವರ ಈ ಇನ್ನಿಂಗ್ಸ್‌ನಿಂದಾಗಿ ನ್ಯೂಜಿಲೆಂಡ್ ಭಾರಿ ಮುನ್ನಡೆ ಸಾಧಿಸಿದಲ್ಲದೆ, ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ಮೊದಲ ಪಂದ್ಯದಲ್ಲೇ ಗೆಲುವಿನ ಸಾಧಿಸಿದರಿಂದ ಕಿವೀಸ್ ತಂಡದ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿತು. ಇದೇ ಆತ್ಮವಿಶ್ವಾಸದಲ್ಲಿ ಇಡೀ ಸರಣಿ ಆಡಿದ ಕಿವೀಸ್ ಐತಿಹಾಸಿಕ ಸರಣಿ ಗೆದ್ದುಕೊಂಡಿತು.

6 / 9
ಆದರೆ ಭಾರತಕ್ಕೆ ಬರುವ ಮೊದಲು, ಶ್ರೀಲಂಕಾ ಪ್ರವಾಸ ಮಾಡಿದ್ದ ನ್ಯೂಜಿಲೆಂಡ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿತ್ತು. ಮೊದಲ ಪಂದ್ಯದಲ್ಲಿ 154 ರನ್​ಗಳಿಂದ ಸೋತಿದ್ದ ಕಿವೀಸ್, ಎರಡನೇ ಪಂದ್ಯದಲ್ಲಿ 63 ರನ್​ಗಳಿಂದ ಸೋತಿತ್ತು. ಹೀಗಾಗಿ ಭಾರತಕ್ಕೆ ಬರುವ ಮುನ್ನ ಇಡೀ ತಂಡದ ಮನೋಬಲ ಕಡಿಮೆಯಾಗಿತ್ತು. ಆದರೆ ಸಿಎಸ್​ಕೆ ನೀಡಿದ ಅಭ್ಯಾಸದ ಆತಿಥ್ಯ ಕಿವೀಸ್ ಗೆಲುವಿಗೆ ಸಹಕಾರಿಯಾಯಿತು ಎಂಬುದು ಉತ್ತಪ್ಪ ಅವರ ಅಭಿಪ್ರಾಯವಾಗಿದೆ.

7 / 9
ಉತ್ತಪ್ಪ ಅವರ ಹೇಳಿಕೆಯಲ್ಲೂ ಸಾಕಷ್ಟು ನಿಜಾಂಶಗಳಿದ್ದು, ಸಿಎಸ್​ಕೆ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದ ರವೀಂದ್ರ, ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 39 ರನ್ ಗಳಿಸಿದರು. ಇದಲ್ಲದೇ ಪುಣೆ ಟೆಸ್ಟ್​ನಲ್ಲಿ ಕಠಿಣ ಪಿಚ್​ನಲ್ಲೂ ಅರ್ಧಶತಕ ಗಳಿಸಿದ್ದರು.

8 / 9
ಇದಕ್ಕೆ ಪೂರಕವಾಗಿ ರಚಿನ್ ಕೂಡ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದರು. ಸರಣಿಗೂ ಮುನ್ನ ಸಿಎಸ್​ಕೆ ಅಕಾಡೆಮಿಗೆ ಬಂದು ವಿವಿಧ ರೀತಿಯ ಪಿಚ್ ಹಾಗೂ ಬೌಲರ್ ಗಳ ವಿರುದ್ಧ ಅಭ್ಯಾಸ ನಡೆಸಿದ್ದು ನನಗೆ ಸಾಕಷ್ಟು ಸಹಕಾರಿಯಾಯಿತು ಎಂದು ಹೇಳಿಕೊಂಡಿದ್ದರು. ಈ ಕಾರಣದಿಂದಾಗಿ, ಇಡೀ ಸರಣಿಯಲ್ಲಿ 51 ರ ಸರಾಸರಿಯಲ್ಲಿ 256 ರನ್ ಗಳಿಸಿದ್ದ ರಚಿನ್, ಇಡೀ ಸರಣಿಯಲ್ಲಿ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ್ದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

9 / 9

Published On - 5:16 pm, Thu, 7 November 24

Follow us
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್