ರಶ್ಮಿಕಾ ಮಂದಣ್ಣ ಸಿನಿಮಾಗೆ ಸೋಲಿನ ಭಯ? ‘ಛಾವ’ ಚಿತ್ರಕ್ಕೆ ಇದೆಂಥ ಪರಿಸ್ಥಿತಿ
ನಟಿ ರಶ್ಮಿಕಾ ಮಂದಣ್ಣ ಅವರು ಸತತ ಗೆಲುವು ಕಂಡಿದ್ದಾರೆ. ಈಗ ಅವರು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಟ್ರೆಂಡ್ ಬೇರೆ ರೀತಿ ಇದೆ. ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟಿಸಿರುವ ‘ಛಾವ’ ಸಿನಿಮಾದ ಪ್ರಮೋಷನ್ ಹಂತದಲ್ಲೇ ನಿರೀಕ್ಷಿತ ಪ್ರಮಾಣದ ಹೈಪ್ ಕಾಣಿಸುತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಬಾಲಿವುಡ್ನಲ್ಲಿ ಈ ವಾರ (ಫೆಬ್ರವರಿ 14) ಬಹುನಿರೀಕ್ಷಿತ ‘ಛಾವ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೇ ಬುಕಿಂಗ್ ಕೂಡ ಶುರುವಾಗಿದೆ. ಆದರೆ ಮುಂಗಡ ಟಿಕೆಟ್ ಬುಕಿಂಗ್ನಲ್ಲಿ ಜನರ ಆಸಕ್ತಿ ಅಷ್ಟಾಗಿ ಕಾಣಿಸುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ಗಳು ಬುಕ್ ಆಗುತ್ತಿಲ್ಲ. ಹಾಗಾಗಿ ಆರಂಭದಲ್ಲೇ ಈ ಚಿತ್ರಕ್ಕೆ ಸೋಲಿನ ಭಯ ಕಾಣುತ್ತಿದೆ.
ಐತಿಹಾಸಿಕ ಕಥಾಹಂದರವನ್ನು ಇಟ್ಟುಕೊಂಡು ‘ಛಾವ’ ಸಿನಿಮಾ ಮೂಡಿಬಂದಿದೆ. ಛತ್ರಪತಿ ಶಂಬಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ವಿಕ್ಕಿ ಕೌಶಲ್ ಅವರು ಶಂಬಾಜಿ ಮಹಾರಾಜ್ ಪಾತ್ರವನ್ನು ನಿಭಾಹಿಸಿದ್ದಾರೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸ್ಟಾರ್ ಕಲಾವಿದರು ಇದ್ದರೂ ಕೂಡ ಬುಕ್ ಮೈ ಶೋನಲ್ಲಿ ವೇಗವಾಗಿ ಟಿಕೆಟ್ ಬುಕಿಂಗ್ ಆಗುತ್ತಿಲ್ಲ.
ಪ್ರಚಾರದ ವಿಚಾರದಲ್ಲಿ ‘ಛಾವ’ ಸಿನಿಮಾ ಹಿಂದೆ ಬಿದ್ದಿದೆಯಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಸೋಶಿಯಲ್ ಮೀಡಿಯಾದಲ್ಲಿ ಕೂಡ ದೊಡ್ಡ ಹೈಪ್ ಕಾಣಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ‘ಛಾವ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪೆಟ್ಟು ಬೀಳಲಿದೆ. ಈ ಮೊದಲು ಬಾಲಿವುಡ್ನಲ್ಲಿ ಅನೇಕ ಐತಿಹಾಸಿಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇನ್ನು ಕೆಲವು ಫ್ಲಾಪ್ ಆಗಿವೆ. ಈಗ ‘ಛಾವ’ ಸಿನಿಮಾದ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗಿದೆ.
ಇದನ್ನೂ ಓದಿ: ಕಾಲು ನೋವಿನಿಂದ ಸಂಪೂರ್ಣ ಚೇತರಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಮತ್ತು ‘ಪುಷ್ಪ 2’ ಸಿನಿಮಾದಿಂದ ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಷ್ಟೋ ಹೀರೋಗಳಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ‘ಛಾವ’ ಸಿನಿಮಾದಲ್ಲಿ ಅವರ ಮ್ಯಾಜಿಕ್ ಮರುಕಳುಸುತ್ತಾ ಅಥವಾ ಇಲ್ಲವಾ ಎಂಬುದು ಫೆಬ್ರವರಿ 14ರಂದು ಗೊತ್ತಾಗಲಿದೆ. ಒಂದು ವೇಳೆ ಸಿನಿಮಾದ ಬಿಡುಗಡೆ ಬಳಿಕ ಉತ್ತಮ ವಿಮರ್ಶೆ ಮತ್ತು ಬಾಯಿ ಮಾತಿನ ಪ್ರಚಾರ ಸಿಕ್ಕಿರೆ ಖಂಡಿತಾ ಸಿನಿಮಾ ಗೆಲ್ಲಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.