‘ಮೊಡವೆ ಆಗಿದ್ದಕ್ಕೆ ಅವಕಾಶ ಕಿತ್ತುಕೊಂಡು ಮನೆಗೆ ಕಳಿಸಿದ್ರು’: ಮನ್ನಾರಾ ಚೋಪ್ರಾ

ಅವಕಾಶಕ್ಕಾಗಿ ನಟಿ ಮನ್ನಾರಾ ಚೋಪ್ರಾ ಅವರು ಬಹಳ ಕಷ್ಟಪಟ್ಟಿದ್ದರು. ಹಲವು ಸುತ್ತುಗಳ ಆಡಿಷನ್​ ನೀಡಿ ಚಾನ್ಸ್​ ಪಡೆದುಕೊಂಡಿದ್ದರು. ಫೇರ್​ನೆಸ್​ ಕ್ರೀಮ್​ ಜಾಹೀರಾತಿನಲ್ಲಿ ಅವರು ನಟಿಸಬೇಕಿತ್ತು. ಆದೆ ಆ ಒಂದು ಅವಕಾಶ ದಿಢೀರ್​​ ಅಂತ ಕೈ ತಪ್ಪಿಹೋಯಿತು. ಅದಕ್ಕೆಲ್ಲ ಕಾರಣ ಆಗಿದ್ದು ಮೊಡವೆ! ಆ ಘಟನೆಯನ್ನು ಮನ್ನಾರಾ ಚೋಪ್ರಾ ಅವರು ಈಗ ಮೆಲುಕು ಹಾಕಿದ್ದಾರೆ.

‘ಮೊಡವೆ ಆಗಿದ್ದಕ್ಕೆ ಅವಕಾಶ ಕಿತ್ತುಕೊಂಡು ಮನೆಗೆ ಕಳಿಸಿದ್ರು’: ಮನ್ನಾರಾ ಚೋಪ್ರಾ
ಮನ್ನಾರಾ ಚೋಪ್ರಾ
Follow us
ಮದನ್​ ಕುಮಾರ್​
|

Updated on: Apr 29, 2024 | 10:15 PM

ನಟಿ ಮನ್ನಾರಾ ಚೋಪ್ರಾ (Mannara Chopra) ಅವರು ಪ್ರಿಯಾಂಕಾ ಚೋಪ್ರಾ ಅವರ ಸಂಬಂಧಿ. ಹಾಗಂತ ಬಾಲಿವುಡ್​ನಲ್ಲಿ ಪ್ರಿಯಾಂಕಾ (Priyanka Chopra) ರೀತಿ ಯಶಸ್ಸು ಪಡೆಯಲು ಮನ್ನಾರಾಗೆ ಸಾಧ್ಯವಾಗಿಲ್ಲ. ಇದ್ದಿದ್ದರಲ್ಲೇ ಅವರು ತೃಪ್ತಿಪಟ್ಟುಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಮನ್ನಾರಾ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ. ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಒಂದೊಂದು ಅವಕಾಶವನ್ನು ಪಡೆದುಕೊಳ್ಳಲು ಅವರು ಬಹಳ ಕಷ್ಟಪಟ್ಟಿದ್ದಾರೆ. ಅಚ್ಚರಿ ಏನೆಂದರೆ ಮುಖದ ಮೇಲಿನ ಮೊಡವೆ (Pimples) ಕಾರಣಕ್ಕೆ ಅವರಿಗೆ ಒಂದು ದೊಡ್ಡ ಅವಕಾಶ ತಪ್ಪಿ ಹೋಗಿತ್ತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನ್ನಾರಾ ಚೋಪ್ರಾ ಅವರು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಕೆಲವು ನಟಿಯರಿಗೆ ಫೇರ್​ನೆಸ್​ ಕ್ರೀಮ್​ ಜಾಹೀರಾತಿನಲ್ಲಿ ನಟಿಸಲು ಇಷ್ಟ ಇರುವುದಿಲ್ಲ. ಆದರೆ ಮನ್ನಾರಾ ಚೋಪ್ರಾ ಅವರು ಹಾಗಲ್ಲ. ಅಂಥ ಜಾಹೀರಾತಿನಲ್ಲಿ ನಟಿಸಲು ಅವರಿಗೆ ಬಹಳ ಆಸಕ್ತಿ ಇತ್ತು. ಅದಕ್ಕಾಗಿ ಅವರು ಹಲವು ಸುತ್ತುಗಳ ಆಡಿಷನ್​ ಕೂಡ ನೀಡಿದ್ದರು. ಕೊನೇ ಹಂತದವರೆಗೂ ಅವರು ಸೆಲೆಕ್ಟ್​ ಆಗಿದ್ದರು. ಆದರೆ ಇನ್ನೇನು ಶೂಟಿಂಗ್​ ಮಾಡಬೇಕು ಎಂಬಷ್ಟರಲ್ಲಿ ಅವರಿಗೆ ಮೊಡವೆ ಆಯಿತು!

‘ಶೂಟಿಂಗ್​ ಹಿಂದಿನ ರಾತ್ರಿ ನನ್ನ ಹಣೆಯ ಮೇಲೆ ಮೊಡವೆ ಆಯಿತು. ಬೆಳಗ್ಗೆ ನಾಲ್ಕು ಗಂಟೆಗೆ ನಾನು ಜಾಹೀರಾತಿನ ಚಿತ್ರೀಕರಣಕ್ಕೆ ಹೋದಾಗ ಮೊಡವೆ ಜಾಸ್ತಿ ಆಗಿತ್ತು. ಅದನ್ನು ಮರೆಮಾಚಲು ಅವರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮನೆಗೆ ವಾಪಸ್​ ಹೋಗುವಂತೆ ಹೇಳಿದರು. ಅದರಿಂದ ನನಗೆ ತುಂಬ ಬೇಸರ ಆಯಿತು. ಅದು ನನ್ನ ಜೀವನದಲ್ಲಿ ಮೊದಲ ರಿಜೆಕ್ಷನ್​’ ಎಂದು ಮನ್ನಾರಾ ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ: ಪ್ರೆಗ್ನೆಂಟ್​ ಎಂದು ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಪರಿಣೀತಿ ಚೋಪ್ರಾ

ಆ ದಿನ ಮನೆಗೆ ಬಂದು ಮನ್ನಾರಾ ಚೋಪ್ರಾ ಅವರು ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಮೊಡವೆಯ ಕಾರಣದಿಂದ ದೊಡ್ಡ ಅವಕಾಶ ಕೈತಪ್ಪಿ ಹೋಗಿದ್ದಕ್ಕೆ ಅವರಿಗೆ ತುಂಬ ಬೇಸರ ಆಗಿತ್ತು. ತೆಲುಗು, ತಮಿಳು, ಹಿಂದಿ, ಕನ್ನಡ, ಪಂಜಾಬಿ ಸಿನಿಮಾಗಳಲ್ಲಿ ಮನ್ನಾರಾ ಚೋಪ್ರಾ ನಟಿಸಿದ್ದಾರೆ. ‘ಬಿಗ್​ ಬಾಸ್​ 17’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಆ ಶೋನಲ್ಲಿ ಅವರು 2ನೇ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಮನ್ನಾರಾ ಚೋಪ್ರಾ ಅವರಿಗೆ ಈಗ 33 ವರ್ಷ ವಯಸ್ಸು. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಸದ್ಯಕ್ಕೆ 38 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್