‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಸಂಪೂರ್ಣ ಮಾಹಿತಿ ಕೊಟ್ಟ ನಿರ್ಮಾಪಕ
‘ಪುಷ್ಪ 2’ ಚಿತ್ರದ ಬೃಹತ್ ಯಶಸ್ಸಿನ ನಂತರ, ‘ಪುಷ್ಪ 3’ ಚಿತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ನಿರ್ಮಾಪಕ ರವಿ ಶಂಕರ್ ಅವರು 2028 ರ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಖ್ಯ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ.

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ ರಿಲೀಸ್ ಆದಾಗ ಅದು ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ಪಾರ್ಟ್ ಬರೋಬ್ಬರಿ 1,700 ಕೋಟಿ ರೂಪಾಯಿ ಕಲೆ ಹಾಕಿದೆ. ಈ ಮೂಲಕ ಚಿತ್ರ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. 2024ರಲ್ಲಿ ಹಲ್ಚಲ್ ಎಬ್ಬಿಸಿದ ‘ಪುಷ್ಪ 2’ (Pushpa 2 Movie) ಚಿತ್ರಕ್ಕೆ ಈಗ ಮೂರನೇ ಪಾರ್ಟ್ ಬರುತ್ತಿದೆ. ನಿರ್ಮಾಪಕರು ಸಿನಿಮಾ ರಿಲೀಸ್ ಆಗೋದು ಯಾವಾಗ ಎನ್ನುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಸಾಮಾನ್ಯ ವ್ಯಕ್ತಿಯಾಗಿದ್ದ ಪುಷ್ಪರಾಜ್ ಈಗ ರಕ್ತಚಂದನ ಕಳ್ಳಸಾಗಣೆಯಲ್ಲಿ ದೊಡ್ಡ ಡಾನ್ ಆಗಿ ಬೆಳೆದಿದ್ದಾನೆ. ಸಿಎಂನೇ ಬದಲಾಯಿಸುವಷ್ಟು ಹಣ ಅವನಲ್ಲಿ ಇದೆ. ‘ಪುಷ್ಪ 2’ ಚಿತ್ರದ ಕೊನೆಯಲ್ಲಿ ಮೂರನೇ ಭಾಗ ಬರಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ನಿರ್ಮಾಪಕ ರವಿ ಶಂಕರ್ ಅವರು ಮೂರನೇ ಪಾರ್ಟ್ ಶೂಟಿಂಗ್ ಯಾವಾಗ ಎಂಬುದನ್ನು ರಿವೀಲ್ ಮಾಡಿದ್ದಾರೆ.
‘ಪುಷ್ಪ ಚಿತ್ರಕ್ಕೆ ಮೂರನೇ ಪಾರ್ಟ್ ಬಂದೇ ಬರುತ್ತದೆ. ಅಟ್ಲಿ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಿದ್ದಾರೆ. ಈ ಎರಡು ಸಿನಿಮಾಗಳನ್ನು ಪೂರ್ಣಗೊಳಿಸಲು ಅವರಿಗೆ ಎರಡು ವರ್ಷ ಬೇಕಾಗುತ್ತದೆ. ಆ ಬಳಿಕ ಪುಷ್ಪ 3 ಸೆಟ್ಟೇರುತ್ತದೆ’ ಎಂದು ರವಿ ಶಂಕರ್ ಹೇಳಿದ್ದಾರೆ.
ಇನ್ನು, ಸುಕುಮಾರ್ ಅವರು ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಪೂರ್ಣಗೊಳ್ಳಲು 2 ವರ್ಷಗಳು ಬೇಕಾಗಲಿವೆ. ಆ ಬಳಿಕ ಅವರು ಫ್ರೀ ಆಗಲಿದ್ದು, ‘ಪುಷ್ಪ 3’ ಚಿತ್ರದ ಬಗ್ಗೆ ಗಮನ ಹರಿಸಬಹುದಾಗಿದೆ. 2028ರ ವೇಳೆಗೆ ‘ಪುಷ್ಪ 3’ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ.
ಇದನ್ನೂ ಓದಿ: ‘ಪುಷ್ಪ 3’ ಸಿನಿಮಾ ಕೆಲಸ ಈಗಲೇ ಶುರುವಾಗುತ್ತಾ? ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಉತ್ತರ ಕೇಳಿ..
‘ಮುಂದಿನ ಮೂರು ವರ್ಷಗಳಲ್ಲಿ ಸಿನಿಮಾ ಸೆಟ್ಟೇರುತ್ತದೆ. 2028ರ ವೇಳೆಗೆ ಚಿತ್ರ ರಿಲೀಸ್ ಆಗಲಿದೆ’ ಎಂದು ರವಿ ಶಂಕರ್ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿದ ಬಳಿಕ ಫ್ಯಾನ್ಸ್ ಖುಷಿಯಾಗಿದ್ದಾರೆ. ‘ಪುಷ್ಪ 3’ ಚಿತ್ರದಲ್ಲೂ ಫಹಾದ್ ಫಾಸಿಲ್ ಅವರೇ ವಿಲನ್ ಆಗಿ ಮುಂದುವರಿಯಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.