Updated on: Dec 08, 2024 | 8:52 AM
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ವಿವಾಹವಾಗಿ ಆರು ವರ್ಷಗಳಾಗಿವೆ. 2018 ರ ಡಿಸೆಂಬರ್ ತಿಂಗಳಲ್ಲಿ ಅವರು ವಿವಾಹವಾಗಿದ್ದರು. ಭಾರತದಲ್ಲಿ ಬಲು ಅದ್ಧೂರಿಯಾಗಿ ಅವರ ವಿವಾಹ ನಡೆದಿತ್ತು.
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರುಗಳು ಇತ್ತೀಚೆಗಷ್ಟೆ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮಗಳನ್ನು ಕರೆದುಕೊಂಡು ಪ್ರವಾಸ ಹೋಗಿದ್ದಾರೆ ಈ ಜೋಡಿ.
ಮಗಳೊಟ್ಟಿಗೆ ಹಲವೆಡೆ ಸುತ್ತಾಟ ನಡೆಸಿರುವ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ, ಮಗಳು ಮಾಲತಿಗೆ ‘ಮೋನಾ 2’ ಸಿನಿಮಾ ಸಹ ತೋರಿಸಿದ್ದಾರೆ. ಮಗಳಿಗೆ ಕ್ರಿಸ್ಮಸ್ ಟ್ರೀ ತೋರಿಸಿದ್ದಾರೆ. ಮಗಳಿಗೆ ಸಿಂಗಾರ ಸಹ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ 2016-17 ರ ಸಮಯದಲ್ಲಿ ಬಾಲಿವುಡ್ನಿಂದ ಹಾಲಿವುಡ್ಗೆ ಶಿಫ್ಟ್ ಆದರು. 2017 ರಲ್ಲಿ ಅವರು ಪಾರ್ಟಿಯೊಂದರಲ್ಲಿ ನಿಕ್ ಜೋನಸ್ ಅನ್ನು ಭೇಟಿಯಾದರು. ಅಲ್ಲಿಂದ ಅವರ ನಡುವೆ ಪ್ರೀತಿ ಬೆಳೆಯಿತು.
ನಿಕ್ ಜೋನಸ್ ಅನ್ನು ವಿವಾಹವಾದ ಬಳಿಕ ಪ್ರಿಯಾಂಕಾ ಚೋಪ್ರಾ ಸಂಪೂರ್ಣವಾಗಿ ಹಾಲಿವುಡ್ನಲ್ಲೇ ಸೆಟಲ್ ಆಗಿದ್ದಾರೆ. ಬೆವರ್ಲಿ ಹಿಲ್ಸ್ ನಲ್ಲಿ ಒಂದು ಮನೆ ಹಾಗೂ ಲಂಡನ್ನಲ್ಲಿ ಒಂದು ಮನೆಯನ್ನು ಪ್ರಿಯಾಂಕಾ ಹೊಂದಿದ್ದಾರೆ.
ಇತ್ತೀಚೆಗಷ್ಟೆ ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರುಗಳು ಸೆರೋಗಸಿ ವಿಧಾನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಮಗುವಿಗೆ ಮಾಲತಿ ಜೋನಸ್ ಎಂದು ಹೆಸರಿಟ್ಟಿದೆ ಈ ಜೋಡಿ.