AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕರ್ಷಕವಾಗಿದೆ ‘ಅಜ್ಞಾತವಾಸಿ’ ಟ್ರೇಲರ್​; ‘ಗುಳ್ಟು’ ನಿರ್ದೇಶಕನಿಗೆ ಹೇಮಂತ್ ರಾವ್ ಸಾಥ್

ಜನಾರ್ಧನ್ ಚಿಕ್ಕಣ್ಣ ಅವರು ನಿರ್ದೇಶನ ಮಾಡಿರುವ ‘ಅಜ್ಞಾತವಾಸಿ’ ಸಿನಿಮಾ ಏಪ್ರಿಲ್​ 11ರಂದು ರಿಲೀಸ್ ಆಗಲಿದೆ. ರಂಗಾಯಣ ರಘು ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 2 ನಿಮಿಷ 6 ಸೆಕೆಂಡ್ ಅವಧಿಯ ‘ಅಜ್ಞಾತವಾಸಿ’ ಟ್ರೇಲರ್ ಸದ್ದು ಮಾಡುತ್ತಿದೆ. ಹೇಮಂತ್ ಎಂ. ರಾವ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಆಕರ್ಷಕವಾಗಿದೆ ‘ಅಜ್ಞಾತವಾಸಿ’ ಟ್ರೇಲರ್​; ‘ಗುಳ್ಟು’ ನಿರ್ದೇಶಕನಿಗೆ ಹೇಮಂತ್ ರಾವ್ ಸಾಥ್
Agnyathavasi Movie Poster
ಮದನ್​ ಕುಮಾರ್​
|

Updated on: Apr 04, 2025 | 7:46 PM

Share

ಕನ್ನಡ ಚಿತ್ರರಂಗದಲ್ಲಿ ಜನಾರ್ದನ್ ಚಿಕ್ಕಣ್ಣ (Janardhan Chikkanna) ಅವರು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ‘ಗುಳ್ಟು’ ಸಿನಿಮಾ ಮೂಲಕ ಮೋಡಿ ಮಾಡಿದ ಅವರು ಈಗ ‘ಅಜ್ಞಾತವಾಸಿ’ (Agnyathavasi) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆಯುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಸಿನಿಮಾದ ಟ್ರೇಲರ್​ (Agnyathavasi Movie Trailer) ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಅಜ್ಞಾತವಾಸಿ’ ಸಿನಿಮಾದಲ್ಲಿ ಒಂದು ಮರ್ಡರ್ ಮಿಸ್ಟರಿ ಕಹಾನಿ ಇದೆ. ಏಪ್ರಿಲ್ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಹೇಮಂತ್ ಎಂ. ರಾವ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ರಂಗಾಯಣ ರಘು, ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರು ‘ಅಜ್ಞಾತವಾಸಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಕಥೆ. ಈ ಬಗ್ಗೆ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರು ಮಾತನಾಡಿದರು. ‘ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ ಇದು. ಆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಯಾಗಿ 25 ವರ್ಷ ಆಗಿರುತ್ತದೆ. ಯಾವುದೇ ಸಣ್ಣ ಕೇಸ್ ಸಹ ಅಲ್ಲಿ ದಾಖಲಾಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದು ಈ ಕೇಸ್ ಬಗೆಹರಿಸುತ್ತಾನೆ. ಗುಳ್ಟು ಚಿತ್ರದ ಬಳಿಕ ಈ ಕಥೆ ನನ್ನನ್ನು ಎಕ್ಸೈಟ್ ಮಾಡಿತು’ ಎಂದು ಅವರು ಹೇಳಿದರು.

ಟ್ರೇಲರ್​ ಬಿಡುಗಡೆ ವೇಳೆ ನಿರ್ಮಾಪಕ ಹೇಮಂತ್ ಎಂ. ರಾವ್ ಮಾತನಾಡಿದರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನಾನು ಹಾಗೂ ರಕ್ಷಿತ್ ಶೆಟ್ಟಿ ಮಾತಾಡಿಕೊಳ್ಳುತ್ತಿದ್ದೇವು. ಈ ರೀತಿಯ ಚಿತ್ರಗಳನ್ನು ಮಾಡಲು ಯಾಕೆ ಇಷ್ಟು ಒದ್ದಾಡಬೇಕು? ನಾವಿಬ್ಬರು ಈ ರೀತಿಯ ಒಳ್ಳೆಯ ಕಥೆಗೆ ಬಂಡವಾಳ ಹಾಕಲು ಅಂದು ತೀರ್ಮಾನಿಸಿದೆವು. ಹಾಗಾಗಿ, ಅಜ್ಞಾತವಾಸಿ ಸಿನಿಮಾ ಮಾಡಿದ್ದೇನೆ. ಜನಾರ್ಧನ್ ಚಿಕ್ಕಣ್ಣ ನಮ್ಮ ಚಿತ್ರರಂಗದ ಒಳ್ಳೆಯ ನಿರ್ದೇಶಕ. ಜನರನ್ನು ನಂಬಿ ಈ ಸಿನಿಮಾ ಮಾಡಿದ್ದೇವೆ’ ಎಂದರು ಹೇಮಂತ್ ಎಂ. ರಾವ್.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಅಜ್ಞಾತವಾಸಿ ಸಿನಿಮಾ ಟ್ರೇಲರ್:

ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ರಂಗಾಯಣ ರಘು ಅವರು ಸಂತಸ ವ್ಯಕ್ತಪಡಿಸಿದರು. ‘ಒಬ್ಬರಿಗೊಬ್ಬರು ನಿರ್ದೇಶಕರು ಬೆಳೆಯಲಿ ಎಂದು ಈ ರೀತಿ ಸಿನಿಮಾಗಳನ್ನು ಮಾಡುತ್ತಿರುವುದು ಸಂತಸದ ವಿಚಾರ. ಜನಾರ್ಧನ್ ಕಥೆ ಹೇಳಿದಾಗ ಎಲ್ಲ ಪಾತ್ರಗಳ ಮೇಲೆ ನನಗೆ ಹೊಟ್ಟೆ ಕಿಚ್ಚು ಬಂದಿತ್ತು. ಅಷ್ಟು ಚೆನ್ನಾಗಿವೆ ಈ ಸಿನಿಮಾದ ಪಾತ್ರಗಳು. ಇದು ಮರ್ಡರ್ ಮಿಸ್ಟರಿ ಇರುವ ಸಿನಿಮಾ’ ಎಂದು ರಂಗಾಯಣ ರಘು ಹೇಳಿದರು.

ಇದನ್ನೂ ಓದಿ: ತುಂಬ ಸಾಲ ಮಾಡಿದ್ದೇನೆ, ಎಲ್ಲವನ್ನೂ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್

ಚರಣ್ ರಾಜ್ ಅವರು ‘ಅಜ್ಞಾತವಾಸಿ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅದ್ವೈತ್ ಗುರುಮೂರ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ‘ದಾಕ್ಷಾಯಿಣಿ ಟಾಕೀಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಕೃಷ್ಣರಾಜ್ ಅವರು ಕಥೆ ಬರೆದ್ದಾರೆ. ಭರತ್ ಎಂ.ಸಿ. ಅವರು ಸಂಕಲನ ಮಾಡಿದ್ದಾರೆ. ಉಲ್ಲಾಸ್ ಹೈದೂರು ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ