‘ಅಪ್ಪು’ ಸಿನಿಮಾ ಯಾಕೆ ನೋಡಿಲ್ಲ? ಬಲವಾದ ಕಾರಣ ಕೊಟ್ಟ ಶಿವರಾಜ್ಕುಮಾರ್
ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಚಿತ್ರದ ಮರು ಬಿಡುಗಡೆಗೆ ಆಗಿದೆ. ಆದರೆ, ಶಿವರಾಜ್ ಕುಮಾರ್ ಇದನ್ನು ನೋಡಿಲ್ಲ. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ. ಪುನೀತ್ ಅವರ ನೆನಪುಗಳು ಅವರನ್ನು ಕಾಡುತ್ತಿರುವುದರಿಂದ ಚಿತ್ರ ವೀಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಶಿವರಾಜ್ ಕುಮಾರ್ ಅವರು ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ನಂತರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪುನೀತ್ ಅವರ 50ನೇ ಹುಟ್ಟುಹಬ್ಬದಂದು ಅವರ ಅನುಪಸ್ಥಿತಿಯನ್ನು ಅವರು ದುಃಖದಿಂದ ಸ್ಮರಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾ (Appu Movie) ರೀ-ರಿಲೀಸ್ ಆಗಿದೆ. ಈ ಚಿತ್ರ ದೊಡ್ಡ ಗೆಲುವು ಕಂಡಿದೆ. ರಾಜ್‌ಕುಮಾರ್ ಕುಟುಂಬದ ಅನೇಕರು ಈ ಚಿತ್ರವನ್ನು ನೋಡಿದ್ದಾರೆ. ಆದರೆ, ಶಿವಣ್ಣ ಸಿನಿಮಾನ ವೀಕ್ಷಣೆ ಮಾಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಶಿವರಾಜ್ಕುಮಾರ್ ರಿವೀಲ್ ಮಾಡಿದ್ದಾರೆ. ಪುನೀತ್ ಸಮಾಧಿಗೆ ಭೇಟಿ ಕೊಟ್ಟ ಬಳಿಕ ಮಾತನಾಡಿದ ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಿನಿಮಾ ರೀ-ರಿಲೀಸ್ ಆಗುತ್ತಿದೆ ಎಂದಾಗ ಎಲ್ಲರೂ ಆಸಕ್ತಿಯಿಂದ ಸಿನಿಮಾ ವೀಕ್ಷಿಸುತ್ತಾರೆ. ಆದರೆ, ಶಿವರಾಜ್ಕುಮಾರ್ ಅವರು ಸಿನಿಮಾ ವೀಕ್ಷಿಸಿಲ್ಲ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ. ‘ಅಪ್ಪು ರೀ-ರಿಲೀಸ್ ವೇಳೆ ಯಾಕೆ ಅಪ್ಪು ನೋಡಿಲ್ಲ ಎಂದು ಎಲ್ಲರೂ ಕೇಳುತ್ತಿದ್ದರು. ನನಗೆ ನೋಡೋಕೆ ಆಗೋದಿಲ್ಲ. ಏಕೆಂದರೆ ಹಳೆಯ ನೆನಪುಗಳೆಲ್ಲ ಕಾಡುತ್ತೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಪುನೀತ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ‘ಅಪ್ಪು’. ಇದಕ್ಕೆ ಟೈಟಲ್ ಕೊಟ್ಟಿದ್ದು ಶಿವರಾಜ್ಕುಮಾರ್ ಅವರೇ. ಈ ಕಾರಣಕ್ಕೂ ಅವರಿಗೆ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಆದರೆ, ಆ ಸಿನಿಮಾ ವೀಕ್ಷಿಸಿದರೆ ಅವರ ನೆನಪು ಮತ್ತೆ ಕಾಡುತ್ತದೆ ಎನ್ನುವ ಭಯ ಅವರಿಗೆ ಇದೆ.
‘ತುಂಬಾ ನೋವಾಗುತ್ತಿದೆ. 50ನೇ ವರ್ಷದ ಬರ್ತ್ ಡೇ ಅಂದಾಗ ಅಪ್ಪು ಇರಬೇಕಿತ್ತು ಅನಿಸುತ್ತದೆ. ಅವನಿಲ್ಲದೇ ಹುಟ್ಟುಹಬ್ಬ ಆಚರಿಸೋಕೆ ದುಃಖ ಆಗುತ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾನೆ’ ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ ಇನ್ನೂ ಅಜರಾಮರ ಆಗಿದ್ದಾನೆ. ಇಲ್ಲೆ ನಮ್ಮ ಜೊತೆ ಎಲ್ಲೋ ಇದಾನೆ ಅನಿಸುತ್ತಿದೆ’ ಎಂದಿದ್ದಾರೆ ಶಿವರಾಜ್ಕುಮಾರ್.
ಇದನ್ನೂ ಓದಿ: 29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್ಕುಮಾರ್; ಇಲ್ಲಿವೆ ಫೋಟೋಸ್
ಶಿವರಾಜ್ಕುಮಾರ್, ಪುನೀತ್ ಒಟ್ಟಾಗಿ ಬೆಳೆದವರು. ಹೀಗಾಗಿ ಪುನೀತ್ ಜನ್ಮದಿನ ಬಂತು ಎಂದಾಗಲೆಲ್ಲ ಅವರ ಹಳೆಯ ನೆನಪುಗಳು ಬಹುವಾಗಿ ಕಾಡುತ್ತವೆ.
ಇಡೀ ಥಿಯೇಟರ್ ಬುಕ್
ಅಪ್ಪು ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ್ದಾರೆ ಸೆಲಬ್ರೆಟಿ ಜಿಮ್ ಟ್ರೈನರ್ ಶ್ರೀನಿವಾಸ್ ಗೌಡ. ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿರುವ ಅವರು, ತಮ್ಮ ಒಂದುವರೆ ವರ್ಷದ ಮಗನಿಗಾಗಿ ಮಾಲ್ನಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದಾರೆ. ಇಡೀ ಥಿಯೇಟರ್ ನಲ್ಲಿ ಪತ್ನಿ ಮಗು ಜೊತೆ ಕೂತು ಸಿನಿಮಾ ವೀಕ್ಷಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:40 pm, Mon, 17 March 25