ಆಮಿರ್ ಖಾನ್ ಜಿಮ್ ಮಾಡ್ತಾರೆ ಅನ್ನೋದೇ ಸುಳ್ಳು; ಫಿಟ್ನೆಸ್​ಗೆ ನಟ ಮಾಡೋದೇನು?

ಇತ್ತೀಚೆಗೆ ಆಮಿರ್ ಖಾನ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘59ನೇ ವಯಸ್ಸಿನಲ್ಲೂ ಇಷ್ಟು ಯಂಗ್ ಆಗಿ ಕಾಣೋಕೆ ಕಾರಣ ಏನು’ ಎಂದು ಪ್ರಶ್ನಿಸಲಾಗಿದೆ

ಆಮಿರ್ ಖಾನ್ ಜಿಮ್ ಮಾಡ್ತಾರೆ ಅನ್ನೋದೇ ಸುಳ್ಳು; ಫಿಟ್ನೆಸ್​ಗೆ ನಟ ಮಾಡೋದೇನು?
ಆಮಿರ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Apr 30, 2024 | 2:19 PM

ಆಮಿರ್ ಖಾನ್​ಗೆ (Aamir Khan) ಈಗ 59 ವರ್ಷ. ಈಗಲೂ ಅವರು ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಆಮಿರ್ ಖಾನ್ ಅವರು ಇಷ್ಟು ಯಂಗ್ ಆಗಿ ಕಾಣೋಕೆ ಅವರು ಫಾಲೋ ಮಾಡೋ ಫುಡ್, ವರ್ಕೌಟ್ ಕಾರಣ ಎಂದು ಎಲ್ಲರೂ ನಂಬಿದ್ದರು. ಆದರೆ, ಅವರು ಇದನ್ನು ಸುಳ್ಳು ಎಂದಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಸಿನಿಮಾ ಇದ್ದಾಗ ಮಾತ್ರ ಆಮಿರ್ ಖಾನ್ ಅವರು ವರ್ಕೌಟ್ ಮಾಡುತ್ತಾರೆ. ಉಳಿದ ಸಂದರ್ಭದಲ್ಲಿ ಈ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲವಂತೆ.

ಇತ್ತೀಚೆಗೆ ಆಮಿರ್ ಖಾನ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘59ನೇ ವಯಸ್ಸಿನಲ್ಲೂ ಇಷ್ಟು ಯಂಗ್ ಆಗಿ ಕಾಣೋಕೆ ಕಾರಣ ಏನು’ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಅವರ ಉತ್ತರ ಅನೇಕರಿಗೆ ಅಚ್ಚರಿ ತಂದಿದೆ.

‘ಅಪ್ಪನ ಜೀನ್ ಚೆನ್ನಾಗಿತ್ತು. ನನಗೆ ಯಾವುದೇ ಕ್ರೆಡಿಟ್ ಬೇಡ. ನಾನು ವರ್ಕೌಟ್ ಮಾಡಲ್ಲ. ಮುಖಕ್ಕೆ ಯಾವುದೇ ಕ್ರೀಮ್ ಹಾಕಲ್ಲ. ನಾನು ನಟನಾದಮೇಲೆ ಶಾಂಪೂ ಬಗ್ಗೆ ಗೊತ್ತಾಗಿದ್ದು. ಅಲ್ಲಿಯವರೆಗೆ ತಲೆ ಕೂದಲಿಗೂ ಸೋಪ್ ಹಾಕುತ್ತಿದ್ದೆ. ನಾನು ಉತ್ತಮವಾಗಿ ಕಾಣಲಿ ಎಂದು ಏನನ್ನೂ ಮಾಡುವುದಿಲ್ಲ. ಸಿನಿಮಾ ಬಂದಾಗ ವರ್ಕೌಟ್ ಮಾಡುತ್ತೇನೆ. ನಾನು ಸಖತ್ ಲೇಜಿ’ ಎಂದಿದ್ದಾರೆ ಆಮಿರ್ ಖಾನ್.

ಇದನ್ನೂ ಓದಿ: ‘ನನ್ನ ಅಕ್ಕ ಪಠಾಣ್ ಸಿನಿಮಾದಲ್ಲಿ ನಟಿಸಿದ್ದರು’; ಅಚ್ಚರಿಯ ವಿಚಾರ ಹೊರ ಹಾಕಿದ ಆಮಿರ್ ಖಾನ್

‘3 ಈಡಿಯಟ್ಸ್’ ಮಾಡುವಾಗ ಆಮಿರ್ ಖಾನ್ ವಯಸ್ಸು 44. ಅವರು ಸಿನಿಮಾದಲ್ಲಿ 18 ವರ್ಷದ ಕಾಲೇಜು ಹುಡುಗನ ಪಾತ್ರ ಮಾಡಬೇಕಿತ್ತು. ಜನರು ತಮ್ಮನ್ನು ನೋಡಿ ನಗಬಹುದು ಎಂದು ಅವರು ಅಂದುಕೊಂಡಿದ್ದರು. ‘ನನಗೆ 3 ಈಡಿಯಟ್ಸ್ ಮಾಡುವ ಉದ್ದೇಶ ಇರಲಿಲ್ಲ. 44 ವರ್ಷದ ವ್ಯಕ್ತಿ 18 ವರ್ಷದ ಕಾಲೇಜು ಹುಡುನ ಪಾತ್ರ ಮಾಡುತ್ತಾನೆ ಎಂದಾಗ ಜನರು ನಗುತ್ತಾರೆ ಎಂದುಕೊಂಡಿದ್ದೆ. ಮೂವರು ಯಂಗ್ ಹೀರೋಗಳನ್ನು ತೆಗೆದುಕೊಳ್ಳುವಂತೆ ರಾಜ್​ಕುಮಾರ್ ಹಿರಾನಿಗೆ ಹೇಳಿದ್ದೆ. ಆದರೆ, ಕಥೆ ಕೇಳಿದ ಬಳಿಕ ಪಾತ್ರ ಮಾಡಬೇಕು ಎನಿಸಿತು’ ಎಂದಿದ್ದಾರೆ ಆಮಿರ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ