AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀರೋ ಆಗುವುದಕ್ಕೂ ಮೊದಲು 30ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ಜಗ್ಗೇಶ್; ಬದುಕು ಬದಲಿಸಿತು ಆ ಚಿತ್ರ

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರು ಇಂದು ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ ಹೀರೋ ಆಗಿ ಮಿಂಚಿದ ಅವರು, 'ತರ್ಲೆ ನನ್ಮಗ' ಚಿತ್ರದ ಮೂಲಕ ಯಶಸ್ಸಿನ ಶಿಖರವನ್ನು ಏರಿದರು. ಅವರ ಸಿನಿಮಾ ಮತ್ತು ರಾಜಕೀಯ ಜೀವನದ ಏಳುಬೀಳುಗಳನ್ನು ಕಂಡರು.

ಹೀರೋ ಆಗುವುದಕ್ಕೂ ಮೊದಲು 30ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ಜಗ್ಗೇಶ್; ಬದುಕು ಬದಲಿಸಿತು ಆ ಚಿತ್ರ
ಜಗ್ಗೇಶ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Mar 17, 2025 | 11:53 AM

Share

ಕನ್ನಡದ ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅವರಿಗೆ ಇಂದು (ಮಾರ್ಚ್​ 17) ಬರ್ತ್​ಡೇ. ಅವರು 62ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿವೆ. ಜಗ್ಗೇಶ್ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡು ಬಂದವರು. ಅವರು ಸಾಕಷ್ಟು ಶ್ರಮದಿಂದ ಇಲ್ಲಿಯವರೆಗೆ ಬಂದು ನಿಂತಿದ್ದಾರೆ. ಅವರಿಗೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಒಲಿದಿದೆ. ಅವರು  ಹೀರೋ ಆಗಲು ಬರೋಬ್ಬರಿ 10 ವರ್ಷ ತೆಗೆದುಕೊಂಡಿದ್ದರು.

ಜಗ್ಗೇಶ್ ಅವರು ನಟಿಸಿದ ಮೊದಲ ಸಿನಿಮಾ ‘ಇಬ್ಬನಿ ಕರಗಿತು’. ಈ ಚಿತ್ರ 1982ರಲ್ಲಿ ರಿಲೀಸ್ ಆಯಿತು. ಆದರೆ, ಜಗ್ಗೇಶ್ ಅವರು ಹೀರೋ ಆಗಿ ಮಿಂಚಿದ ಮೊದಲ ಚಿತ್ರ ಎಂದರೆ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’. ಈ ಚಿತ್ರ ಬಿಡುಗಡೆ ಕಂಡಿದ್ದು 1992ರಲ್ಲಿ. ಈ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ನಂತರ ಸಾಲು ಸಾಲು ಆಫರ್​ಗಳು ಅವರನ್ನು ಹುಡುಕಿ ಬಂದವು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಜಗ್ಗೇಶ್ ಹೀರೋ ಆಗೋಕೆ ತೆಗೆದುಕೊಂಡಿದ್ದು ಬರೋಬ್ಬರಿ 10 ವರ್ಷ. 30ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರ, ವಿಲನ್ ಪಾತ್ರ ಮಾಡಿದ ನಂತರ ಅವರಿಗೆ ಹೀರೋ ಆಗುವ ಅವಕಾಶ ಸಿಕ್ಕಿತು ಅನ್ನೋದು ವಿಶೇಷ.

ಹೀರೋ ಆಗಿ ಒಪ್ಪಿದ್ದ ಮೊದಲ ಚಿತ್ರ ಎಂದರೆ ‘ಭಂಡ ನನ್​ ಗಂಡ’. ಆದರೆ, ಮೊದಲು ರಿಲೀಸ್ ಆಗಿದ್ದು ‘ತರ್ಲೆ ನನ್ಮಗ’. ‘ಭಂಡ ನನ್​ ಗಂಡ’ ಚಿತ್ರಕ್ಕೆ ಜಗ್ಗೇಶ್​ ಅವರ ಭಾವ ಬಂಡವಾಳ ಹೂಡಿದ್ದರು. ಈ ಚಿತ್ರದಲ್ಲಿ ಅಂಬರೀಷ್ ಅವರು ಅತಿಥಿ ಪಾತ್ರ ಮಾಡಿದ್ದರು. ಜಗ್ಗೇಶ್​ಗೆ ಅವರು ಬೆಂಬಲವಾಗಿ ನಿಂತಿದ್ದರು ಅನ್ನೋದು ವಿಶೇಷ.

ಇದನ್ನೂ ಓದಿ
Image
ಜಗ್ಗೇಶ್ ಜನ್ಮದಿನಕ್ಕೆ ಮೋದಿಯಿಂದ ಹಾರೈಕೆ ಪತ್ರ; ಹಿಗ್ಗಿದ ನವರಸ ನಾಯಕ
Image
ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಭಿಮಾನ
Image
ಪುನೀತ್ ಕಪ್ಪಿದ್ದಾರೆ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದ ರಾಜ್​ಕುಮಾರ್
Image
ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್, ಕಾರಣ?

ಜಗ್ಗೇಶ್ ಅವರು ಹಲವು ದಶಕಗಳಿಂದ ಚಿತ್ರರಂಗದ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಅವರು ಪರಭಾಷೆಗಳಿಂದ ಬಂದ ಆಫರ್​ಗಳನ್ನು ಕೈಬಿಟ್ಟು ಕನ್ನಡದ ಸೇವೆ ಮಾಡಿಕೊಂಡಿದ್ದಾರೆ.  ಜಗ್ಗೇಶ್ ಅವರು ನಿರ್ದೇಶನವನ್ನೂ ಮಾಡಿದ್ದು. ‘ಗುರು’ ಹಾಗೂ ‘ಮೇಲುಕೋಟೆ ಮಂಜ’ ಹೆಸರಿನ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ‘ಮೇಕಪ್​’ ಹೆಸರಿನ ಚಿತ್ರವನ್ನು ಜಗ್ಗೇಶ್ ನಿರ್ಮಾಣ ಮಾಡಿದ್ದರು.

ಅಣ್ಣಾವ್ರ ಕುಟುಂಬದ ಜೊತೆ ಜಗ್ಗೇಶ್ ಒಳ್ಳೆಯ ಒಡನಾಟ ಇತ್ತು. ರಾಜ್​ಕುಮಾರ್ ಬಗ್ಗೆ ಜಗ್ಗೇಶ್​​ಗೆ ತುಂಬಾನೇ ಪ್ರೀತಿ ಹಾಗೂ ವಿಶೇಷ ಗೌರವ ಇದೆ. ಪುನೀತ್ ಅವರನ್ನು ಕಂಡರೂ ಅಷ್ಟೇ. ಇಬ್ಬರೂ ಹುಟ್ಟಿದ ದಿನಾಂಕ ಒಂದೇ ಅನ್ನೋದು ವಿಶೇಷ.

ಇದನ್ನೂ ಓದಿ: ಜಗ್ಗೇಶ್ ಜನ್ಮದಿನಕ್ಕೆ ಪ್ರಧಾನಿ ಮೋದಿಯಿಂದ ಹಾರೈಕೆ ಪತ್ರ; ಹಿರಿಹಿರಿ ಹಿಗ್ಗಿದ ನವರಸ ನಾಯಕ

ಜಗ್ಗೇಶ್ ಅವರಿಗೆ ರಾಯರ ಮೇಲೆ ಅಪಾರ ಭಕ್ತಿ. ಈ ಹಂತಕ್ಕೆ ಬೆಳೆಯಲು ರಾಘವೇಂದ್ರ ಸ್ವಾಮಿ ಆಶೀರ್ವಾದ ಕಾರಣ ಎಂದು ಅವರು ನಂಬುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ