ಜಗ್ಗೇಶ್ ಜನ್ಮದಿನಕ್ಕೆ ಪ್ರಧಾನಿ ಮೋದಿಯಿಂದ ಹಾರೈಕೆ ಪತ್ರ; ಹಿರಿಹಿರಿ ಹಿಗ್ಗಿದ ನವರಸ ನಾಯಕ
Jaggesh Birthday: ಪ್ರಸಿದ್ಧ ಕನ್ನಡ ನಟ ಜಗ್ಗೇಶ್ ಅವರಿಗೆ ಇಂದು 62ನೇ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಅವರು ಜಗ್ಗೇಶ್ಗೆ ಶುಭಾಶಯ ಕೋರಿ ಪತ್ರ ಬರೆದಿದ್ದಾರೆ. ಜಗ್ಗೇಶ್ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಜನ್ಮದಿನದಂದು ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಅವರಿಗೆ ಶುಭ ಹಾರೈಸಿದ್ದಾರೆ.

ನಟ ಜಗ್ಗೇಶ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಪುನೀತ್ ರಾಜ್ಕುಮಾರ್ ಹಾಗೂ ಜಗ್ಗೇಶ್ ಮಧ್ಯೆ ಸಾಕಷ್ಟು ಆಪ್ತತೆ ಇತ್ತು. ಇಬ್ಬರ ಜನ್ಮದಿನ ಒಂದೇ ದಿನ ಬಂದಿದೆ ಅನ್ನೋದು ವಿಶೇಷ. ಪುನೀತ್ (Puneeth Rajkumar) ಅವರಿಗೆ ಎಲ್ಲ ಕಡೆಗಳಿಂದ ಜನ್ಮದಿನದ ವಿಶ್ಗಳು ಬರುತ್ತಿವೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕಡೆಯಿಂದಲೂ ಜಗ್ಗೇಶ್ಗೆ ಬರ್ತ್ಡೇ ವಿಶ್ ಬಂದಿದೆ. ಪ್ರಧಾನಿ ಮೋದಿ ಬರೆದ ಪತ್ರವನ್ನು ಶೇರ್ ಮಾಡಿಕೊಂಡಿರೋ ಜಗ್ಗೇಶ್ ಅವರು ಹಿರಿಹಿರಿ ಹಿಗ್ಗಿದ್ದಾರೆ.
ಜಗ್ಗೇಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹೀರೋ ಆಗಿ, ಕಾಮಿಡಿಯನ್ ಆಗಿ, ವಿಲನ್ ಆಗಿ ಹೀಗೆ ಹಲವು ರೀತಿಯ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅವರು ಉಳಿದುಕೊಂಡಿದ್ದಾರೆ. ಜಗ್ಗೇಶ್ ನಟನೆಗೆ ಅವರ ಹಾವ ಭಾವಕ್ಕೆ ಅಭಿಮಾನಿಯಾದವರ ಸಂಖ್ಯೆ ದೊಡ್ಡದಿದೆ. ಅವರು ಇತ್ತೀಚೆಗೆ ರಾಜಕೀಯದಲ್ಲೂ ತೊಡಗಿಕೊಂಡಿದ್ದು, ಪ್ರಧಾನಿ ಮೋದಿ ಪರಿಚಯ ಆಗಿದೆ. ಕೆಲವು ಕಾರ್ಯಕ್ರಮಗಳಲ್ಲಿ ಇವರು ವೇದಿಕೆ ಹಂಚಿಕೊಂಡಿದ್ದರು.
ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ🙏 ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕರು @narendramodi ರವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ🙏
‘ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದಮೇಲು ನೆನಪಿಡುವ ಸಾಧನೆಯ ಓಟ ಆಗಿರಬೇಕು” ನನ್ನ ಸಲಹುತ್ತಿರುವ ಸರ್ವರಿಗು🙏 pic.twitter.com/XHf2TbOV1P
— ನವರಸನಾಯಕ ಜಗ್ಗೇಶ್ (@Jaggesh2) March 17, 2025
ಮೋದಿ ಹಾರೈಕೆ ಪತ್ರ ಹಂಚಿಕೊಂಡಿರುವ ಜಗ್ಗೇಶ್ ಅವರು, ‘ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ. ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕ ನರೇಂದ್ರ ಮೋದಿ ಅವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ನಿಮಗೇನು, ದುಡ್ಡಿದೆ.. ಕುಂಭಮೇಳಕ್ಕೆ ಹೋದ್ರಿ’ ಎಂದವರಿಗೆ ಜಗ್ಗೇಶ್ ಸ್ಪಷ್ಟನೆ
‘ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದಮೇಲು ನೆನಪಿಡುವ ಸಾಧನೆಯ ಓಟ ಆಗಿರಬೇಕು. ನನ್ನ ಸಲಹುತ್ತಿರುವ ಪ್ರೀತಿಪಾತ್ರರು ಸರ್ವರಿಗೂ ಧನ್ಯವಾದ’ ಎಂದು ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಅವರಿಗೆ ರಾಜಕೀಯ ನಾಯಕರು ಹಾಗೂ ಸಿನಿಮಾ ರಂಗದವರ ಕಡೆಯಿಂದಲೂ ಶುಭಾಶಯಗಳು ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.