- Kannada News Photo gallery Priyanka Chopra and Madhur Bhandarkar meet in LA to discuss new movie Entertainment News in Kannada
ಅಮೆರಿಕದಲ್ಲಿ ಪ್ರಿಯಾಂಕಾ ಚೋಪ್ರಾ ಜತೆ ‘ಫ್ಯಾಷನ್’ ನಿರ್ದೇಶಕನ ಮಾತುಕತೆ; ಸೀಕ್ವೆಲ್ ಗುಮಾನಿ
ಖ್ಯಾತ ನಿರ್ದೇಶಕ ಮಧುರ್ ಭಂಡರ್ಕರ್ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಪ್ರಿಯಾಂಕಾ ಚೋಪ್ರಾ ಜೊತೆ ಮಾತುಕಥೆ ನಡೆಸಿದ್ದಾರೆ. ‘ಫ್ಯಾಷನ್ 2’ ಸಿನಿಮಾ ಸಲುವಾಗಿ ಈ ಭೇಟಿ ನಡೆದಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಈ ಬಗ್ಗೆ ಮಧುರ್ ಭಂಡರ್ಕರ್ ಅವರು ಇನ್ನಷ್ಟೇ ಹೆಚ್ಚಿನ ಮಾಹಿತಿ ಬಿಟ್ಟುಕೊಡುವುದು ಬಾಕಿ ಇದೆ.
Updated on: Aug 21, 2024 | 10:48 PM

ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕದಲ್ಲಿ ವಾಸವಾಗಿದ್ದಾರೆ. ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೇ ಹಲವು ವರ್ಷಗಳು ಆಗಿವೆ. ಆದಷ್ಟು ಬೇಗ ಅವರು ಹಿಂದಿ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಆಸೆ.

ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಮನೆ ಇದೆ. ಬಾಲಿವುಡ್ನ ಖ್ಯಾತ ಡೈರೆಕ್ಟರ್ ಮಧುರ್ ಭಂಡರ್ಕರ್ ಅವರು ಅಲ್ಲಿಗೆ ಹೋಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಭೇಟಿ ಮಾಡಿದ್ದಾರೆ. ಆ ಫೋಟೋ ಹಂಚಿಕೊಂಡ್ದಾರೆ.

2008ರಲ್ಲಿ ಫ್ಯಾಷನ್ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಮಧುರ್ ಭಂಡರ್ಕರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಈಗ ಅವರ ಕಾಂಬಿನೇಷನ್ನಲ್ಲಿ ‘ಫ್ಯಾಷನ್ 2’ ಬರಲಿದೆ ಎಂದು ಫ್ಯಾನ್ಸ್ ಗುಮಾನಿ ವ್ಯಕ್ತಪಡಿಸಿದ್ದಾರೆ.

‘ಪ್ರಿಯಾಂಕಾ ಚೋಪ್ರಾ ಅವರ ಭವ್ಯವಾದ ನಿವಾಸದಲ್ಲಿ ಮಾತುಕಥೆ ನಡೆಸಿದ್ದು ಖುಷಿ ನೀಡಿತು’ ಎಂದು ಮಧುರ್ ಭಂಡರ್ಕರ್ ಅವರು ಹೇಳಿದ್ದಾರೆ. ಆದರೆ ಅದು ಯಾವ ಸಿನಿಮಾದ ಸಲುವಾಗಿ ನಡೆದ ಮಾತುಕಥೆ ಎಂಬುದನ್ನು ಅವರು ರಿವೀಲ್ ಮಾಡಿಲ್ಲ.

ಹಿಂದಿ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸುವುದು ಕಡಿಮೆ ಆಗಿದ್ದರೂ ಕೂಡ ಬಾಲಿವುಡ್ ಮಂದಿ ಜೊತೆ ಅವರು ಸಂಪರ್ಕ ಇಟ್ಟುಕೊಂಡಿದ್ದಾರೆ. ಮಧುರ್ ಭಂಡರ್ಕರ್ ಅವರನ್ನು ಭೇಟಿ ಮಾಡಿರುವುದೇ ಅದಕ್ಕೆ ಉದಾಹರಣೆ.
























