AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಬಗ್ಗೆ ಹಬ್ಬಿದ್ದ ಈ ಸುಳ್ಳು ಸುದ್ದಿ ಬಗ್ಗೆ ಅವರಿಗೆ ಆಗಿತ್ತು ಭಾರೀ ಬೇಸರ

Puneeth Rajkumar Birthday: ಇಂದು ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನ. ಅವರ ನಟನಾ ವೃತ್ತಿ ಜೊತೆಗೆ, ಅವರ ಗ್ರಾನೈಟ್ ವ್ಯವಹಾರ ಮತ್ತು ಉದ್ಯಮದಲ್ಲಿನ ಆಸಕ್ತಿಯ ಬಗ್ಗೆ ಕಡಿಮೆ ತಿಳಿದಿದೆ. ತಮ್ಮ ತಂದೆ ರಾಜ್ ಕುಮಾರ್ ಅವರ ಅಪಹರಣದ ನಂತರ ಹರಡಿದ್ದ ಸುಳ್ಳು ಸುದ್ದಿಗಳಿಂದಾಗಿ ಅವರು ಈ ವ್ಯವಹಾರವನ್ನು ನಿಲ್ಲಿಸುವಂತೆ ಒತ್ತಾಯಿಸಲ್ಪಟ್ಟಿದ್ದರು.

ಪುನೀತ್ ಬಗ್ಗೆ ಹಬ್ಬಿದ್ದ ಈ ಸುಳ್ಳು ಸುದ್ದಿ ಬಗ್ಗೆ ಅವರಿಗೆ ಆಗಿತ್ತು ಭಾರೀ ಬೇಸರ
ಪುನೀತ್ ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 17, 2025 | 9:05 AM

Share

ಇಂದು (ಮಾರ್ಚ್ 17) ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ. ಅವರು ಬದುಕಿದ್ದರೆ ಇಂದು ನಮ್ಮ ಜೊತೆ ಅವರು 50ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ ಎಂಬುದು ನೋವಿನ ಸಂಗತಿ. ಈ ನೋವು ಎಂದಿಗೂ ಮರೆಯಾಗುವಂಥದ್ದು ಅಲ್ಲ. ಪುನೀತ್ (Puneeth Rajkumar) ಅವರು ಕೇವಲ ನಟನಲ್ಲ. ಅವರು ಒಳ್ಳೆಯ ಉದ್ಯಮಿಯೂ ಆಗಿದ್ದರು. ಅವರಿಗೆ ಬಿಸ್ನೆಸ್​​ನಲ್ಲಿ ಒಳ್ಳೆಯ ಹಿಡಿತ ಇತ್ತು ಎಂದೇ ಹೇಳಬಹುದು. ಅವರು ಈ ಮೊದಲು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಇದನ್ನು ಮಾಡದಂತೆ ರಾಜ್​ಕುಮಾರ್ ಕೋರಿದ್ದರಂತೆ.

ಅಪ್ಪು ಅವರು ಉದ್ಯಮದ ಕಡೆಗೂ ಆಸಕ್ತಿ ಹೊಂದಿದ್ದರು. ಅವರಿಗೆ ಮೊದಲು ನಟನಾಗಬೇಕು ಎನ್ನುವ ಆಸಕ್ತಿಯೇ ಇರಲಿಲ್ಲ. ಅವರಿಗೆ ಉದ್ಯಮಿ ಆಗಬೇಕು ಎಂಬ ಆಸೆ ಇತ್ತು. ಅವರು ‘ಪಿಆರ್​ಕೆ’ ನಿರ್ಮಾಣ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಪುನೀತ್ ರಾಜ್​ಕುಮಾರ್ ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಹೀಗಾಗಿ ರಾಜ್​ಕುಮಾರ್​ನ ವೀರಪ್ಪನ್ ಅರೆಸ್ಟ್ ಮಾಡಿದ್ದರು ಎಂದು ಕೆಲವರು ಹೇಳಿದ್ದರು.

‘ನಮ್ಮ ತಂದೆ ರಾಜ್​ಕುಮಾರ್ ಅರೆಸ್ಟ್ ಆದ ಬಳಿಕ ಕೆಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಆಗ ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಈ ಕಾರಣದಿಂದಲೇ ತಂದೆಯವರು ವೀರಪ್ಪನ್​ನಿಂದ ಕಿಡ್ನ್ಯಾಪ್ ಆದರು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿ ಹಲವು ಸುದ್ದಿಗಳು ಹುಟ್ಟಿಕೊಂಡವು’ ಎಂದಿದ್ದರು ಪುನೀತ್.

ಇದನ್ನೂ ಓದಿ
Image
ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಭಿಮಾನ
Image
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
Image
ಪುನೀತ್ ಕಪ್ಪಿದ್ದಾರೆ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದ ರಾಜ್​ಕುಮಾರ್
Image
ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್, ಕಾರಣ?

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಪ್ಪು ಮೇಲಿನ ಅಭಿಮಾನ

‘ನಾನು ಮಾಡುತ್ತಿದ್ದ ಗ್ರಾನೈಟ್ ಬಿಸ್ನೆಸ್ ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್​ನಲ್ಲಿ ಬಂದಿತ್ತು. ಅದು ನನಗೆ ಬೇಸರ ಮೂಡಿಸಿತ್ತು. ಇದು ಅಕ್ರಮವಾಗಿದ್ದರೆ ಕಾನೂನು ಇದೆ. ಹೊರಗಡೆ ಇದ್ದವರು ಕಮೆಂಟ್ ಮಾಡೋದೇಕೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು’ ಎಂದಿದ್ದರು ಪುನೀತ್. ಈ ರೀತಿಯ ಸುದ್ದಿಯಿಂದ ಬೇಸರಗೊಂಡಿದ್ದ ರಾಜ್​ಕುಮಾರ್ ಅವರು ಒಮ್ಮೆ ಪುನೀತ್​ಗೆ ಇದೆಲ್ಲ ನಿಲ್ಲಿಸುವಂತೆ ಕೋರಿಕೊಂಡಿದ್ದರು.

ಪುನೀತ್ ಕೆಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಹುಟ್ಟುಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Mon, 17 March 25

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!