‘ನನ್ನ ಅಕ್ಕ ಪಠಾಣ್ ಸಿನಿಮಾದಲ್ಲಿ ನಟಿಸಿದ್ದರು’; ಅಚ್ಚರಿಯ ವಿಚಾರ ಹೊರ ಹಾಕಿದ ಆಮಿರ್ ಖಾನ್
ನೆಟ್ಫ್ಲಿಕ್ಸ್ನಲ್ಲಿ ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಆಮಿರ್ ಖಾನ್ ಅವರು ಅತಿಥಿ ಆಗಿ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಸಹೋದರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಪಠಾಣ್’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಯಾವುದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ನಟ ಆಮಿರ್ ಖಾನ್ (Aamir Khan) ಅವರು ಇತ್ತೀಚೆಗೆ ನಟನೆಯಿಂದ ದೂರವೇ ಇದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಬದಲಿಗೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಂದರ್ಭದಲ್ಲಿ ಅವರ ಅಕ್ಕ ನಿಖತ್ ಖಾನ್ ಹೆಗ್ಡೆ ಅವರು ಸಿನಿಮಾದಲ್ಲಿ ನಟಿಸಿದ್ದರು. ಈ ವಿಚಾರವನ್ನು ಕಪಿಲ್ ಶರ್ಮಾ ಶೋನಲ್ಲಿ ಆಮಿರ್ ಖಾನ್ ಅವರು ಉಲ್ಲೇಖ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೆಟ್ಫ್ಲಿಕ್ಸ್ನಲ್ಲಿ ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಆಮಿರ್ ಖಾನ್ ಅವರು ಅತಿಥಿ ಆಗಿ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಸಹೋದರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನನ್ನ ಅಕ್ಕ ನಿಖತ್ ಅವರು ಪಠಾಣ್ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದಿನಿಂದ ನೀವು ಪಠಾಣ್ ಎಂದು ಶಾರುಖ್ಗೆ ಒಂದು ದಾರ ಕಟ್ಟುತ್ತಾರೆ. ಅದು ನನ್ನ ಸಹೋದರಿ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಆಮಿರ್. ಈ ವೇಳೆ ಅಲ್ಲಿ ನಿಖತ್ ಕೂಡ ಇದ್ದರು. ಅವರು ಖುಷಿಯಿಂದ ಎದ್ದು ಕೈಮುಗಿದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧವೇ ದೂರು ದಾಖಲಿಸಿದ ನಟ ಆಮಿರ್ ಖಾನ್: ಆಗಿದ್ದೇನು?
‘ಪಠಾಣ್’ ಸಿನಿಮಾ 2023ರ ಜನವರಿ 25ರಂದು ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಮೇಲೆ ತೀವ್ರ ದಾಳಿ ನಡೆದು ಒಂದು ಪ್ರದೇಶಕ್ಕೆ ಬರುತ್ತಾರೆ. ಈ ಪ್ರದೇಶದಲ್ಲಿ ಅವರಿಗೆ ಚಿಕಿತ್ಸೆ ಸಿಗುತ್ತದೆ. ಆ ಸ್ಥಳದಲ್ಲೇ ಶಾರುಖ್ ಖಾನ್ಗೆ ಪಠಾಣ್ ಎನ್ನುವ ಟೈಟಲ್ ಸಿಗುತ್ತದೆ.
View this post on Instagram
ಸದ್ಯ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಜೆನಿಲಿಯಾ ಡಿಸೋಜಾ ನಾಯಕಿ. ಒಂದು ಸಿಂಡ್ರೋಮ್ ಬಗ್ಗೆ ಈ ಸಿನಿಮಾ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Mon, 29 April 24