Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫರ್ ಸಿಗದೇ ಬಾಲಿವುಡ್ ತೊರೆದಿದ್ದ ಪ್ರಿಯಾಂಕಾ ಚೋಪ್ರಾ? ಇದರಲ್ಲಿ ಸತ್ಯ ಎಷ್ಟು?

ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್‌ನ ರಾಜಕೀಯದಿಂದ ಅಸಮಾಧಾನಗೊಂಡು ಉದ್ಯಮದಿಂದ ಹೊರಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಶೆರ್ಲಿನ್ ಚೋಪ್ರಾ ಪ್ರತಿಕ್ರಿಯಿಸಿದ್ದು, ಪ್ರಿಯಾಂಕಾ ಅವರ ಯಶಸ್ಸಿಗೆ ಬಾಲಿವುಡ್‌ನ ಪಾತ್ರವನ್ನು ಎತ್ತಿ ತೋರಿಸಿದ್ದರು. ಇತ್ತೀಚೆಗೆ 'ಸಿಟಾಡೆಲ್' ಸರಣಿಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ, ಈಗ ಮಹೇಶ್ ಬಾಬು ಜೊತೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆಫರ್ ಸಿಗದೇ ಬಾಲಿವುಡ್ ತೊರೆದಿದ್ದ ಪ್ರಿಯಾಂಕಾ ಚೋಪ್ರಾ? ಇದರಲ್ಲಿ ಸತ್ಯ ಎಷ್ಟು?
ಪ್ರಿಯಾಂಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 11, 2025 | 7:49 AM

ಪ್ರಿಯಾಂಕಾ ಚೋಪ್ರಾ ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರ ಸೀರಿಸ್ ‘ಸಿಟಾಡೆಲ್’ ರಿಲೀಸ್ ಆಗಿದೆ. ಈಗ ಅವರು ಮಹೇಶ್ ಬಾಬು ಜೊತೆ ಅವರು ಸಿನಿಮಾ ಮಾಡುತ್ತಿದ್ದು, ಇದಕ್ಕಾಗಿ ಭಾರತಕ್ಕೆ ಮರಳಿದ್ದಾರೆ. ಈ ಮೊದಲು ಅವರು ಬಾಲಿವುಡ್ ತೊರೆಯುವ ಹೇಳಿಕೆಯ ಮೂಲಕ ಸಾಕಷ್ಟು ಸುದ್ದಿ ಆಗಿದ್ದರು. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಬಾಲಿವುಡ್ ಉದ್ಯಮದ ಕೊಳಕು ರಾಜಕೀಯವನ್ನು ಬಹಿರಂಗಪಡಿಸಿದ್ದರು.

ಬಾಲಿವುಡ್ ರಾಜಕೀಯದಿಂದ ತಾವು ಅಸಮಾಧಾನಗೊಂಡಿದ್ದೇನೆ ಮತ್ತು ಕೆಲಸ ಸಿಗುವುದು ನಿಂತಿದೆ ಎಂದು ಪ್ರಿಯಾಂಕಾ ಹೇಳಿದ್ದರು. ಇದೇ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆಯಬೇಕಾಯಿತು. ಪ್ರಿಯಾಂಕಾ ಚೋಪ್ರಾ ಅವರ ಈ ಬಹಿರಂಗಪಡಿಸುವಿಕೆಯ ನಂತರ, ಶೆರ್ಲಿನ್ ಚೋಪ್ರಾ ನಟಿಯನ್ನು ಟೀಕಿಸಿದ್ದರು.

ಪ್ರಿಯಾಂಕಾ ಚೋಪ್ರಾಗೆ ಬಾಲಿವುಡ್‌ನಲ್ಲಿ ಕೆಲಸ ಸಿಗುತ್ತಿಲ್ಲ ಎಂಬ ಬಹಿರಂಗದ ಬಗ್ಗೆ ಮಾತನಾಡಿದ ಶೆರ್ಲಿನ್ ಚೋಪ್ರಾ,‘ಅವರಿಗೆ ಕೆಲಸ ಸಿಗಲಿಲ್ಲ ಎಂದು ನಾನು ಭಾವಿಸುವುದಿಲ್ಲ. ಪ್ರಿಯಾಂಕಾ ಅವರು ಶಾರುಖ್ ಖಾನ್, ಕರಣ್ ಜೋಹರ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಅನೇಕ ದೊಡ್ಡ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರಿಗೆ ಒಂದಲ್ಲ, ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ಹಲವು ಅವಕಾಶಗಳನ್ನು ನೀಡಿದರು. ಪ್ರಿಯಾಂಕಾ ತನ್ನ ವೃತ್ತಿಜೀವನವನ್ನು ಮುನ್ನಡೆಸಲು ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡರು, ಆದ್ದರಿಂದ ಅವರು ಈ ವಿಷಯಗಳಿಗಾಗಿ ಬಾಲಿವುಡ್‌ಗೆ ಧನ್ಯವಾದ ಹೇಳಬೇಕು’ ಎಂದಿದ್ದಾರೆ ಶೆರ್ಲಿನ್

ಶೆರ್ಲಿನ್ ಚೋಪ್ರಾ ಇಲ್ಲಿಗೆ ನಿಲ್ಲಲಿಲ್ಲ. ‘ದೇವರು ತನಗೆ ಎಲ್ಲವನ್ನೂ ಕೊಟ್ಟಿದ್ದಾನೆ ಮತ್ತು ತಾನು ಅತೃಪ್ತನಾಗಿರಲು ಯಾವುದೇ ಕಾರಣವಿಲ್ಲ. ಈಗ ಬಾಲಿವುಡ್ ಅವರಿಗೆ ಕೆಲಸ ಕೊಡಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಪ್ರಿಯಾಂಕಾ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ನಾನು ಹಾಗೆ ಹೇಳಿದರೆ ಈ ವಿಷಯಗಳು ನನಗೆ ಅನ್ವಯಿಸುತ್ತವೆ. ಜನರು ನನ್ನ ಮಾತುಗಳನ್ನು ನಂಬಬಹುದು ಆದರೆ ಪ್ರಿಯಾಂಕಾ ಈಗ ಇದನ್ನೆಲ್ಲಾ ಹೇಳುವುದು ಸರಿಯಲ್ಲ’ ಎಂದಿದ್ದರು.

ಇದನ್ನೂ ಓದಿ: ಮಹೇಶ್ ಬಾಬು ಜೊತೆಗಿನ ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಪ್ರಿಯಾಂಕಾ ಚೋಪ್ರಾ?

ಮಹೇಶ್ ಬಾಬು ನಟನೆಯ ಹೊಸ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಇದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಹಲವು ವರ್ಷಗಳ ಬಳಿಕ ಪ್ರಿಯಾಂಕಾ ಭಾರತದ ರಂಗಕ್ಕೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.