AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ್ ಹೆಸರನ್ನು ಪುನೀತ್ ಆಗಿ ಬದಲಿಸಿದ್ದೇಕೆ ರಾಜ್​ಕುಮಾರ್? ಇದರ ಹಿಂದಿದೆ ಅಲ್ಪಾಯುಷ್ಯದ ಕಥೆ

ಪುನೀತ್ ರಾಜ್​ಕುಮಾರ್ ಅವರ ಮೂಲ ಹೆಸರು ಲೋಹಿತ್ ಎಂಬುದು ಅನೇಕರಿಗೆ ತಿಳಿದಿಲ್ಲ. ಡಾ. ರಾಜ್ ಕುಮಾರ್ ಅವರು 'ಸತ್ಯ ಹರಿಶ್ಚಂದ್ರ' ಚಿತ್ರದಿಂದ ಪ್ರೇರಿತರಾಗಿ ಲೋಹಿತ್ ಎಂದು ಹೆಸರಿಟ್ಟರು. ಆದರೆ, ಅಲ್ಪಾಯುಷಿ ಎಂಬ ಅಪಶಕುನದಿಂದಾಗಿ 10 ವರ್ಷಗಳ ನಂತರ ಪುನೀತ್ ಎಂದು ಹೆಸರು ಬದಲಾಯಿಸಲಾಯಿತು.

ಲೋಹಿತ್ ಹೆಸರನ್ನು ಪುನೀತ್ ಆಗಿ ಬದಲಿಸಿದ್ದೇಕೆ ರಾಜ್​ಕುಮಾರ್? ಇದರ ಹಿಂದಿದೆ ಅಲ್ಪಾಯುಷ್ಯದ ಕಥೆ
ಪುನೀತ್
ರಾಜೇಶ್ ದುಗ್ಗುಮನೆ
|

Updated on: Mar 17, 2025 | 11:03 AM

Share

ಪುನೀತ್ ರಾಜ್​ಕುಮಾರ್ ಜನ್ಮದಿನದ (ಮಾರ್ಚ್ 17) ಪ್ರಯುಕ್ತ ಅವರ ಕುರಿತಂತೆ ಹಲವು ವಿಚಾರಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಪುನೀತ್ ಅವರ ಹೆಸರಿನ ಬಗ್ಗೆಯೂ ಚರ್ಚೆಗಳು ನಡೆದಿವೆ. ಪುನೀತ್ (Puneeth Rajkumar) ಅವರ ಮೊದಲ ಹೆಸರು ಲೋಹಿತ್ ಎಂದಾಗಿತ್ತು. 10 ವರ್ಷಗಳ ಕಾಲ ಈ ಹೆಸರು ಚಾಲ್ತಿಯಲ್ಲಿ ಇತ್ತು. ಆ ಬಳಿಕ ಈ ಹೆಸರನ್ನು ಪುನೀತ್ ಎಂದು ರಾಜ್​ಕುಮಾರ್ ಬದಲಿಸಿದ್ದರು. ಲೋಹಿತ್ ಎಂಬ ಹೆಸರಿನ ಬಗ್ಗೆ ಇದ್ದ ಭಯವೇ ಹೆಸರು ಬದಲಿಸಲು ಮುಖ್ಯ ಕಾರಣ ಎನ್ನುವ ವಿಚಾರ ರಿವೀಲ್ ಆಗಿದೆ.

ರಾಜ್​ಕುಮಾರ್ ಅವರಿಗೆ ಪುನೀತ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅವರಿಗೆ ಹಸರು ಇಡಬೇಕು ಎಂದಾಗ ಲೋಹಿತ್ ಎಂಬ ಹೆಸರು ಅವರಿಗೆ ನೆನಪಿಗೆ ಬಂತು. ಇದಕ್ಕೆ ಕಾರಣ ಆಗಿದ್ದು ‘ಸತ್ಯ ಹರಿಶ್ಚಂದ್ರ’ ಸಿನಿಮಾ. ಸತ್ಯ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿತಾಶ್ವ (ಅಥವಾ ರೋಹಿತಾಶ್ವ). ಈ ಹೆಸರು ರಾಜ್​ಕುಮಾರ್​ಗೆ ತುಂಬಾನೇ ಇಷ್ಟವಾಗಿತ್ತು. ಈ ಕಾರಣಕ್ಕೆ ಲೋಹಿತ್ ಎಂದು ಹೆಸರು ಇಡಲಾಯಿತು. ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ವ ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಈ ಕಾರಣಕ್ಕೆ ರಾಜ್​ಗೆ ಹೆಸರು ಬದಲಿಸಲು ಸೂಚಿಸಿದ್ದರು.

ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಬೇಕಾದ ಹಿರಿಯರೊಬ್ಬರು ಲೋಹಿತ್ ಎಂದು ಹೆಸರಿಟ್ಟ ಬಗ್ಗೆ ಪ್ರಶ್ನೆ ಮಾಡಿದ್ದರು. ಲೋಹಿತ್​ ಅನ್ನೋದು ಅಲ್ಪಾಯುಷಿಗೆ ಇರುವಂತಹ ಹೆಸರು. ಹೀಗಾಗಿ  ಪುನೀತ್ ಎಂದು ಬದಲಿಸಲು ಸೂಚಿಸಿದ್ದರಂತೆ. ಈ ಕಾರಣಕ್ಕೆ ಅಣ್ಣಾವ್ರು ಈ ಹೆಸರನ್ನು ಬದಲಿಸಿದ್ದರು. ಡಾ. ರಾಜ್ ಕುಟುಂಬದ ಸಂಬಂಧಿ ಕುಮಾರ್ ಬಂಗಾರಪ್ಪ ಈ ಬಗ್ಗೆ ಈ ಮೊದಲು ಮಾಹಿತಿ ನೀಡಿದ್ದರು.

ಇದನ್ನೂ ಓದಿ
Image
ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಭಿಮಾನ
Image
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
Image
ಪುನೀತ್ ಕಪ್ಪಿದ್ದಾರೆ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದ ರಾಜ್​ಕುಮಾರ್
Image
ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್, ಕಾರಣ?

ಇದನ್ನೂ ಓದಿ: ಪುನೀತ್ ಬಗ್ಗೆ ಹಬ್ಬಿದ್ದ ಈ ಸುಳ್ಳು ಸುದ್ದಿ ಬಗ್ಗೆ ಅವರಿಗೆ ಆಗಿತ್ತು ಭಾರೀ ಬೇಸರ

ಪೇಪರ್ ಪೋಸ್ಟ್​

‘ಡಾ. ರಾಜ್​ಕುಮಾರ್​ ಉರುಫ್​ ಎಸ್​.ಪಿ. ಮುತ್ತುರಾಜ್​ ಆದ ನಾನು ನನ್ನ ಮಗ ಮಾಸ್ಟರ್​ ಲೋಹಿತ್​ ಹೆಸರನ್ನು ಇಂದಿನಿಂದ  ಅಂದರೆ ದಿನಾಂಕ 16-3-1985ರಂದು ಮಾಸ್ಟರ್​ ಪುನೀತ್​ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಎಸ್​.ಬಿ. ಚಂದ್ರಶೇಖರ್​ ಅವರ ಸಮಕ್ಷಮದಲ್ಲಿ ಪ್ರಮಾಣ ಪತ್ರ ಮಾಡಿಸಿರುತ್ತೇನೆ’ ಎಂದು ಜಾಹೀರಾತು ನೀಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.