ಪುನೀತ್ ರಾಜ್ಕುಮಾರ್ 50ನೇ ಜನ್ಮದಿನೋತ್ಸವ, ನಟನ ಸಮಾಧಿ ಬಳಿ ನೆರೆದ ಸಾವಿರಾರು ಅಭಿಮಾನಿಗಳು
ಸ್ಟುಡಿಯೋ ಹೊರಭಾಗದಲ್ಲಿ ರಕ್ತದಾನ ಶಿಬಿರ ಮತ್ತು ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಗರದ ಬೀದಿಬದಿ ವ್ಯಾಪಾರಿಗಳ ಸಂಘವು ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಂಘದ ಸದಸ್ಯರೊಬ್ಬರು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ್ದು ಕಳೆದ ಮೂರು ವರ್ಷಗಳಿಂದ ಅವರು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯ ದಿನ ಅನ್ನದಾನ ಏರ್ಪಾಟು ಮಾಡುತ್ತಾರಂತೆ.
ಬೆಂಗಳೂರು, 17 ಮಾರ್ಚ್: ಮೂರು ವರ್ಷಗಳ ಹಿಂದೆ ಕನ್ನಡಿಗರನ್ನು ಅಗಲಿದ ಪುನೀತ್ ರಾಜ್ಕುಮಾರ್ (Puneet Rajkumar)ಪುನೀತ್ ರಾಜ್ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಪ್ಪು ಮೇಲಿನ ಅಭಿಮಾನ ಬದುಕಿದ್ದರೆ ಇವತ್ತು ತಮ್ಮ 50 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರ ಸಮಾಧಿಯಿರುವ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಬೆಳಗಿನ ಜಾವ 3 ಗಂಟೆಯಿಂದ ನೆರೆಯಲಾರಭಿಸಿದ್ದಾರೆ. ಸ್ಟುಡಿಯೋಗೆ ಬರುವವರ ಸಂಖ್ಯೆ ಪ್ರತಿನಿಮಿಷ ಹೆಚ್ಚುತ್ತಿದೆ ಮತ್ತು ಇಲ್ಲಿ ಅದಾಗಲೇ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಬರ್ತ್ಡೇಗೆ ಬಿಗ್ ಸರ್ಪ್ರೈಸ್; ಈ ಸೂಪರ್ ಹಿಟ್ ಚಿತ್ರ ರೀ-ರಿಲೀಸ್
Latest Videos

