ಅಲ್ಲು ಅರ್ಜುನ್ಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ನಿರ್ದೇಶಕ ಅಟ್ಲಿ ಮಾಸ್ಟರ್ ಪ್ಲ್ಯಾನ್
ಖ್ಯಾತ ನಿರ್ದೇಶಕ ಅಟ್ಲಿ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಪ್ರಾಜೆಕ್ಟ್ಗೆ ಈಗಾಗಲೇ ತಯಾರಿ ನಡೆಯುತ್ತಿದೆ. ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಿಕೊಳ್ಳಲು ಅಟ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂದು ವರದಿ ಆಗಿದೆ.

ನಿರ್ದೇಶಕ ಅಟ್ಲಿ (Atlee) ಅವರಿಗೆ ಸಖತ್ ಬೇಡಿಕೆ ಇದೆ. ಬಾಲಿವುಡ್ನಲ್ಲಿ ‘ಜವಾನ್’ ಸಿನಿಮಾ ಮಾಡಿ ಭಾರಿ ಗೆಲುವು ಕಂಡ ಅವರ ಜೊತೆ ಸಿನಿಮಾ ಮಾಡಲು ಘಟಾನುಘಟಿ ಸ್ಟಾರ್ ನಟರು ಕಾಯುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಅವರು ಅಟ್ಲಿ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಮಾತು ಕೇಳಿಬಂದಿದೆ. ಆ ಸಿನಿಮಾಗೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಈ ಸಿನಿಮಾದ ಹೀರೋಯಿನ್ ಆಯ್ಕೆ ಬಗ್ಗೆ ಅಟ್ಲಿ ಅವರು ತಲೆ ಕೆಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಅವರು ಈಗ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಜೊತೆ ಮಾತುಕಥೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಅವರು ಇತ್ತೀಚಿನ ಕೆಲವು ವರ್ಷಗಳಿಂದ ಹಾಲಿವುಡ್ನಲ್ಲೇ ಬ್ಯುಸಿ ಆಗಿದ್ದಾರೆ. ಭಾರತೀಯ ಸಿನಿಮಾಗಳಿಂದ ಅವರು ದೂರ ಉಳಿದುಕೊಂಡಿದ್ದಾರೆ. ಈಗ ಅವರು ಮೊದಲ ಟಾಲಿವುಡ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಆ ಬಳಿಕ ಅವರು ಅಟ್ಲಿ ನಿರ್ದೇಶನದ ಸಿನಿಮಾವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಅಟ್ಲಿ ಅವರಿಗೆ ಅಲ್ಲು ಅರ್ಜುನ್ ಜೊತೆಗಿನ ಸಿನಿಮಾ ಚಾಲೆಂಜಿಂಗ್ ಆಗಿರಲಿದೆ. ಯಾಕೆಂದರೆ, ‘ಪುಷ್ಪ 2’ ಬಳಿಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಬೇಕು. ಆ ಒತ್ತಡದಲ್ಲಿ ಇರುವ ಅಟ್ಲಿ ಅವರು ಪಾತ್ರವರ್ಗವನ್ನು ಬಲಪಡಿಸುವ ಪಯತ್ನದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾದಿಂದ ಪ್ರಿಯಾಂಕಾ ಚೋಪ್ರಾ ಅವರು ಟಾಲಿವುಡ್ನಲ್ಲಿ ಧೂಳೆಬ್ಬಿಸುವುದು ಖಚಿತ. ಆ ಬಳಿಕ ಅವರು ಅಲ್ಲು ಅರ್ಜುನ್ಗೆ ಜೋಡಿಯಾದರೆ ಭರ್ಜರಿ ಹೈಪ್ ಸಿಗಲಿದೆ ಎಂಬುದು ಅಟ್ಲಿ ಅವರ ಮಾಸ್ಟರ್ ಪ್ಲ್ಯಾನ್ ಆದಂತಿದೆ.
ಇದನ್ನೂ ಓದಿ: ನಿರ್ಮಾಪಕರ ಜೊತೆ ಕಿರಿಕ್; ಸಲ್ಲುಗೆ ಮಾಡಬೇಕಿದ್ದ ಸಿನಿಮಾನ ಅಲ್ಲು ಅರ್ಜುನ್ಗೆ ಶಿಫ್ಟ್ ಮಾಡಿದ ಅಟ್ಲಿ
ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯಕ್ಕೆ ಎಲ್ಲವೂ ಅಂತೆ-ಕಂತೆಯ ಹಂತದಲ್ಲಿದೆ. ಅಟ್ಲಿ ಅವರು ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಯಶಸ್ಸಿನ ಬಳಿಕ ಬ್ರೇಕ್ ಪಡೆದಿದ್ದಾರೆ. ಅಟ್ಲಿ, ಅಲ್ಲು ಅರ್ಜುನ್, ಪ್ರಿಯಾಂಕಾ ಚೋಪ್ರಾ ಕಾಂಬಿನೇಷನ್ ಇದ್ದರೆ ಖಂಡಿತವಾಗಿಯೂ ನಿರೀಕ್ಷೆ ಜಾಸ್ತಿ ಆಗಲಿದೆ. ಪ್ರಿಯಾಂಕಾ ಚೋಪ್ರಾ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಇದೆ. ಹಾಗಾಗಿ ಅವರು ನಾಯಕಿಯಾದರೆ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.